ಕರ್ನಾಟಕ

karnataka

ETV Bharat / state

ಬಳ್ಳಾರಿ ಶಾಸಕ ಭರತ್​ ರೆಡ್ಡಿ ಮನೆ ಸೇರಿದಂತೆ 4 ಕಡೆ ಇಡಿ‌ ಅಧಿಕಾರಿಗಳ ದಾಳಿ - MLA Narabharat Reddy

ಬೆಂಗಳೂರಿನಿಂದ ಆಗಮಿಸಿದ ಹತ್ತಾರು ಇಡಿ‌ ಅಧಿಕಾರಿಗಳ ತಂಡ ಶಾಸಕ ನಾರಾ ಭರತ್​ ರೆಡ್ಡಿ ಮನೆ ಪರಿಶೀಲನೆ ನಡೆಸುತ್ತಿವೆ ಎಂದು ತಿಳಿದು ಬಂದಿದೆ.

ಶಾಸಕ ನಾರಾ ಭರತ್​ ರೆಡ್ಡಿ ಮನೆ ಇಡಿ‌ ದಾಳಿ
ಶಾಸಕ ನಾರಾ ಭರತ್​ ರೆಡ್ಡಿ ಮನೆ ಇಡಿ‌ ದಾಳಿ

By ETV Bharat Karnataka Team

Published : Feb 10, 2024, 10:41 AM IST

Updated : Feb 10, 2024, 12:18 PM IST

ಬಳ್ಳಾರಿ : ಶಾಸಕ ನಾರಾ ಭರತ್​ ರೆಡ್ಡಿ ಮನೆ ಸೇರಿದಂತೆ 4 ಕಡೆ ಇಡಿ‌ (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಇಂದು ಬೆಳಗ್ಗೆ 6.30ರಿಂದ ಶಾಸಕರ ಮನೆ, ತಂದೆಯ ಕಚೇರಿ, ಶಾಸಕರ ಚಿಕ್ಕಪ್ಪ ಪ್ರತಾಪರೆಡ್ಡಿ ಮನೆ ಮತ್ತು ಕಚೇರಿ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಬೆಂಗಳೂರಿನ ಪಾಸಿಂಗ್ ವಾಹನಗಳಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆಗಮಿಸಿದ್ದಾರೆ. ಕೊಪ್ಪಳ‌ ಜಿಲ್ಲೆ ಕುಕುನೂರು, ಆಂಧ್ರ ಪ್ರದೇಶದ ಒಂಗೋಲ್​​​ನಲ್ಲಿ ಗ್ರಾನೈಟ್ ಕ್ವಾರಿಗಳನ್ನು ನಾರಾ ಕುಟುಂಬ ಹೊಂದಿದೆ. ಬೆಂಗಳೂರಿನ ನಿವಾಸ ಮತ್ತು ಚೆನ್ನೈನಲ್ಲಿರುವ ಕಚೇರಿ ಮೇಲೂ ಇಡಿ ಅಧಿಕಾರಿಗಳು ದಾಳಿ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ :ಕಾಂಗ್ರೆಸ್ ನಾಯಕ ಹರಕ್ ಸಿಂಗ್ ರಾವತ್ ಸೇರಿ ಮಾಜಿ ಸಚಿವರ ನಿವಾಸಗಳ ಮೇಲೆ ಇಡಿ ದಾಳಿ

Last Updated : Feb 10, 2024, 12:18 PM IST

ABOUT THE AUTHOR

...view details