ಕರ್ನಾಟಕ

karnataka

ETV Bharat / state

ಕೆಐಎಲ್ ಟ್ಯಾಕ್ಸಿಗಳ ಕಾರ್ಯಾಚರಣೆ ವಿವಾದ ಚರ್ಚಿಸಿ ಬಗೆಹರಿಸಿಕೊಳ್ಳಿ : ಹೈಕೋರ್ಟ್ ಸಲಹೆ - KIL TAXI ISSUE

ಕೆಐಎಲ್ ಟ್ಯಾಕ್ಸಿಗಳ ಕಾರ್ಯಾಚರಣೆ ವಿವಾದವನ್ನು ತೀರಾ ಕಾನೂನು ಮತ್ತು ನಿಯಮಗಳಿಗೆ ಕಟ್ಟುಬಿದ್ದು ನೋಡುವುದರ ಬದಲು ಪರಸ್ಪರ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಚರ್ಚಿಸಿ ಬಗೆಹರಿಸಿಕೊಳ್ಳಿ ಎಂದು ಹೈಕೋರ್ಟ್ ಸಲಹೆ ನೀಡಿದೆ.

DISCUSS AND RESOLVE  HIGH COURT ADVISES  BENGALURU
ಹೈಕೋರ್ಟ್ ಸಲಹೆ (ETV Bharat)

By ETV Bharat Karnataka Team

Published : Jan 18, 2025, 8:05 AM IST

ಬೆಂಗಳೂರು:ಸಿಟಿ ಟ್ಯಾಕ್ಸಿ ಯೋಜನೆಯಡಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎಎಲ್) ಪ್ರಯಾಣಿಕರಿಗಾಗಿ ಸೇವೆ ಸಲ್ಲಿಸುತ್ತಿರುವ ಟ್ಯಾಕ್ಸಿಗಳ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಎದುರಾಗಿರುವ ವಿವಾದವನ್ನು ಪರಸ್ಪರ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸುವಂತೆ ಹೈಕೋರ್ಟ್ ಸಲಹೆ ನೀಡಿದೆ.

ದಿ ಬೆಂಗಳೂರು ಇಂಟರ್‌ನ್ಯಾಷನಲ್ ಆಂಡ್ ಡೊಮೆಸ್ಟಿಕ್ ಏರ್‌ಪೋರ್ಟ್ ಲಕ್ಸುರಿ ಟ್ಯಾಕ್ಸಿ ಓನರ್ಸ್​ ಆಂಡ್ ಡ್ರೈವರ್ಸ್​ ಯೂನಿಯನ್ (ರಿ) ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ್ ರಮಾನಾಥ ಹೆಗಡೆ ಅವರಿದ್ದ ಏಕಸದಸ್ಯ ಪೀಠ ಈ ಸಲಹೆ ನೀಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ನಡುವೆ ಒಂಡಂಬಡಿಕೆ ಆಗಿದೆ. ಅದರಡಿ ಅರ್ಜಿದಾರರ ಸಂಘದ ಟ್ಯಾಕ್ಸಿಗಳು ಕಾರ್ಯಚರಿಸುತ್ತಿವೆ. ವಿಮಾನ ನಿಲ್ದಾಣಕ್ಕೆ ಸೇವೆ ಒದಗಿಸುವ ಟ್ಯಾಕ್ಸಿ ವಾಹನ 6 ವರ್ಷ ಹಳೆಯದಾಗಿರಬಾರದು, 2.15 ಲಕ್ಷ ಕಿ.ಮೀ ಸಂಚರಿಸಬಾರದು ಹಾಗೂ ಸಿಟಿ ಟ್ಯಾಕ್ಸಿ ಯೋಜನಯಂತೆ ಬೆಂಗಳೂರಿನಿಂದ 25 ಕಿ.ಮೀ ವ್ಯಾಪ್ತಿಯ ಹೊರಗೆ ಸಂಚರಿಸುವಂತಿಲ್ಲ ಎಂಬ ಷರತ್ತುಗಳನ್ನು ಹಾಕಲಾಗಿದ್ದು, ಇದರಿಂದ ತೊಂದರೆ ಆಗುತ್ತಿದೆ ಎಂದು ತಿಳಿಸಿದರು.

ವಿಮಾನ ನಿಲ್ದಾಣ ಪ್ರಾಧಿಕಾರದ ಪರ ವಕೀಲರು, ಸುರಕ್ಷತೆ ಮತ್ತು ಗುಣಮಟ್ಟದ ಸೇವೆ ಒದಗಿಸುವ ಉದ್ದೇಶದಿಂದ ಈ ಷರತ್ತುಗಳನ್ನು ವಿಧಿಸಲಾಗಿದೆ ಎಂದು ವಿವರಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಈ ಪ್ರಕರಣವನ್ನು ತೀರಾ ಕಾನೂನು ಮತ್ತು ನಿಯಮಗಳಿಗೆ ಕಟ್ಟುಬಿದ್ದು ನೋಡುವುದರ ಬದಲು ಪರಸ್ಪರ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಬಹುದು ಅನಿಸುತ್ತದೆ. ವಿಮಾನ ನಿಲ್ದಾಣ ಪ್ರಾಧಿಕಾರ, ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಹಾಗೂ ಅರ್ಜಿದಾರ ಸಂಸ್ಥೆ ಪರಸ್ಪರ ಮಾತುಕತೆ ಮೂಲಕ ಪರಿಹಾರ ಸೂತ್ರ ಹುಡುಕುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿ ಎಂದು ಸಲಹೆ ನೀಡಿ ವಿಚಾರಣೆಯನ್ನು ಜನವರಿ 31ಕ್ಕೆ ಮುಂದೂಡಿತು.

ಓದಿ:ಮಂಗಳೂರು: ಬಾಲಕಿ ಮೇಲೆ ಅತ್ಯಾಚಾರ, ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ, ದಂಡ

ABOUT THE AUTHOR

...view details