ಕರ್ನಾಟಕ

karnataka

ETV Bharat / state

ಪಟಾಕಿ ಸಿಡಿತ.. ಕಣ್ಣಿನ ಗಾಯಗಳ ತುರ್ತು ಚಿಕಿತ್ಸಾ ಪ್ರಕರಣಗಳ ಏರಿಕೆ: ಯುವಜನತೆಗೆ ಹೆಚ್ಚು ತೊಂದರೆ!

ದೀಪಾವಳಿ ಆಚರಣೆ ವೇಳೆ ಪಟಾಕಿ ಸಂಬಂಧಿತ ಕಣ್ಣಿನ ಗಾಯಗಳನ್ನು ಒಳಗೊಂಡ ತುರ್ತು ಚಿಕಿತ್ಸಾ ಪ್ರಕರಣಗಳು ಗಣನೀಯವಾಗಿ ಹೆಚ್ಚಳವಾಗಿದೆ ಎಂದು ನಾರಾಯಣ ನೇತ್ರಾಲಯದ ಅಧ್ಯಕ್ಷ ಡಾ. ರೋಹಿತ್ ಶೆಟ್ಟಿ ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (ETV baharat)

By ETV Bharat Karnataka Team

Published : Nov 4, 2024, 7:25 PM IST

ಬೆಂಗಳೂರು: ಕಣ್ಣಿನ ಗಾಯಗಳನ್ನು ಒಳಗೊಂಡ ತುರ್ತು ಚಿಕಿತ್ಸಾ ಪ್ರಕರಣಗಳು ಗಣನೀಯವಾಗಿ ಹೆಚ್ಚಳವಾಗಿದೆ ಎಂದು ನಾರಾಯಣ ನೇತ್ರಾಲಯದ ಅಧ್ಯಕ್ಷ ಡಾ. ರೋಹಿತ್ ಶೆಟ್ಟಿ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಅವರು, ನಾರಾಯಣ ನೇತ್ರಾಲಯದ ವೈದ್ಯರು ಮತ್ತು ಸಿಬ್ಬಂದಿ ವರ್ಗದವರು ಬೆಂಗಳೂರಿನ ಎಲ್ಲಾ ನಾಲ್ಕು ಘಟಕಗಳಲ್ಲಿ 24x7 ಸನ್ನದ್ಧರಾಗಿದ್ದರು. ಅ.31 ರಿಂದ ನವೆಂಬರ್ 3ರವರೆಗೆ ತ್ವರಿತವಾಗಿ ಸ್ಪಂದಿಸಿ ತುರ್ತು ಸೇವೆಗಳನ್ನು ಒದಗಿಸಿದೆವು. ಇಲ್ಲಿಯವರೆಗೆ ಪಟಾಕಿ ಸಿಡಿತಕ್ಕೆ ಸಂಬಂಧಿತ ಕಣ್ಣಿನ ಗಾಯಗಳ 76 ಪ್ರಕರಣಗಳು ವರದಿಯಾಗಿದ್ದು, ಗಮನಾರ್ಹ ಸಂಖ್ಯೆಯಲ್ಲಿ ಯುವಜನರು ತೊಂದರೆಗೆ ಒಳಗಾಗಿದ್ದು ಕಂಡು ಬಂದಿದೆ ಎಂದು ಎಂದಿದ್ದಾರೆ.

ನಾರಾಯಣ ನೇತ್ರಾಲಯದಲ್ಲಿ ಒಟ್ಟು 76 ರೋಗಿಗಳು ಚಿಕೆತ್ಸೆ ಪಡೆದಿದ್ದಾರೆ. ಅದರಲ್ಲಿ ವಯಸ್ಕರು 40 ಜನರಾಗಿದ್ದಾರೆ, ಮಕ್ಕಳ ಸಂಖ್ಯೆ 36 ಆಗಿದೆ. 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಪ್ರಕರಣಗಳು 14 ಆಗಿದೆ. 10 ರಿಂದ 18 ವರ್ಷ ವಯಸ್ಸಿನವರ 22 ಪ್ರಕರಣಗಳು ದಾಖಲಾಗಿದೆ ಎಂದು ತಿಳಿಸಿದ್ದಾರೆ.

ಒಟ್ಟು 56 ಪುರುಷರಿಗೆ 20 ಹೆಣ್ಣುಮಕ್ಕಳಿಗೆ ಕಣ್ಣಿನ ತೊಂದರೆಗೆ ಒಳಪಟ್ಟಿದ್ದಾರೆ. ಪಟಾಕಿ ನೋಡುತ್ತಾ ನಿಂತ ವೇಳೆ ಗಾಯ ಮಾಡಿಕೊಂಡವರು 39 ಜನರಾಗಿದ್ದರೆ. ಸ್ವಯಂ ಗಾಯ ಉಂಟುಮಾಡಿಕೊಂಡವರು 37 ಜನರಾಗಿದ್ದಾರೆ. ವೈದ್ಯಕೀಯ ಚಿಕಿತ್ಸೆಗೆ 72 ರೋಗಿಗಳು ಒಳಗಾಗಿದ್ದರೆ, ಶಸ್ತ್ರಚಿಕಿತ್ಸೆ ಅಗತ್ಯ ಇರುವವರು 4 ರೋಗಿಗಳಾಗಿದ್ದಾರೆ ಎಂದಿದ್ದಾರೆ.

ಅಲ್ಪ ಪ್ರಮಾಣದ ಕಾರ್ನಿಯಾ ಸವೆತದಿಂದ ಹಿಡಿದು ಕಾರ್ನಿಯಾ ಕಣ್ಣಿನ ದ್ರವ ಕಡಿಮೆಯಾಗಿರುವ ಪ್ರಕರಣಗಳು ದಾಖಲಾಗಿದೆ. ಎಪಿತೀಲಿಯಲ್ ದೋಷಗಳು ಮತ್ತು ಲೆನ್ಸ್ ಡಿಸ್ಲೊಕೇಶನ್ ಒಳಗೊಂಡ ತೀವ್ರತರವಾದ ಪ್ರಕರಣಗಳು ಸಹ ಒಳಗೊಂಡಿದೆ ಎಂದು ಹೇಳಿದ್ದಾರೆ.

ನಾರಾಯಣ ನೇತ್ರಾಲಯದಲ್ಲಿ ಪಟಾಕಿ ಸಿಡಿತದಿಂದ 13 ವರ್ಷದ ಬಾಲಕನ ಕಣ್ಣಿಗೆ ತೀವ್ರ ಗಾಯವಾಗಿದ್ದು, ಹೆಸರಘಟ್ಟದ 12 ವರ್ಷದ ಬಾಲಕ ಬಿಜಲಿ ಪಟಾಕಿ ಸ್ಫೋಟದಿಂದ ಗಂಭೀರವಾದ ಕಣ್ಣಿನ ಆಘಾತವನ್ನು ಅನುಭವಿಸಿದ್ದಾನೆ. ಅವರಿಗೆ ವಿಟ್ರಿಯಸ್ ಡೆಬ್ರಿಸ್ ಮತ್ತು ಟೋಟಲ್ ಕಣ್ಣಿನ ರಕ್ತಸ್ರಾವ ಹೊಂದಿರುವುದು ಕಂಡುಬಂದಿದೆ. ತಕ್ಷಣ ವೈದ್ಯಕೀಯ ಚಿಕಿತ್ಸೆ ನೀಡಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ದಾಖಲಾಗಿದ್ದಾರೆ. ವಿವೇಕಾನಂದ ಕಾಲೇಜು ಬಳಿ ದೋಷಪೂರಿತ ರಾಕೆಟ್​ನಿಂದ 68 ವರ್ಷದ ಹಿರಿಯ ನಾಗರಿಕರೊಬ್ಬರಿಗೆ ಗಾಯವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ದೀಪಾವಳಿ ಪಟಾಕಿ ಅವಘಡಗಳ ಸಂಖ್ಯೆ ಮತ್ತಷ್ಟು ಏರಿಕೆ: ಬೆಂಗಳೂರಲ್ಲಿ 170ಕ್ಕೂ ಹೆಚ್ಚು ಜನರ ಕಣ್ಣಿಗೆ ಗಾಯ

ABOUT THE AUTHOR

...view details