ಕರ್ನಾಟಕ

karnataka

ETV Bharat / state

ಅಬಕಾರಿ ಅಧಿಕಾರಿಗಳ ದಾಳಿ : ಗಾಂಜಾ ಬೀಜ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ - GANJA SEEDS SELLING CASE

ಗಾಂಜಾ ಬೀಜ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ಮಾಡಿರುವ ಅಬಕಾರಿ ಅಧಿಕಾರಿಗಳು, ಆತನನ್ನು ಬಂಧಿಸಿ 270ಗ್ರಾಂ ಒಣ ಗಾಂಜಾ ಬೀಜವನ್ನು ಜಪ್ತಿ ಮಾಡಿದ್ದಾರೆ.

GANJA SELLING
ಬಂಧಿತ ಆರೋಪಿ ಜೊತೆಗೆ ಅಬಕಾರಿ ಅಧಿಕಾರಿಗಳ ತಂಡ (ETV Bharat)

By ETV Bharat Karnataka Team

Published : Jan 28, 2025, 5:01 PM IST

ವಿಜಯನಗರ:ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಸಕಲಾಪುರಹಟ್ಟಿ ಕ್ರಾಸ್ ಬಳಿ ಗಾಂಜಾ ಬೀಜ ಮಾರಾಟ ಮಾಡಲು ತೆರಳುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ಮಾಡಿದ ಅಬಕಾರಿ ಇಲಾಖೆ ಸಿಬ್ಬಂದಿ ಆತನನ್ನು ಬಂಧಿಸಿ, ಅವನ ಬಳಿ ಇದ್ದ 270ಗ್ರಾಂ ಒಣ ಗಾಂಜಾ ಬೀಜವನ್ನು ಜಪ್ತಿ ಮಾಡಿದ್ದಾರೆ.

ಸಕಲಾಪುರಹಟ್ಟಿಯ ಟಿ. ಬಸವರಾಜ ಬಂಧಿತ ಆರೋಪಿ. ಈತನನ್ನು ಈಗಾಗಲೇ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ ಬಸವರಾಜನು 270ಗ್ರಾಂನಷ್ಟು ಗಾಂಜಾದ ಒಣ ಬೀಜವನ್ನು ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡಲೆಂದು ಸಕಲಾಪುರಹಟ್ಟಿಯಿಂದ ಕಾನಾಹೊಸಹಳ್ಳಿ ಕಡೆಗೆ ತೆರಳುತ್ತಿದ್ದ. ಈ ವೇಳೆ ಅಬಕಾರಿ ಉಪಾಧೀಕ್ಷಕ ಆಂಜನೇಯ, ಅಬಕಾರಿ ನಿರೀಕ್ಷಿಕ ಎ.ಜಿ. ಅಂಬಣ್ಣ ಅವರ ನೇತೃತ್ವದಲ್ಲಿ ಕೂಡ್ಲಿಗಿ ಅಬಕಾರಿ ನಿರೀಕ್ಷಿಕ ಬಸವರಾಜ ಹಾಗೂ ಸಿಬ್ಬಂದಿ ನಾಗರಾಜ ಮತ್ತು ರಾಘವೇಂದ್ರ ಇವರ ತಂಡ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದೆ.

ಬಂಧಿತನ ಬಳಿ ಇದ್ದ 270ಗ್ರಾಂ ಒಣ ಗಾಂಜಾ ಬೀಜವನ್ನು ಜಪ್ತಿ ಮಾಡಲಾಗಿದೆ. ಈ ಬಗ್ಗೆ ಕೂಡ್ಲಿಗಿ ಅಬಕಾರಿ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಈಗಾಗಲೇ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ಕೆಮಿಕಲ್‌ ಸೇಂದಿ ತಯಾರಿಸುತ್ತಿದ್ದ ಮನೆಯ ಮೇಲೆ ದಾಳಿ: ಸೇಂದಿ ಜಪ್ತಿ, ಮೂವರು ವಶಕ್ಕೆ - CHEMICAL SENDHI SEIZED

ABOUT THE AUTHOR

...view details