ಕರ್ನಾಟಕ

karnataka

ETV Bharat / state

ಗಮನಿಸಿ: ಕಾಮಗಾರಿ ಹಿನ್ನೆಲೆ ಡಿ.11ರಿಂದ 13ರವರೆಗೆ ಈ ರೈಲುಗಳ ಸಂಚಾರದ ಮಾರ್ಗ ಬದಲಾವಣೆ - SOUTH WESTERN RAILWAY

ಕಾಮಗಾರಿ ಹಿನ್ನೆಲೆಯಲ್ಲಿ ಡಿಸೆಂಬರ್ 11ರಿಂದ 13ರವರೆಗೆ ಕೆಲ ರೈಲುಗಳ ಸಂಚಾರದ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.

South Western Railway
ಸಂಗ್ರಹ ಚಿತ್ರ (ETV Bharat)

By ETV Bharat Karnataka Team

Published : Nov 29, 2024, 10:42 PM IST

ಹುಬ್ಬಳ್ಳಿ:ಗುಂತಕಲ್ ವಿಭಾಗದ ಗುಂತಕಲ್ - ಗೂತ್ತಿ ಭಾಗದ ಬುಗ್ಗಾನಿ ಸಿಮೆಂಟ್ ನಗರ, ಕೃಷ್ಣಮ್ಮ ಕೋನಾ ಮತ್ತು ಪಾಣ್ಯಂ ನಿಲ್ದಾಣಗಳ ನಡುವೆ ಜೋಡಿ ಮಾರ್ಗ ಕಾಮಗಾರಿ ಹಿನ್ನೆಲೆಯಲ್ಲಿ ಡಿಸೆಂಬರ್ 11ರಿಂದ 13ರವರೆಗೆ ಕೆಲ ರೈಲುಗಳ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.

ಬದಲಾದ ಮಾರ್ಗದ ಮೂಲಕ ಚಲಿಸುವ ರೈಲುಗಳ ವಿವರ ಈ ಕೆಳಗಿನಂತಿದೆ:

1. ಡಿಸೆಂಬರ್ 6ರಂದು ಪುರಿಯಿಂದ ಹೊರಡುವ ರೈಲು ಸಂಖ್ಯೆ 22883 ಪುರಿ-ಯಶವಂತಪುರ ಗರೀಬ್ ರಥ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ನಂದ್ಯಾಲ್, ಯರ್ರಾಗುಂಟ್ಲ, ಗೂತ್ತಿ ಫೋರ್ಟ್, ಅನಂತಪುರ ನಿಲ್ದಾಣಗಳ ಮೂಲಕ ಚಲಿಸುತ್ತದೆ. ಮಾರ್ಗ ಬದಲಾವಣೆಯಿಂದ ಡೋನ್ ನಿಲ್ದಾಣದಲ್ಲಿ ನಿಯಮಿತ ನಿಲುಗಡೆ ಇರುವುದಿಲ್ಲ.

2. ಡಿಸೆಂಬರ್ 7ರಂದು ಯಶವಂತಪುರ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 22884 ಯಶವಂತಪುರ-ಪುರಿ ಗರೀಬ್ ರಥ ಸಾಪ್ತಾಹಿಕ ಎಕ್ಸ್​ಪ್ರೆಸ್ ರೈಲು ಅನಂತಪುರ, ಗೂತ್ತಿ ಫೋರ್ಟ್, ಯರ್ರಗುಂಟ್ಲಾ, ನಂದ್ಯಾಲ್ ನಿಲ್ದಾಣಗಳ ಮೂಲಕ ಚಲಿಸಲಿದೆ. ಹೀಗಾಗಿ, ಡೋನ್ ನಿಲ್ದಾಣದಲ್ಲಿ ನಿಯಮಿತ ನಿಲುಗಡೆ ತಪ್ಪಲಿದೆ.

3. ಡಿಸೆಂಬರ್ 4 ಮತ್ತು 11ರಂದು ಹೌರಾದಿಂದ ಹೊರಡುವ ರೈಲು ಸಂಖ್ಯೆ 22831 ಹೌರಾ-ಯಶವಂತಪುರ ಸಾಪ್ತಾಹಿಕ ಸೂಪರ್ ಫಾಸ್ಟ್ ಎಕ್ಸ್​ಪ್ರೆಸ್ ರೈಲು ನಂದ್ಯಾಲ್, ಯರ್ರಾಗುಂಟ್ಲ, ಗೂತ್ತಿ ಫೋರ್ಟ್, ಅನಂತಪುರ ನಿಲ್ದಾಣಗಳ ಮೂಲಕ ಚಲಿಸುತ್ತದೆ. ಹೀಗಾಗಿ, ಡೋನ್ ಮತ್ತು ಗೂತ್ತಿ ನಿಲ್ದಾಣಗಳಲ್ಲಿನ ನಿಯಮಿತ ನಿಲುಗಡೆ ಇರುವುದಿಲ್ಲ.

4. ಡಿಸೆಂಬರ್ 6 ಮತ್ತು 13ರಂದು ಯಶವಂತಪುರದಿಂದ ಹೊರಡುವ ರೈಲು ಸಂಖ್ಯೆ 22832 ಯಶವಂತಪುರ-ಹೌರಾ ಸಾಪ್ತಾಹಿಕ ಸೂಪರ್ ಫಾಸ್ಟ್ ಎಕ್ಸ್​ಪ್ರೆಸ್ ರೈಲು ಅನಂತಪುರ, ಗೂತ್ತಿ ಫೋರ್ಟ್, ಯರ್ರಗುಂಟ್ಲಾ, ನಂದ್ಯಾಲ್ ನಿಲ್ದಾಣಗಳ ಮೂಲಕ ಚಲಿಸಲಿದೆ. ಹೀಗಾಗಿ, ಗೂತ್ತಿ ಮತ್ತು ಡೋನ್ ನಿಲ್ದಾಣಗಳಲ್ಲಿನ ನಿಯಮಿತ ನಿಲುಗಡೆ ಇರಲ್ಲ.

ರೈಲುಗಳ ಸಂಚಾರ ರದ್ದು/ಭಾಗಶಃ ರದ್ದು:ಬಂಗಾರಪೇಟೆ - ಮಾರಿಕುಪ್ಪಂ ಭಾಗದ ಮಾರಿಕುಪ್ಪಂ ಮತ್ತು ಚಾಂಪಿಯನ್ ನಿಲ್ದಾಣಗಳ ಮಧ್ಯೆ ಎಂಜಿನಿಯರಿಂಗ್ ಮತ್ತು ಮೂಲಸೌಕರ್ಯ ನವೀಕರಣ ಕಾಮಗಾರಿ ಸಲುವಾಗಿ, ಈ ಕೆಳಗಿನ ರೈಲುಗಳ ಸಂಚಾರ ರದ್ದು, ಭಾಗಶಃ ರದ್ದುಗೊಳಿಸಲಾಗುತ್ತಿದೆ.

ರದ್ದುಗೊಂಡ ರೈಲುಗಳು:ಡಿಸೆಂಬರ್ 7 ಮತ್ತು 14ರಂದು ಮಾರಿಕುಪ್ಪಂ-ಬಂಗಾರಪೇಟೆ (ರೈಲು ಸಂಖ್ಯೆ 01781) ಮತ್ತು ಡಿಸೆಂಬರ್ 8 ಮತ್ತು 15ರಂದು ಬಂಗಾರಪೇಟೆ-ಮಾರಿಕುಪ್ಪಂ ಮೆಮು (01782) ವಿಶೇಷ ರೈಲುಗಳನ್ನು ರದ್ದುಗೊಳಿಸಲಾಗುತ್ತಿದೆ.

ಭಾಗಶಃ ರದ್ದು:ಡಿಸೆಂಬರ್ 7 ಮತ್ತು 14ರಂದು ಕೆಎಸ್ಆರ್ ಬೆಂಗಳೂರು - ಮಾರಿಕುಪ್ಪಂ ಮೆಮು ವಿಶೇಷ (ರೈಲು ಸಂಖ್ಯೆ 01771) ರೈಲು ಬಂಗಾರಪೇಟೆ ಮತ್ತು ಮಾರಿಕುಪ್ಪಂ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿದೆ. ಈ ರೈಲು ಬಂಗಾರಪೇಟೆಯಲ್ಲಿ ಕೊನೆಗೊಳ್ಳುತ್ತದೆ.

ಡಿಸೆಂಬರ್ 8 ಮತ್ತು 15ರಂದು ಮಾರಿಕುಪ್ಪಂ - ಕೆಎಸ್ಆರ್ ಬೆಂಗಳೂರು ಮೆಮು ವಿಶೇಷ (01772) ರೈಲು ಮಾರಿಕುಪ್ಪಂ ಮತ್ತು ಬಂಗಾರಪೇಟೆ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿದೆ. ಈ ರೈಲು ಬಂಗಾರಪೇಟೆಯಿಂದ ನಿಗದಿತ ಸಮಯಕ್ಕೆ ಹೊರಡಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ:ಬೆಂಗಳೂರು: ಡಿಸೆಂಬರ್ 14 ರಂದು ರಾಷ್ಟ್ರೀಯ ಲೋಕ ಅದಾಲತ್

ABOUT THE AUTHOR

...view details