ಕರ್ನಾಟಕ

karnataka

ETV Bharat / state

ಮಾಜಿ ಸಚಿವ ಬಿಸಿ ಪಾಟೀಲ್ ಅಳಿಯ ವಿಷ ಸೇವಿಸಿ ಆತ್ಮಹತ್ಯೆ: ದಾವಣಗೆರೆ SP ಮಾಹಿತಿ - Pratap Kumar Suicide - PRATAP KUMAR SUICIDE

ಮಾಜಿ ಸಚಿವ ಬಿಸಿ ಪಾಟೀಲ್ ಅಳಿಯ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ದಾವಣಗೆರೆ ಎಸ್​​​​ಪಿ ಮಾಹಿತಿ ನೀಡಿದ್ದಾರೆ.

PRATAP KUMAR SUICIDE
ಆತ್ಮಹತ್ಯೆಗೆ ಶರಣಾದ ಪ್ರತಾಪ್ ಕುಮಾರ ಕೆಜಿ (ETV Bharat)

By ETV Bharat Karnataka Team

Published : Jul 8, 2024, 6:41 PM IST

Updated : Jul 8, 2024, 7:25 PM IST

ದಾವಣಗೆರೆ ಎಸ್​​​ಪಿ ಉಮಾ ಪ್ರಶಾಂತ್ ಮಾಹಿತಿ (ETV Bharat)

ದಾವಣಗೆರೆ:ಮಾಜಿ ಸಚಿವ ಬಿಸಿ ಪಾಟೀಲ್ ಅವರ ಅಳಿಯ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಪ್ರತಾಪ್ ಕುಮಾರ ಕೆಜಿ (41) ವಿಷ ಸೇವಿಸಿ ಆತ್ಯಹತ್ಯೆಗೆ ಶರಣಾದವರು.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ಅರಣ್ಯ ಪ್ರದೇಶದಲ್ಲಿ ರಸ್ತೆ ಬದಿ ಕಾರು ನಿಲ್ಲಿಸಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿರುವುದಾಗಿ ಪೊಲೀಸ್​ ಮೂಲಗಳು ತಿಳಿಸಿವೆ. ವಿಷಯ ತಿಳಿದು ತಕ್ಷಣ ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲು‌ ಮಾಡಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದ್ದುದರಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಪ್ರತಾಪ್ ಕುಮಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತ ಪ್ರತಾಪ್ ಕುಮಾರ್ ಮಾಜಿ ಸಚಿವ ಬಿಸಿ ಪಾಟೀಲ್ ಪುತ್ರಿಯ ಪತಿ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು‌ ಬಂದಿಲ್ಲ. ಹೊನ್ನಾಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ದಾವಣಗೆರೆ ಎಸ್ಪಿ ಮಾಹಿತಿ:ಬಿಸಿ ಪಾಟೀಲ್ ಅಳಿಯ ಪ್ರತಾಪ್‌ ಕುಮಾರ್ ಆತ್ಮಹತ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ಎಸ್​​​ಪಿ ಉಮಾ ಪ್ರಶಾಂತ್ ಮಾಹಿತಿ ನೀಡಿದ್ದಾರೆ.

'ಹೊನ್ನಾಳಿ ಸಮೀಪದ ಫಾರೆಸ್ಟ್ ಬಳಿ ಕಾರಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಮಹಿತಿ ಇದೆ. 2.30 ಗಂಟೆಗೆ ಸುಮಾರಿಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಕೋಮಾರನಹಳ್ಳಿ ಅರಕೆರೆ ಸಮೀಪ ಕಾರಿನಲ್ಲಿ ವಿಷ ಸೇವಿಸಿರುವುದಾಗಿ ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ. ತಕ್ಷಣ ಪ್ರತಾಪ್ ಕುಮಾರ್ ಅವರನ್ನು ಹೊನ್ನಾಳಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಪ್ರಾಥಮಿಕ‌ ಚಿಕಿತ್ಸೆ ಕೊಡಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಶಿವಮೊಗ್ಗ ಮುಖಾಂತರ ಹೊನ್ನಾಳಿಗೆ ಆಗಮಿಸಿ ನಂತರ ಬಸವಾಪಟ್ಟಣದತ್ತ ಹೋಗುತ್ತಿದ್ದರು ಎಂದು ತಿಳಿದು ಬಂದಿದೆ.

ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುವುದು. ಪ್ರತಾಪ್ ಅವರ ಸಹೋದರ ಪ್ರಭು ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಈ ವಿಚಾರ ತಿಳಿದುಬಂದಿದೆ. ‌ಪ್ರತಾಪ್​​ ಕುಮಾರ್ ಅವರು ಒಬ್ಬರೆ ಕಾರಿನಲ್ಲಿ ಇದ್ದರು. ಸದ್ಯದ ಮಾಹಿತಿಯಂತೆ ಕತ್ತಲೆಗೆರೆಯಲ್ಲಿ ಶವಸಂಸ್ಕಾರ ನಡೆಸಲಾಗುವುದು. ವೈಯಕ್ತಿಕ ಕಾರಣದಿಂದ ವಿಷ ಸೇವೆನೆ ಮಾಡಿದ್ದಾರೆ ಎಂಬ ಮಾಹಿತಿ ಇದೆ. ಯಾವುದೇ ಡೆತ್‌ ನೋಟ್ ಸಿಕ್ಕಿಲ್ಲ. ಪ್ರಕರಣ ದಾಖಲಾದ ನಂತರ ಮುಂದಿನ ತನಿಖೆ ನಡೆದು ತಿಳಿದು ಬರಲಿದೆ' ಎಂದಿದ್ದಾರೆ.

ಇದನ್ನೂ ಓದಿ: ಷೇರು ಮಾರುಕಟ್ಟೆಯಲ್ಲಿ ನಷ್ಟ; ಕುಮಾರಧಾರ ನದಿಗೆ ಹಾರಿದ, ಕೊನೆಗೆ! - Suicide Attempt

Last Updated : Jul 8, 2024, 7:25 PM IST

ABOUT THE AUTHOR

...view details