ಕರ್ನಾಟಕ

karnataka

ETV Bharat / state

ಕೆಮಿಕಲ್‌ ಸೇಂದಿ ತಯಾರಿಸುತ್ತಿದ್ದ ಮನೆಯ ಮೇಲೆ ದಾಳಿ: ಸೇಂದಿ ಜಪ್ತಿ, ಮೂವರು ವಶಕ್ಕೆ - CHEMICAL SENDHI SEIZED

ಕೆಮಿಕಲ್‌ ಸೇಂದಿ ತಯಾರಿಸುತ್ತಿದ್ದ ಮನೆಯ ಮೇಲೆ ದಾಳಿ ನಡೆಸಿದ ಅಬಕಾರಿ ಪೊಲೀಸರು, ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Excise police raid house where chemical sendhi was being manufactured
ಕೆಮಿಕಲ್‌ ಸೇಂದಿ ತಯಾರಿಸುತ್ತಿದ್ದ ಮನೆಯ ಮೇಲೆ ದಾಳಿ ನಡೆಸಿದ ಅಬಕಾರಿ ಪೊಲೀಸರು (ETV Bharat)

By ETV Bharat Karnataka Team

Published : Jan 16, 2025, 1:15 PM IST

ರಾಯಚೂರು:ನಗರದಲ್ಲಿಕೆಮಿಕಲ್‌ ಸೇಂದಿ ತಯಾರಿಸುತ್ತಿದ್ದ ಮನೆಯ ಮೇಲೆ ದಾಳಿ ನಡೆಸಿದ ಅಬಕಾರಿ ಪೊಲೀಸರು, ನೂರಾರು ಲೀಟರ್ ಸೇಂದಿಯನ್ನು ವಶಪಡಿಸಿಕೊಂಡ ಘಟನೆ ನಡೆದಿದೆ. ನಗರದ ಮಂಗಳವಾರ ಪೇಟೆ ಬಡಾವಣೆಯಲ್ಲಿ ಈ ದಾಳಿ ನಡೆದಿದೆ.

ರವಿ, ವಿಶ್ವನಾಥ, ಮಾರೆಪ್ಪ ಎಂಬುವರ ಮನೆಗಳ ಮೇಲೆ ದಾಳಿ ನಡೆಸುವ ಮೂಲಕ ಶೋಧ ಮಾಡಿದ್ದು, ಈ ವೇಳೆ ಕೆಮಿಕಲ್ ಸೇಂದಿ ಪತ್ತೆಯಾಗಿದೆ. ನೀರಿನ ಬಾಟಲ್​ನಲ್ಲಿ ತುಂಬಿ ಇಡಲಾಗಿದ್ದ ಸುಮಾರು 300 ಲೀಟರ್ ಕೆಮಿಕಲ್ ಸೇಂದಿ ಕಂಡು ಬಂದಿದ್ದು, ಸೇಂದಿ ಜಪ್ತಿ ಸಹಿತ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಬಕಾರಿ ಪೊಲೀಸರು ತಿಳಿಸಿದ್ದಾರೆ.

ಕೆಮಿಕಲ್‌ ಸೇಂದಿ ತಯಾರಿಸುತ್ತಿದ್ದ ಮನೆಯ ಮೇಲೆ ದಾಳಿ ನಡೆಸಿದ ಅಬಕಾರಿ ಪೊಲೀಸರು (ETV Bharat)

ಅಕ್ರಮ‌ ಸೇಂದಿ ಮಾರಾಟಕ್ಕೆ ಬ್ರೇಕ್ ಹಾಕಲು ಅಬಕಾರಿ ಪೊಲೀಸರು ನಿರಂತರ ಪ್ರಯತ್ನ ಪಟ್ಟರೂ, ಸಂಪೂರ್ಣವಾಗಿ ತಡೆಯಲು ಸಾಧ್ಯವಾಗಿಲ್ಲ. ನಗರದ ಅಲ್ಲಲ್ಲಿ ಕಂಡು ಬರುತ್ತಿದೆ. ಸೇಂದಿಯನ್ನು ಸಂಪೂರ್ಣ ಮಟ್ಟ ಹಾಕುವಂತೆ ಸಾರ್ವಜನಿಕರು ಇದೇ ವೇಳೆ ಒತ್ತಾಯಿಸಿರು.

ಇದನ್ನೂ ಓದಿ:68 ಜನರ ಬಲಿ ಪಡೆದ ಕಲ್ಲಕುರಿಚಿ ಕಳ್ಳಭಟ್ಟಿ ದುರಂತದ ತನಿಖೆ ಸಿಬಿಐಗೆ ಹಸ್ತಾಂತರ - KALLAKURICHI HOOCH TRAGEDY

ABOUT THE AUTHOR

...view details