ಧಾರವಾಡ:ಜುಲೈ 16 ರಿಂದ 19ರವೆಗೆ ಮೊಹರಂ ಹಬ್ಬದ ಆಚರಣೆಯ ಸಮಯದಲ್ಲಿ ಕಾನೂನು ಮತ್ತು ಸುವ್ಯಸ್ಥೆ ಕಾಪಾಡುವ ಹಿತದೃಷ್ಠಿಯಿಂದ ಮದ್ಯಪಾನ, ಮದ್ಯ ಮಾರಾಟ ಮತ್ತು ಮದ್ಯ ಸಾಗಾಣಿಕೆಯನ್ನು ಜಿಲ್ಲಾಧಿಕಾರಿ ದಿವ್ಯಪ್ರಭು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಜುಲೈ 16ರ ಸಂಜೆ 6 ಗಂಟೆಯಿಂದ ಜುಲೈ 18ರ ಬೆಳಗ್ಗೆ 6 ಗಂಟೆಯವರೆಗೆ ಧಾರವಾಡ ಗ್ರಾಮೀಣ, ಹುಬ್ಬಳ್ಳಿ ಗ್ರಾಮೀಣ ತಾಲೂಕು (ಅರಳಿಕಟ್ಟೆ ಗ್ರಾಮ ಹೊರತು ಪಡಿಸಿ), ಅಳ್ನಾವರ, ನವಲಗುಂದ, ಅಣ್ಣಿಗೇರಿ, ಕಲಘಟಗಿ ಮತ್ತು ಕುಂದಗೋಳ (ಯರಗುಪ್ಪಿ, ಯರಿನಾರಾಯಣಪೂರ, ಚಿಕ್ಕನರ್ತಿ, ಮುಳ್ಳೋಳ್ಳಿ, ಪಶುಪತಿಹಾಳ ಗ್ರಾಮಗಳನ್ನು ಹೊರತು ಪಡಿಸಿ) ತಾಲೂಕು ಮತ್ತು ಜುಲೈ 17ರ ಸಂಜೆ 6 ಗಂಟೆಯಿಂದ ಜುಲೈ 19ರ ಬೆಳಗ್ಗೆ 6 ಗಂಟೆಯವರೆಗೆ ಹುಬ್ಬಳ್ಳಿ ಗ್ರಾಮೀಣ ತಾಲೂಕಿನ ಅರಳಿಕಟ್ಟಿ ಗ್ರಾಮ ಮತ್ತು ಕುಂದಗೋಳ ತಾಲೂಕಿನ ಯರಗುಪ್ಪಿ, ಯರಿ ನಾರಾಯಣಪೂರ, ಚಿಕ್ಕನರ್ತಿ, ಮುಳ್ಳೋಳ್ಳಿ, ಪಶುಪತಿಹಾಳ ಗ್ರಾಮಗಳಲ್ಲಿ ಮದ್ಯಪಾನ, ಮದ್ಯ ಮಾರಾಟ ಮತ್ತು ಮದ್ಯ ಸಾಗಾಣಿಕೆಯನ್ನು ನಿಷೇಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.