ದಾವಣಗೆರೆ:ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳಿದ್ದ ಬ್ಯಾಗ್ ಆಟೋದಲ್ಲಿ ಬಿಟ್ಟು ಹೋದ ಪ್ರಯಾಣಿಕರಿಗೆ, ಅದನ್ನು ಸುರಕ್ಷಿತವಾಗಿ ತಲುಪಿಸುವ ಮೂಲಕ ಆಟೋ ಚಾಲಕ ಪ್ರಮಾಣಿಕತೆ ಮೆರೆದಿದ್ದಾರೆ.
ಏನಿದು ಘಟನೆ: ನವೀನ್ ತಾಜ್ ಎಂಬ ಮಹಿಳೆ ಆಗಸ್ಟ್ 10ರಂದು ನಗರದ ಭಾಷಾನಗರ ಆರ್ಚ್ನಿಂದ ಇಸ್ಲಾಂಪೇಟೆಗೆ ಪ್ರಯಾಣ ಬೆಳೆಸಿದ್ದರು. ಈ ವೇಳೆ ಸರಿ ಸುಮಾರು 6 ಲಕ್ಷ ಮೌಲ್ಯದ 100 ಗ್ರಾಂ ಚಿನ್ನವನ್ನು ಹೊಂದಿದ್ದ ವ್ಯಾನಿಟಿ ಬ್ಯಾಗ್ ಅನ್ನು ಆಟೋದಲ್ಲಿ ಬಿಟ್ಟು ಇಳಿದಿದ್ದರು.
ಆಟೋ ಇಳಿದ ಬಳಿಕ ವ್ಯಾನಿಟಿ ಬ್ಯಾಗ್ ಮರೆತಿರುವುದು ಅರಿವಿಗೆ ಬಂದಿದೆ. ಈ ವೇಳೆ ತಕ್ಷಣ ತಡಮಾಡದೇ ಬಸವನಗರ ಪೊಲೀಸ್ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬ್ಯಾಂಕ್ನಲ್ಲಿ ಚಿನ್ನದ ಒಂದು ನೆಕ್ಲೆಸ್, ಬಂಗಾರದ ಒಂದು ಲಾಂಗ್ ನೆಕ್ಲೆಸ್, ಒಂದು ಜೊತೆ ಜುಮ್ಕಿ,, 3 ಉಂಗುರಗಳಿದ್ದವು. ಜೊತೆಗೆ 150 ಗ್ರಾಂ ಬೆಳ್ಳಿಯ ಸೊಂಟದ ಚೈನ್ ಕೂಡ ಇತ್ತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ದೂರು ದಾಖಲಾದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಬಸವನಗರ ಠಾಣೆಯ ಸಿಬ್ಬಂದಿ ಆಟೋ ಪತ್ತೆಗೆ ಸಿಬ್ಬಂದಿಯನ್ನು ನೇಮಕ ಮಾಡಿದರು.