ವೈದ್ಯೆ ಡಾ. ನಿಶಿತಾ ಶೆಟ್ಟಿಯಾನ್ (ETV Bharat) ಮಂಗಳೂರು (ದಕ್ಷಿಣ ಕನ್ನಡ) :ವೈದ್ಯರು, ಉದ್ಯಮಿಗಳು ಫ್ಯಾಶನ್ ಶೋನತ್ತ ಆಕರ್ಷಿತರಾಗುವುದು ತುಂಬಾ ಕಡಿಮೆ. ಅದರ ಬಗ್ಗೆ ಒಲವಿದ್ದರೂ ಸ್ಪರ್ಧಿಯಾದದ್ದು ಇರಲೇ ಇಲ್ಲ. ಆದರೆ, ಮಂಗಳೂರಿನ ವೈದ್ಯರು, ಉದ್ಯಮಿಗಳು ಕಿರೀಟ ಮುಡಿಗೇರಿಸಿಕೊಂಡು ಮಿಸೆಸ್ ಇಂಡಿಯಾ ಕರ್ನಾಟಕ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಪ್ರತಿಭಾ ಸೌನ್ನಿಮರ್ ಇನಿಶಿಯೇಟಿವ್ ನೇತೃತ್ವದಲ್ಲಿ ಪಾತ್‌ವೇ ಎಂಟರ್‌ಪ್ರೈಸಸ್ ಹಾಗೂ ಮರ್ಸಿ ಬ್ಯೂಟಿ ಅಕಾಡೆಮಿ ಮತ್ತು ಲೇಡಿಸ್ ಸಲೂನ್ ಸಹಯೋಗದಲ್ಲಿ ಮಿಸೆಸ್ ಇಂಡಿಯಾ ಕರ್ನಾಟಕ ಮಂಗಳೂರು ಇದರ 5ನೇ ಆವೃತ್ತಿಯ ಫೈನಲ್ ಸ್ಪರ್ಧೆ ಮಂಗಳೂರು ನಗರದ ಕದ್ರಿ ಪಾರ್ಕ್‌ನಲ್ಲಿ ಭಾನುವಾರ ಜರುಗಿತು.
ಮಿಸೆಸ್ ಇಂಡಿಯಾ ಕರ್ನಾಟಕ ಮಂಗಳೂರು - 2024 ಸ್ಪರ್ಧೆ (ETV Bharat) ಇದರಲ್ಲಿ ಮಿಸೆಸ್ ಇಂಡಿಯಾ ಕರ್ನಾಟಕ ಮಂಗಳೂರು - 2024 ಕಿರೀಟವನ್ನು ಡಾ. ನಿಶಿತಾ ಶೆಟ್ಟಿಯಾನ್ ಫೆರ್ನಾಂಡಿಸ್ ಮುಡಿಗೇರಿಸಿಕೊಂಡರು. ಡಾ. ರಶ್ಯಾ ಪ್ರಥಮ ರನ್ನರ್ ಅಪ್, ಡಾ. ಶೃತಿ ಬಲ್ಲಾಳ್ ಹಾಗೂ ರಮ್ಯ ದ್ವಿತೀಯ ರನ್ನರ್ ಅಪ್, ವಿದ್ಯಾ ತೃತೀಯ ರನ್ನರ್ ಅಪ್ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಮಿಸೆಸ್ ಇಂಡಿಯಾ ಕರ್ನಾಟಕ ಮಂಗಳೂರು - 2024ರ ಕ್ಲಾಸಿಕ್ ವಿಭಾಗದಲ್ಲಿ ಸಬೀತಾ ವಿಜೇತರಾಗಿದ್ದಾರೆ. ಡಾ. ಅರ್ಚನಾ ಪ್ರಥಮ ರನ್ನರ್ ಅಪ್, ಸೌಮ್ಯ ರಾವ್ ದ್ವಿತೀಯ ರನ್ನರ್ ಅಪ್, ಸವಿತಾ ಭಂಡಾರಿ ತೃತೀಯ ರನ್ನರ್ ಅಪ್ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಸೂಪರ್ ಕ್ಲಾಸಿಕ್ ವಿಭಾಗದಲ್ಲಿ ನಂದಿನಿ ಅವರು ವಿಜೇತರಾಗಿದ್ದಾರೆ. ಇವರು ರಾಜ್ಯ ಮಟ್ಟದ ಫ್ಯಾಶನ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಮಿಸೆಸ್ ಇಂಡಿಯಾ ಕರ್ನಾಟಕ ಮಂಗಳೂರು - 2024 ಸ್ಪರ್ಧೆ (ETV Bharat) ಇದರಲ್ಲಿ ಮಿಸೆಸ್ ಇಂಡಿಯಾ ಕರ್ನಾಟಕ ಮಂಗಳೂರು 2024 ರ ಕಿರೀಟ ಪಡೆದ ವೈದ್ಯೆ ಡಾ. ನಿಶಿತಾ ಶೆಟ್ಟಿಯಾನ್ ಫೆರ್ನಾಂಡಿಸ್, ಮಂಗಳೂರಿನಲ್ಲಿ ಕೆಲ ತಿಂಗಳ ಹಿಂದೆ ಮೊದಲ ಬಾರಿಗೆ ನಡೆದ ವೈದ್ಯರ ಫ್ಯಾಶನ್ ಶೋನಲ್ಲಿಯೂ ಕಿರೀಟ ಮುಡಿಗೇರಿಸಿಕೊಂಡಿದ್ದರು.
ಮಿಸೆಸ್ ಇಂಡಿಯಾ ಕರ್ನಾಟಕ ಮಂಗಳೂರು 2024ರ ಕಿರೀಟ ಪಡೆದ ವೈದ್ಯೆ ಡಾ. ನಿಶಿತಾ ಶೆಟ್ಟಿಯಾನ್ ಮಾತನಾಡಿ, ''ನಾನು ಗೈಕೋನಾಲಜಿಸ್ಟ್ ವೈದ್ಯೆ, ಎರಡು ಮಕ್ಕಳ ತಾಯಿಯಾಗಿದ್ದೇನೆ. ವೃತ್ತಿ, ಕುಟುಂಬದ ಜೊತೆ ಹೊಂದಾಣಿಕೆ ಮಾಡಿಕೊಂಡು ಫ್ಯಾಶನ್ ಶೋನಲ್ಲಿ ಭಾಗವಹಿಸಿ ಕಿರೀಟ ಪಡೆದಿರುವುದು ಖುಷಿ ತಂದಿದೆ. ಕಳೆದ ಅಕ್ಟೋಬರ್ನಲ್ಲಿ ಡಾಕ್ಟರ್ ಫ್ಯಾಶನ್ ಶೋನಲ್ಲಿ ಭಾಗವಹಿಸಿ ಕಿರೀಟ ಪಡೆದಿದ್ದೆ. ಆ ಕಾರಣದಿಂದಲೇ ಇದರಲ್ಲಿ ಭಾಗವಹಿಸಿ ಕಿರೀಟ ಮುಡಿಗೇರಿಸಿಕೊಂಡಿದ್ದೆ. ಇದೀಗ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದೇನೆ'' ಎಂದಿದ್ದಾರೆ.
ಮಿಸೆಸ್ ಇಂಡಿಯಾ ಕರ್ನಾಟಕ ಮಂಗಳೂರು - 2024 ಸ್ಪರ್ಧೆ (ETV Bharat) ದ್ವಿತೀಯ ರನ್ನರ್ ಅಪ್ ಆಗಿ ಆಯ್ಕೆಯಾದ ಡಾ. ಶೃತಿ ಬಲ್ಲಾಳ್ ಮಾತನಾಡಿ, ''ನಾನು ಉಡುಪಿಯ ಮಧುಮೇಹ ತಜ್ಞೆ. ಮದುವೆಯಾಗಿ ಎಂಟು ವರ್ಷವಾಗಿದೆ. ಎರಡು ಮಕ್ಕಳಿದ್ದಾರೆ. ನನ್ನ ಕುಟುಂಬ ಪೂರ್ತಿ ವೈದ್ಯ ಕುಟುಂಬ. ಮದುವೆಯಾಗಿ ಬಂದದ್ದು ವೈದ್ಯ ಕುಟುಂಬಕ್ಕೆ. ನನ್ನ ಕುಟುಂಬದ ಸಫೋರ್ಟ್ನಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಮಿಸೆಸ್ ಇಂಡಿಯಾ ಕರ್ನಾಟಕ ಮಂಗಳೂರಿನಲ್ಲಿ ರನ್ನರ್ ಅಪ್ ಆಗಿದ್ದೇನೆ. ನಮಗೆ ಎಷ್ಟೇ ಪ್ರತಿಭೆ ಇದ್ದರೂ ಕುಟುಂಬದ ಬೆಂಬಲ ಬೇಕು. ಅದು ನನಗೆ ಸಿಕ್ಕಿದೆ'' ಎಂದು ಹೇಳಿದರು.
ತೃತೀಯ ರನ್ನರ್ ಅಪ್ ಪ್ರಶಸ್ತಿ ಪಡೆದ ಉದ್ಯಮಿ ವಿದ್ಯಾ ಸಂಪತ್ ಕರ್ಕೇರ ಮಾತನಾಡಿ, ''ನಾನು ಮುಂಬಯಿನಲ್ಲಿ ಹುಟ್ಟಿದ್ದು, ನನ್ನ ಊರು ಮಂಗಳೂರು. ನನಗೆ ಹತ್ತು ವರ್ಷದ ಮಗ ಇದ್ದಾನೆ. ಏನಾದರೂ ಸಾಧನೆ ಮಾಡಬೇಕು ಎಂದು ಯಶಸ್ವಿ ಉದ್ಯಮಿ ಆಗಿದ್ದೇನೆ. ಮಾಡೆಲಿಂಗ್ ಫೀಲ್ಡ್ ನನಗೆ ಹೊಸತು. ಇದರಲ್ಲಿ ಪಾಲ್ಗೊಂಡು ಇದೀಗ ಸಾಧನೆ ಮಾಡಿದ್ದೇನೆ'' ಎಂದು ತಿಳಿಸಿದ್ದಾರೆ.
ಆಯೋಜಕರಾದ ಪಾತ್‌ವೇ ಎಂಟರ್ಪ್ರೈಸಸ್ನ ಮಾಲೀಕ ಹಾಗೂ ಮಿಸೆಸ್ ಇಂಡಿಯಾ ಕರ್ನಾಟಕ ಮಂಗಳೂರು ನಿರ್ದೇಶಕರಾದ ದೀಪಕ್ ಗಂಗೂಲಿ ಮಾತನಾಡಿ, ''ಪ್ರತಿ ವರ್ಷ ಫ್ಯಾಶನ್ ಶೋ ಕಾರ್ಯಕ್ರಮ ಮಾಡಿದಾಗ ಸೌಂದರ್ಯ ಇದ್ದವರು ಬರುತ್ತಿದ್ದರು. ಆದರೆ, ಈ ಬಾರಿ ಎಲ್ಲಾ ವಿಭಾಗದ ಸ್ಪರ್ಧಿಗಳು ಬಂದಿದ್ದಾರೆ. ಅದರಲ್ಲಿ ಈ ಬಾರಿ ವೈದ್ಯರು, ಉದ್ಯಮಿಗಳು, ಶಿಕ್ಷಕರು ಬಂದಿದ್ದರು. ಇವರಲ್ಲಿ ಹತ್ತು ಮಂದಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅವರು ಅಲ್ಲಿಯೂ ಆಯ್ಕೆಯಾಗಿ ರಾಷ್ಟ್ರಮಟ್ಟಕ್ಕೆ, ಅಂತಾರಾಷ್ಟ್ರೀಯ ಮಟಕ್ಕೆ ಆಯ್ಕೆಯಾಗಲಿ'' ಎಂದು ನಿರೀಕ್ಷಿಸುತ್ತೇವೆ ಎಂದರು.
ಆಯೋಜಕರಾದ ಮರ್ಸಿ ಬ್ಯೂಟಿ ಅಕಾಡೆಮಿಯ ಮಾಲೀಕರು ಹಾಗೂ ಮಿಸೆಸ್ ಇಂಡಿಯಾ ಕರ್ನಾಟಕ ಮಂಗಳೂರು ನಿರ್ದೇಶಕರಾದ ಮರ್ಸಿ ವೀಣಾ ಡಿಸೋಜಾ ಮಾತನಾಡಿ, ''ಈ 5 ನೇ ಸೀಸನ್ ಯಶಸ್ವಿಯಾಗಿ ಮಾಡಿದ್ದೇವೆ. ಈ ಹಿಂದಿನ ನಾಲ್ಕು ಆವೃತ್ತಿಯಲ್ಲಿ ಗೃಹಿಣಿಯರು, ಸೌಂದರ್ಯ ಆಸಕ್ತರು ಆಗಮಿಸಿದ್ದರು. ಆದರೆ ಈ ಬಾರಿ ಡಾಕ್ಟರ್ಗಳನ್ನು ಆಕರ್ಷಿಸಿದೆ. ಇದನ್ನು ಆಯೋಜಿಸಿದ್ದಕ್ಕೆ ಖುಷಿಯಿದೆ'' ಎನ್ನುತ್ತಾರೆ.
ಇದನ್ನೂ ಓದಿ :Mrs India Karnataka 2021 : 'ಮೇಘಾ' ಮುಡಿಗೇರಿದ 'ಮಿಸೆಸ್ ಇಂಡಿಯಾ ಕರ್ನಾಟಕ ಕಿರೀಟ'