ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ (ETV Bharat) ಬೆಂಗಳೂರು:"ಸೂರಜ್ ರೇವಣ್ಣ ವಿರುದ್ಧದ ದೂರಿನ ಬಗ್ಗೆ ಗೊತ್ತಿಲ್ಲ, ನನಗೂ ಅದಕ್ಕೂ ಸಂಬಂಧವಿಲ್ಲ. ಅವರ ಕುಟುಂಬದಲ್ಲಿ ದೊಡ್ಡವರಿದ್ದಾರೆ. ಅವರು ಉತ್ತರ ಕೊಡ್ತಾರೆ. ಆ ಪ್ರಕರಣದ ಬಗ್ಗೆ ನನಗೆ ಗೊತ್ತಿಲ್ಲ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು. ಅರಮನೆ ಮೈದಾನದ ಬಳಿ ಮಾಧ್ಯಮಗಳ ಪ್ರಶ್ನೆಗೆ ಅವರು ಉತ್ತರಿಸಿದರು.
ಉಪ ಚುನಾವಣೆಯಲ್ಲಿ ಚನ್ನಪಟ್ಟಣದ ಅಭ್ಯರ್ಥಿ ತಾವೇ ಎನ್ನುವ ಮಾತುಗಳು ಕೇಳಿ ಬರುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, "ಯಾರ ಅಭಿಪ್ರಾಯ ಏನಾದರೂ ಬರಲಿ. ನನ್ನ ಅಭಿಪ್ರಾಯ ಮೊದಲು ಜನರ ಹತ್ತಿರ ಮಾತನಾಡುತ್ತೇನೆ" ಎಂದಷ್ಟೇ ಹೇಳಿದರು.
ಬೆಲೆ ಏರಿಕೆಗೆ ಗ್ಯಾರಂಟಿ ಕಾರಣವಲ್ಲ:ಪೆಟ್ರೋಲ್ ಹಾಗೂ ಡೀಸೆಲ್ನ ಬೆಲೆ ಏರಿಕೆಗೆ ಗ್ಯಾರಂಟಿ ಕಾರಣ ಎಂದು ವಿಪಕ್ಷಗಳ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿ, "ಯಾರು ಏನೇ ಹೇಳಿದ್ರು ಬೆಲೆ ಏರಿಕೆಗೆ ಗ್ಯಾರಂಟಿ ಕಾರಣವಲ್ಲ. ಬೆಲೆ ಏರಿಕೆಯನ್ನು ಎಲ್ಲಾ ಸಂದರ್ಭದಲ್ಲಿ ಯಾವ ರೀತಿ ಮಾಡಬೇಕೋ ಆ ರೀತಿ ಮಾಡಿದ್ದೇವೆ. ಬಿಜೆಪಿ ಸರ್ಕಾರದಲ್ಲೂ ಬೆಲೆ ಏರಿಕೆ ಮಾಡಿದ್ದಾರೆ. ಆದರೆ ಅವರಂತೆ ನಾವು ಆ ಮಟ್ಟಕ್ಕೆ ಏರಿಕೆ ಮಾಡಿಲ್ಲ" ಎಂದರು.
"ತೈಲ ಬೆಲೆ ಕಡಿಮೆ ಇದ್ದರೂ ಅವರು ಬೆಲೆ ಏರಿಕೆ ಮಾಡಿದ್ದರು. ನಾವು ಅದನ್ನು ಕಂಟ್ರೋಲ್ನಲ್ಲಿ ಇಟ್ಟುಕೊಂಡು, ನಮ್ಮ ಅಕ್ಕ ಪಕ್ಕದ ರಾಜ್ಯಗಳಲ್ಲಿ ಜಾಸ್ತಿ ಬ್ಯುಸಿನೆಸ್ ಹೋಗ್ತಿತ್ತು. ಆ ದೃಷ್ಟಿಯಿಂದ ಪಕ್ಕದ ರಾಜ್ಯದಲ್ಲಿ ಬ್ಯುಸಿನೆಸ್ ಕಂಟ್ರೋಲ್ ಆಗ್ಲಿ ಎಂದು ಬೆಲೆ ಏರಿಕೆ ಮಾಡಿದ್ದೇವೆ. ಒಂದು ರಾಜ್ಯ ಬಿಟ್ಟು ಎಲ್ಲಾ ರಾಜ್ಯಗಳಲ್ಲೂ ಬೆಲೆ ಜಾಸ್ತಿ ಇದೆ. ಗ್ಯಾರಂಟಿಗಳಿಗೂ ಬೆಲೆ ಏರಿಕೆಗೂ ಸಂಬಂಧವಿಲ್ಲ. ಎಲ್ಲಾ ಗ್ಯಾರಂಟಿಗಳು ಮುಂದುವರೆಯುತ್ತಿವೆ. ಅಭಿವೃದ್ಧಿ ಕೆಲಸಕ್ಕೆ ಏನು ಬೇಕೋ ಅದನ್ನು ಮಾಡುತ್ತೇವೆ" ಎಂದು ತಿಳಿಸಿದರು.
ಇದನ್ನೂ ಓದಿ:ಸೂರಜ್ ರೇವಣ್ಣ ವಿಚಾರವಾಗಿ ಅಧಿಕೃತ ದೂರು ದಾಖಲಾಗಿಲ್ಲ, ದೂರು ಬಂದರೆ ಕ್ರಮ: ಗೃಹ ಸಚಿವ ಜಿ.ಪರಮೇಶ್ವರ್ - SURAJ REVANNA ISSUE