ಕರ್ನಾಟಕ

karnataka

ETV Bharat / state

ನಿಷ್ಕ್ರಿಯಗೊಂಡ ಕೊಳವೆಬಾವಿಗೆ ರಿಚಾರ್ಜ್; ಆಕಾಶದೆತ್ತರಕ್ಕೆ ಚಿಮ್ಮಿದ ನೀರು! ವಿಡಿಯೋ - Borewell recharge - BOREWELL RECHARGE

ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮಳೆಗಾಲದಲ್ಲಿ ಅಲ್ಪಸ್ವಲ್ಪ ಮಳೆ ಆದ್ರೆ, ಬೇಸಿಗೆ ಅವಧಿಯಲ್ಲಿ ಬೋರ್​ವೆಲ್​ಗಳ ನೀರು ಬತ್ತುವುದು ಸಾಮಾನ್ಯ. ಈ ಬಾರಿಯ ಉತ್ತಮ ಮಳೆ ರೈತರಿಗೆ ಸಮಾಧಾನ ತಂದಿದೆ. ಈ ನಡುವೆ ಅಥಣಿ ತಾಲೂಕಿನ ಅನಂತಪುರ ಗ್ರಾಮದ ರೈತರು ಕೊಳವೆಬಾವಿಗೆ ಏತ ನೀರಾವರಿ ನೀರನ್ನು ಹರಿಸಿ ಅಂತರ್ಜಲ ಮಟ್ಟ ಹೆಚ್ಚಿಸಿದ್ದಾರೆ. ಹೀಗಾಗಿ ಬೋರ್​ವೆಲ್​ನಲ್ಲಿ ನೀರು ಆಕಾಶದೆತ್ತರಕ್ಕೆ ಚಿಮ್ಮಿದೆ.

BOREWELL
ಕೊಳವೆ ಬಾವಿ (ETV Bharat)

By ETV Bharat Karnataka Team

Published : Aug 28, 2024, 9:28 PM IST

ನಿಷ್ಕ್ರಿಯಗೊಂಡ ಕೊಳವೆಬಾವಿಗೆ ರಿಚಾರ್ಜ್; ಆಕಾಶದೆತ್ತರಕ್ಕೆ ಚಿಮ್ಮಿದ ನೀರು! (ETV BHARAT)

ಚಿಕ್ಕೋಡಿ (ಬೆಳಗಾವಿ) : ಉತ್ತರ ಕರ್ನಾಟಕ ಭಾಗದಲ್ಲಿ ವರ್ಷದಿಂದ ವರ್ಷಕ್ಕೆ ಮಳೆಗಾಲ ಕಡಿಮೆಯಾಗಿ ಅಂತರ್ಜಲ ಮಟ್ಟ ಕುಸಿಯುತ್ತದೆ. ರೈತರು ಹಠಕ್ಕೆ ಬಿದ್ದಂತೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸಾವಿರಾರು ಅಡಿ ಬೋರ್​ವೆಲ್ ಕೊರೆಸುವುದು ಕಂಡುಬರುತ್ತದೆ. ಅನೇಕ ಬಾರಿ ಬಹುತೇಕ ಕೊಳವೆ ಬಾವಿಗಳಿಗೆ ಒಂದು ಹನಿ ನೀರು ಬಾರದೇ ರೈತರಿಗೆ ನಿರಾಸೆ ಮೂಡಿಸಿದ ಉದಾಹರಣೆಗಳಿವೆ. ಆದರೆ ಬೆಳಗಾವಿ ರೈತರು ಫೇಲಾದ ಬೋರ್​ವೆಲ್​ಗೆ ಮರು ರಿಚಾರ್ಜ್ ಮಾಡಿ 150ಕ್ಕೂ ಹೆಚ್ಚು ಕೊಳವೆ ಬಾವಿಯಲ್ಲಿ ನೀರು ಬರುವಂತೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

ಆಕಾಶದೆತ್ತರಕ್ಕೆ ಚಿಮ್ಮಿದ ನೀರು (ETV BHARAT)

ಜಿಲ್ಲೆಯ ಅಥಣಿ ತಾಲೂಕಿನ ಅನಂತಪುರ ಗ್ರಾಮದ ರೈತರು ಏತ ನೀರಾವರಿ ಯೋಜನೆಯ ನೀರನ್ನ ಹಳ್ಳದ ಮುಖಾಂತರವಾಗಿ ನಿಷ್ಕ್ರಿಯಗೊಂಡ ಕೊಳವೆ ಬಾವಿಗೆ ಹರಿಸಿದ್ದಾರೆ. ಇದರಿಂದಾಗಿ ಅದರ ಸುತ್ತಲೂ ಒಂದು ಕಿಲೋಮೀಟರ್ ದೂರದ 150ಕ್ಕೂ ಹೆಚ್ಚು ಬೋರ್​ವೆಲ್​ಗಳಿಗೆ ಸಮರ್ಪಕವಾಗಿ ನೀರು ಬರುತ್ತಿದೆ. ಕೆಲವು ಕೊಳವೆಬಾವಿಯಲ್ಲಿ 30 ಅಡಿಯಷ್ಟು ಅಂತರಕ್ಕೆ ನೀರು ಚಿಮ್ಮುತ್ತಿದೆ.

ಕಳೆದ 20 ವರ್ಷದ ಹಿಂದೆ ರೈತ ವಿಜಯ ಅಣ್ಣಪ್ಪ ಗುಜರೆ ಅವರು ಹಳ್ಳದ ಪಕ್ಕದಲ್ಲಿ 300 ಅಡಿಯ ಒಂದು ಕೊಳವೆಬಾವಿ ಕೊರೆಸಿದ್ದರು. ಅವತ್ತು ಆ ಬೋರ್​ವೆಲ್​ಗೆ ಒಳ್ಳೆ ನೀರು ಬಂದರೂ ಕ್ರಮೇಣವಾಗಿ ಹನಿ ನೀರು ಬಾರದೇ ರೈತರಲ್ಲಿ ನಿರಾಸೆ ಮೂಡಿಸಿತ್ತು.

ನಿಷ್ಕ್ರಿಯಗೊಂಡ ಕೊಳವೆಬಾವಿಗೆ ರಿಚಾರ್ಜ್ (ETV BHARAT)

ಕೊಳವೆ ಬಾವಿಯಲ್ಲಿ ಹೆಚ್ಚಿದ ನೀರು :ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ನೀರಾವರಿ ತಜ್ಞರು ಬೋರ್​ವೆಲ್ ರಿಚಾರ್ಜ್ ಬಗ್ಗೆ ನೀಡಿದ ಮಾಹಿತಿಯನ್ನು ರೈತರು ನೋಡಿದ್ದಾರೆ. ನಂತರ ಹಳ್ಳದ ದಂಡೆಯ ಪಕ್ಕದ ಕೊಳವೆಬಾವಿಗೆ ಹೆಚ್ಚುವರಿಯಾಗಿ ಹರಿದು ಬರುತ್ತಿರುವ ಏತ ನೀರಾವರಿ ಯೋಜನೆ ನೀರನ್ನು ಆ ಬೋರ್​​ವೆಲ್​ನಲ್ಲಿ ಬಿಟ್ಟಿದ್ದರಿಂದ ಒಂದೆರಡು ದಿನದಲ್ಲಿ ಅಕ್ಕಪಕ್ಕದ ಜಮೀನಿನ ಕೊಳವೆ ಬಾವಿಯಲ್ಲಿ ಗಣನೀಯವಾಗಿ ನೀರು ಹೆಚ್ಚಳವಾಗಿದೆ.

ನಿಷ್ಕ್ರಿಯಗೊಂಡ ಕೊಳವೆಬಾವಿಗೆ ರಿಚಾರ್ಜ್ (ETV BHARAT)

ಈ ಬಗ್ಗೆ ಈಟಿವಿ ಭಾರತ ಜೊತೆ ಮಾತನಾಡಿದ ರೈತ ವಿಜಯ ಅಪ್ಪಣ್ಣ ಗುಜರೆ, 'ನಾವು ಬಯಲು ಸೀಮೆಯ ಜನರು. ಈ ಭಾಗದಲ್ಲಿ ಸರ್ಕಾರ ನಮಗೆ ಯಾವುದೇ ಏತ ನೀರಾವರಿ ಯೋಜನೆ ಕಾಮಗಾರಿ ಮಾಡಿಲ್ಲ. ಇದರಿಂದ ನಾವು ಕೃಷಿ ಚಟುವಟಿಕೆಗಳಿಗೆ ನೀರು ಇಲ್ಲದೆ ಪರದಾಟ ಮಾಡುತ್ತಿದ್ದೇವೆ. ಪ್ರಕೃತಿ ನಮ್ಮ ಮೇಲೆ ಮುನಿಸಿಕೊಂಡು ಈ ಭಾಗದಲ್ಲಿ ಮಳೆಗಾಲ ಕಡಿಮೆಯಾಗಿ ಕೃಷಿ ಚಟುವಟಿಕೆ ನಿಂತಿದೆ. ಕುಡಿಯೋ ನೀರಿಗಾದರು ಬೋರ್​ವೆಲ್ ಕೊರೆಯುತ್ತಿದ್ದೇವೆ' ಎಂದಿದ್ದಾರೆ.

ಆಕಾಶದೆತ್ತರಕ್ಕೆ ಚಿಮ್ಮಿದ ನೀರು (ETV BHARAT)

ಈ ಬಗ್ಗೆ ಯುವ ರೈತ ಚೇತನ್​ ಗುಜರೆ ಮಾತನಾಡಿ, 'ಈ ಬೋರ್ವೆಲ್​ನಲ್ಲಿ ನೀರು ಹರಿಸಿದ ಪರಿಣಾಮ ನಮಗೆ ಹತ್ತು ತಿಂಗಳು ನಡೆಯುವಷ್ಟು ಭೂಮಿಯಲ್ಲಿ ನೀರು ಸಂಗ್ರಹವಾಗಿದೆ. ಮಳೆಗಾಲದಲ್ಲಿ ಕೆಲವು ಕೊಳವೆ ಬಾವಿಯಲ್ಲಿ ಗಣನೀಯವಾಗಿ ನೀರು ಹೆಚ್ಚಳವಾಗಿ ಈ ರೀತಿ ಗಂಗೆ ಮೇಲೆ ಚಿಮ್ಮುತ್ತಾಳೆ. ಸರ್ಕಾರ ಈ ಹಳ್ಳಕ್ಕೆ ಅಡ್ಡಲಾಗಿ ಒಂದು ಬಾಂದಾರ ನಿರ್ಮಾಣ ಮಾಡಿ ಕೊಡಬೇಕು. ಇದರಿಂದ ಮತ್ತಷ್ಟು ಅಂತರ ಜಲ ಹೆಚ್ಚಾಗುತ್ತದೆ' ಎಂದು ಈ ಭಾಗದ ಜನಪ್ರತಿನಿಧಿಗಳಿಗೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ

ಚಿಕ್ಕಬಳ್ಳಾಪುರ: ಗುಂಡಿ ಅಗೆದಷ್ಟು ರಾಶಿ ರಾಶಿ ಪುರಾತನ ನಾಗರಕಲ್ಲು ಪತ್ತೆ! - Ancient cobra stone found

YUVA: ಹೆಲ್ಮೆಟ್ ಧರಿಸಿದಾಗ ಕೂದಲು ಉದುರುತ್ತದೆ ಎಂಬ ಚಿಂತೆಯೇ?, ಹಾಗಾದ್ರೆ ಇದನ್ನು ಟ್ರೈ ಮಾಡಿ! - SHOULDER HELMET DESIGNED

ಕಾಕತೀಯ ರಾಜರ "ದೂದ್​ಬಾವಿ": ಹಾಲಿನಂತೆ ಬೆಳ್ಳಗಿರುವ ಈ ಬಾವಿ ನೀರು ಸೇವಿಸಿದರೆ ರೋಗಗಳೇ ಮಾಯ! - DOODH WELL IN MOLANGUR

ABOUT THE AUTHOR

...view details