ಮೈಸೂರು:ಹೆಚ್ಎಂಪಿವಿ ಸೋಂಕು ಎಂದರೇನು? ಅದರ ಗುಣಲಕ್ಷಣಗಳೇನು? ಇದೊಂದು ಮಾರಣಾಂತಿಕ ವೈರಸ್ ಆಗಿದೆಯಾ? ಅದಕ್ಕೆ ಚಿಕಿತ್ಸೆ ಹೇಗೆ ಪಡೆದುಕೊಳ್ಳಬೇಕು ಎಂಬ ಬಗ್ಗೆ ತಜ್ಞ ವೈದ್ಯರಾದ ಡಾ. ಸತೀಶ್ ಕುಮಾರ್ ಅವರು 'ಈಟಿವಿ ಭಾರತ' ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ. ಅದರ ಸಂಪೂರ್ಣ ವಿವರ ಇಲ್ಲಿದೆ.
ಡಾ.ಸತೀಶ್ ಕುಮಾರ್ ಮಾತನಾಡಿ, ''ಹೆಚ್ಎಂಪಿವಿ ಎಂದರೆ ಹ್ಯೂಮನ್ ಮೇಟಾನಿಮೋವೈರಸ್ (human metapneumovirus) ಎಂದರ್ಥ. ಇದು ಹೊಸ ವೈರಸ್ ಅಲ್ಲ. ಬಹಳ ವರ್ಷಗಳಿಂದಲೂ ಇದೆ. ಕೋವಿಡ್ ವೈರಸ್ನಂತೆ ಭಯಾಂಕರ ಅಲ್ಲ. ಸಾಮಾನ್ಯವಾಗಿ ಚಳಿಗಾಲದಲ್ಲಿ ಡಿಸೆಂಬರ್ನಿಂದ ಮಾರ್ಚ್ವರೆಗೆ ಈ ಸೋಂಕು ಎಲ್ಲಾ ವಯಸ್ಸಿನವರಿಗೂ ಗಾಳಿಯಲ್ಲಿ ಹರಡುತ್ತದೆ'' ಎಂದು ತಿಳಿಸಿದರು.
ಡಾ.ಸತೀಶ್ ಕುಮಾರ್ (ETV Bharat) ''ಜ್ವರ, ಕೆಮ್ಮು, ನೆಗಡಿಯು ಈ ವೈರಸ್ನ ಗುಣಲಕ್ಷಣಗಳಾಗಿವೆ. ಈ ವೈರಸ್ಗೆ ಸೂಕ್ತ ಚಿಕಿತ್ಸೆ ಇದೆ. ಮೂರ್ನಾಲ್ಕು ದಿನಗಳಲ್ಲಿ ಸೋಂಕು ವಾಸಿಯಾಗುತ್ತದೆ. ಯಾರೂ ಗಾಬರಿಯಾಗುವ ಅವಶ್ಯಕತೆ ಇಲ್ಲ'' ಎಂದರು.
ಇದನ್ನೂ ಓದಿ:ಎಚ್ಎಂಪಿವಿ ಸೋಂಕು: ರಾಜ್ಯ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ
''ಕೋವಿಡ್ ರೀತಿ ಗಾಬರಿಯಾಗುವಂತಹ ಅಗತ್ಯ ಇಲ್ಲ. ಎಮರ್ಜೆನ್ಸಿ ಅಥವಾ ಲಾಕ್ಡೌನ್ ಏನೂ ಆಗುವುದಿಲ್ಲ. ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಅಷ್ಟೇ. ಉತ್ತಮ ಆಹಾರ, ಹೆಚ್ಚು ನೀರು ಸೇವನೆ ಮಾಡಬೇಕು ಎಂದು ಡಾ. ಸತೀಶ್ ಕುಮಾರ್ ಸಲಹೆ ನೀಡಿದರು.
ಇದನ್ನೂ ಓದಿ:ದೇಶದಲ್ಲಿ 5ಕ್ಕೆ ಏರಿಕೆ ಕಂಡ ಎಚ್ಎಂಪಿವಿ ಸೋಂಕಿತ ಪ್ರಕರಣಗಳ ಸಂಖ್ಯೆ: ಇದನ್ನು ತಡೆಗಟ್ಟೋದು ಹೇಗೆ?
''ವೈರಸ್ ಸೋಂಕಿತರು ಇರುವ ಮನೆಯವರು ಆಗಾಗ ಕೈ ತೊಳೆದುಕೊಳ್ಳುವುದು, ಮಾಸ್ಕ್ ಧರಿಸುವುದು ಮಾಡಬೇಕು. ಸಾಮಾನ್ಯವಾಗಿ ಕೆಮ್ಮು, ಶೀತ ಇರುವವರಿಂದ ಈ ರೋಗ ಹರಡುತ್ತದೆ. ಈ ಹೆಚ್ಎಂಪಿವಿ ವೈರಸ್‌ನಿಂದ ಸದ್ಯ ಚೀನಾದಲ್ಲಿ ಭಯಂಕರ ವಾತವಾರಣ ಇದೆ ಎಂಬುದು ಎಷ್ಟು ಸತ್ಯ ಎಂಬುದು ಗೊತ್ತಿಲ್ಲ. ನನ್ನ ಸ್ನೇಹಿತರು ಅಲ್ಲಿಯೇ ಇದ್ದಾರೆ'' ಎಂದು ಅವರು ಹೇಳಿದರು.
ಇದನ್ನೂ ಓದಿ:ವೇಗವಾಗಿ ಹರಡುತ್ತಿರುವ ಎಚ್ಎಂಪಿವಿ ವೈರಸ್: ಈ ವೈರಸ್‌ನಿಂದ ರಕ್ಷಿಸಿಕೊಳ್ಳೋದು ಹೇಗೆ?
ಇದನ್ನೂ ಓದಿ:HMP ವೈರಸ್‌ನಿಂದ ಮಕ್ಕಳ ಮೇಲೆ ಹೆಚ್ಚು ಪರಿಣಾಮ, ಈ ಲಕ್ಷಣಗಳು ಕಂಡುಬಂದರೆ ಜಾಗರೂಕರಾಗಿರಿ: ವೈದ್ಯರ ಸಲಹೆ