ಕರ್ನಾಟಕ

karnataka

ETV Bharat / state

ಎರಡು ಅಪರೂಪದ ಚಿಕಿತ್ಸೆ ಮೂಲಕ ರೋಗಿಗಳಿಗೆ ಮರು ಜೀವ; ಹುಬ್ಬಳ್ಳಿಯ ವೈದ್ಯರ ಸಾಧನೆ - Doctors gave life to patients

ಅಪರೂಪದ ಚಿಕಿತ್ಸೆ ಮೂಲಕ ಹುಬ್ಬಳ್ಳಿಯ ವೈದ್ಯರು ಇಬ್ಬರು ರೋಗಿಗಳಿಗೆ ಮರು ಜೀವ ನೀಡಿದ್ದಾರೆ.

ಹುಬ್ಬಳ್ಳಿ
ಹುಬ್ಬಳ್ಳಿ

By ETV Bharat Karnataka Team

Published : Feb 14, 2024, 5:13 PM IST

ಹುಬ್ಬಳ್ಳಿ :ಅವಳಿ ನಗರ ಹುಬ್ಬಳ್ಳಿ-ಧಾರವಾಡ ಬೆಳೆದಂತೆ ವೈದ್ಯಕೀಯ ಕ್ಷೇತ್ರದಲ್ಲಿಯೂ ಗುರುತಿಸಿಕೊಳ್ಳುತ್ತಿದೆ. ಕ್ಲಿಷ್ಟಕರ ಹಾಗೂ ಜಟಿಲ ಶಸ್ತ್ರ ಚಿಕಿತ್ಸೆಗಳಿಗೆ ಇಷ್ಟು ದಿನ ದೂರದ ಊರುಗಳಿಗೆ ಹೋಗಬೇಕಿತ್ತು. ಆದರೆ ಹುಬ್ಬಳ್ಳಿ ವೈದ್ಯರು ಎರಡು ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ಮೂಲಕ ಇಬ್ಬರಿಗೆ ಮರು ಜೀವ ನೀಡಿದ್ದಾರೆ.

ಸಾಕಷ್ಟು ಅಪರೂಪದ ಸಮಸ್ಯೆಗಳಿದ್ದ ಮಹಿಳೆ(64)ಗೆ ಹುಬ್ಬಳ್ಳಿಯ ವೈದ್ಯರು ಶಸ್ತ್ರಚಿಕಿತ್ಸೆಯ ಮೂಲಕ ಮರುಜೀವ ನೀಡಿದ್ದಾರೆ. ಕೇಸ್ ಆಫ್ ಸ್ತನ ಕ್ಯಾನ್ಸರ್, ಎಡ ಹೆಮಿಪ್ಲೆಜಿಯಾ ಮತ್ತು ಹೈಪೋಥೈರಾಯ್ಡಿಸಮ್ ರೋಗಿಯು ಕಳೆದ ಮೂರು ತಿಂಗಳಿಂದ ತಲೆ ತಿರುಗುವ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಹೀಗಾಗಿ ತಕ್ಷಣವೇ ವೈದ್ಯರು ರೋಗವನ್ನು ಪತ್ತೆಹಚ್ಚಿ ಕ್ಲಿಷ್ಟಕರ ಚಿಕಿತ್ಸೆ ಮೂಲಕ ಜೀವ ಉಳಿಸಿದ್ದಾರೆ. ಟ್ರಾನ್ಸ್ ಕ್ಯಾಥೇಟರ್ ಮಹಾಪಧಮನಿಯ ಕವಾಟ ಅಳವಡಿಕೆಯ ಮೂಲಕ ಹುಬ್ಬಳ್ಳಿಯ ವೈದ್ಯರು ಉತ್ತರ ಕರ್ನಾಟಕ ಭಾಗದಲ್ಲಿಯೇ ಅತಿ ಅಪರೂಪದ ಚಿಕಿತ್ಸೆ ನೀಡಿ ಈ ಸಾಧನೆ ಮಾಡಿದ್ದಾರೆ.

ಡಾ. ವಿಜಯಕೃಷ್ಣ ಕೋಳೂರು

ಇನ್ನು ತಾಯಿ ಗರ್ಭದಲ್ಲಿರುವ ನವಜಾತ ಶಿಶುವಿಗೆ ಹಾರ್ಟ್ ಸಂಬಂಧಿಸಿದ ತೊಂದರೆ ಇರುವುದನ್ನು ಕೂಡ ಪತ್ತೆ ಹಚ್ಚಿದ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಮಗುವಿಗೆ ಹಾಗೂ ತಾಯಿಗೆ ಮರುಜೀವ ನೀಡಿದ್ದಾರೆ. ಅಪರೂಪದ ಎರಡು ಶಸ್ತ್ರಚಿಕಿತ್ಸೆ ಮೂಲಕ ರೋಗಿಗಳಿಗೆ ಹೊಸ ಬೆಳಕು ಮೂಡಿಸಿದ್ದಾರೆ.

ಆಸ್ಪತ್ರೆಯ ವೈದ್ಯರ ಕಾರ್ಯದ ಬಗ್ಗೆ ಮಹಿಳೆ ಪುತ್ರ ಹಾಗೂ ನವಜಾತ ಶಿಶುವಿನ ತಾಯಿ ಹರ್ಷ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯ ವೈದ್ಯರು ಸಮಯಕ್ಕೆ ಸರಿಯಾಗಿ ಸ್ಪಂದಿಸಿದ್ದಾರೆ. ವೈದ್ಯರ ಕಾರ್ಯವನ್ನು ನಮ್ಮ ಜೀವನ ಪೂರ್ತಿ ಮರೆಯುವುದಿಲ್ಲ ಎಂದು ಕೊಂಡಾಡಿದ್ದಾರೆ.

ಈ ಬಗ್ಗೆ ತಜ್ಞ ವೈದ್ಯರಾದ ಡಾ. ವಿಜಯಕೃಷ್ಣ ಕೋಳೂರು ಅವರು ಮಾತನಾಡಿ, ''(TAVI ) ಅಂದರೆ ಟ್ರಾನ್ಸ್​ ಅಯೋಟಿಕ್ ವಾಲ್​ ಇನ್ಫ್ರಾಂಟೇಷನ್​. ವಯಸ್ಸಾದಂತೆ ಅಯೋಟಿಕ್​ ಕ್ಯಾಲ್ಸಿಯಂ ಆಗಿ ಡೆಪೋಸಿಟ್​ ಆಗಿ ಡಿಸೀಸ್ ವಾಲ್ ಓಪನಿಂಗ್ ಕಡಿಮೆ ಆಗುತ್ತೆ. ಅದರಂತೆ ರೋಗಿಗೆ ದಮ್ಮು ಬರುವುದು, ತಲೆ ತಿರುಗುವಂತಹ ಸಮಸ್ಯೆ ಇರುತ್ತೆ. ವಾಲ್ ಅಯೋಟಿಕ್​ ಡ್ಯಾಮೇಜ್ ಆದಾಗ ಸಾಮಾನ್ಯವಾಗಿ ನಾವು ಓಪನ್ ಹಾರ್ಟ್​ ಸರ್ಜರಿ ಮಾಡುತ್ತೇವೆ ಎಂದು ತಿಳಿಸಿದರು.

ರೆಡಿಯೋಲಜಿಸ್ಟ್ ಜುನೈದ್ ಜಮಾದಾರ

ಚಿಕಿತ್ಸೆಗೆ 15 ಲಕ್ಷ ರೂ. ವೆಚ್ಚ :ಮೆಕ್ಯಾನಿಕ್ ವಾಲ್ ಹಾಗೂ ಟಿಶ್ಯೂ ವಾಲ್ ಎಂಬ ಎರಡು ವಿಧಗಳಿರುತ್ತವೆ. ಕೆಲವೊಮ್ಮೆ ಇಂತಹ ಚಿಕಿತ್ಸೆ ವೇಳೆ ರೋಗಿಗೆ ಓಪನ್ ಹಾರ್ಟ್​ ಸರ್ಜರಿಗೆ ಅವರಲ್ಲಿ ತಡೆಯುವ ಸಾಮರ್ಥ್ಯ ಇರುವುದಿಲ್ಲ. ಅಥವಾ ಹೆಚ್ಚಿನ ಕ್ಯಾಲ್ಸಿಯಂ ಇರುತ್ತೆ ಅಥವಾ ರೋಗಿಗೆ ಬೇರೆ ಏನೋ ಮೆಡಿಕಲ್ ಪ್ರಾಬ್ಲಂ ಇರುತ್ತೆ. ಇಂತಹ ಸಂದರ್ಭದಲ್ಲಿ ನಾವು 'ಟಾವಿ' ಚಿಕಿತ್ಸೆಯ ಮೂಲಕ ವಾಲ್ ಬದಲಿಸುತ್ತೇವೆ. ಇದಕ್ಕೆ ಓಪನ್ ಹಾರ್ಟ್​ ಸರ್ಜರಿ ಬೇಕಾಗಲ್ಲ. ಇದರಲ್ಲಿ ಕೇವಲ ಎರಡು ದಿನದಲ್ಲೇ ಎಲ್ಲಾ ಚಿಕಿತ್ಸೆ ನೀಡಿ ಕಳುಹಿಸುತ್ತೇವೆ. ಇದರಲ್ಲಿ ಸಕ್ಸಸ್ ರೇಟ್​ 95% ಇದೆ. ಚಿಕಿತ್ಸೆಗೆ 15 ಲಕ್ಷ ಪ್ಯಾಕೇಜ್ ಮಾಡಿದ್ದೇವೆ'' ಎಂದು ತಿಳಿಸಿದ್ದಾರೆ.

ರೆಡಿಯೋಲಜಿಸ್ಟ್ ಜುನೈದ್ ಜಮಾದಾರ ಅವರು ಮಾತನಾಡಿ, ''ಪ್ರಗ್ನೆಂಟ್ ತಾಯಿಗೆ ನೆಗೆಟಿವ್ ಬ್ಲಡ್​ ಗ್ರೂಪ್ ಇದ್ದರೆ, ಸೆಕೆಂಡ್​ಪ್ರಗ್ನೆನ್ಸಿಯಲ್ಲಿ ಮಗು ಬ್ಲಡ್​ ಗ್ರೂಪ್ ಜೊತೆ ರಿಯಾಕ್ಷನ್ ಆಗುತ್ತೆ. ಕೆಂಪು ರಕ್ತ ಕಣಗಳ ಮೇಲೆ ಪರಿಣಾಮ ಆಗುತ್ತೆ. ಆಗ ರೆಡ್ ಬ್ಲಡ್ ಸೆಲ್ಸ್ ಎಲ್ಲವೂ ಹಾಳಾಗುತ್ತದೆ. ಈ ವೇಳೆ ಹಿಮೋಗ್ಲೋಬಿನ್ ಕಡಿಮೆ ಆಗುತ್ತೆ. ಹೀಗಾದಾಗ ಹೊಟ್ಟೆಯಲ್ಲಿ fluid (ದ್ರವ) ತುಂಬಿಕೊಂಡುಬಿಡುತ್ತೆ. ಮತ್ತೆ ಎದೆಯ ಹೊರಗೆ ನೀರು ತುಂಬಿಕೊಳ್ಳುತ್ತೆ. ಲಂಗ್ಸ್​ ಸುತ್ತಮುತ್ತ ನೀರು ಆಗುತ್ತೆ. ಹಾರ್ಟ್​ ಫೆಲ್ಯೂರ್ ಆಗುತ್ತೆ. ಈ ಸ್ಥಿತಿಯಲ್ಲಿ ಮಗು ಬಂದಿದೆ. ಇದನ್ನು ಕಡಿಮೆ ಮಾಡಲು 'intrauterine fetal blood transfusion' ಈ ಪ್ರೊಸಿಜರ್ ಮಾಡಲೇಬೇಕಾಗಿತ್ತು. ಆಗ ಡೆಲಿವರಿ ಮಾಡಿದ್ದರೆ ಮಗು ಬದುಕುಳಿಯುವ ಸಾಧ್ಯತೆ ತುಂಬಾ ಕಡಿಮೆ ಇತ್ತು. ನಂತರ ಸ್ಪೆಷಲ್ ಬ್ಲಡ್ ಪ್ರಿಪೇರ್ ಮಾಡಿ, ನಿರ್ದಿಷ್ಟ ವಾಲ್ಯೂಮ್ ಮೂಲಕ ವರ್ಗಾವಣೆ ಮಾಡಿದ್ದೇವೆ. ಈಗ ಮಗು ಆರೋಗ್ಯವಾಗಿದೆ'' ಎಂದಿದ್ದಾರೆ.

ಇದನ್ನೂ ಓದಿ:ಅಪರೂಪದ ಕ್ಯಾನ್ಸರ್​ಗೆ ಯಶಸ್ವಿ ಶಸ್ತ್ರ ಚಿಕಿತ್ಸೆ; ರೋಗಿ ಜೀವ ಉಳಿಸಿದ ಕೆ ಆರ್ ಆಸ್ಪತ್ರೆ ವೈದ್ಯರು

ABOUT THE AUTHOR

...view details