ಕರ್ನಾಟಕ

karnataka

ಬರಗಾಲದಿಂದ ಬೇಸತ್ತ ರೈತರು: ಮಳೆಗಾಗಿ ಕತ್ತೆಗಳಿಗೆ ಮದುವೆ ಮಾಡಿಸಿದ ಗ್ರಾಮಸ್ಥರು - Donkeys Marriage

By ETV Bharat Karnataka Team

Published : May 13, 2024, 1:49 PM IST

ಬರಗಾಲದಿಂದ ಬೇಸತ್ತ ಹರಿಹರ ತಾಲೂಕಿನ ಹೊಳೆಸಿರಿಗೆರೆ ಗ್ರಾಮದ ರೈತರು, ಮಳೆಗಾಗಿ ಕತ್ತೆಗಳಿಗೆ ಮದುವೆ ಮಾಡಿಸಿದರು.

DONKEYS MARRIAGE
ಮಳೆಗಾಗಿ ಕತ್ತೆಗಳಿಗೆ ಮದುವೆ ಮಾಡಿಸಿದ ಗ್ರಾಮಸ್ಥರು (ETV Bharat)

ದಾವಣಗೆರೆ:ಹರಿಹರ ತಾಲೂಕಿನ ಹೊಳೆಸಿರಿಗೆರೆ ಗ್ರಾಮದಲ್ಲಿ ಮಳೆಗಾಗಿ ಕತ್ತೆಗಳ ಮದುವೆ ಮಾಡಲಾಯಿತು. ಹರಿಹರ ತಾಲೂಕಿನ ಸಾಕಷ್ಟು ಕಡೆ ಒಳ್ಳೆಯ ಮಳೆಯಾಗಿದೆ. ಅದರೆ, ಹೊಳೆಸಿರಿಗೆರೆ ಗ್ರಾಮದಲ್ಲಿ ಈವರೆಗೂ ಸಮರ್ಪಕ ಮಳೆಯಾಗಿಲ್ಲ. ಭೀಕರ ಬರಗಾಲ ಆವರಿಸಿದೆ. ಹೀಗೆ ಮಾಡಿದರೆ ಮಳೆ ಬರುತ್ತದೆಂದು ನಮ್ಮ ಪೂರ್ವಿಕರು ಹೇಳುತ್ತಿದ್ದರು. ಆ ನಂಬಿಕೆಯಿಂದ ಕತ್ತೆಗಳ ಮದುವೆ ಮಾಡುದ್ದೇವೆ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಹಾಲೇಶ್‌ ಕಣೇಕಲ್.

ಮಳೆಗಾಗಿ ಕತ್ತೆಗಳಿಗೆ ಮದುವೆ ಮಾಡಿಸಿದ ಗ್ರಾಮಸ್ಥರು (ETV Bharat)

ಮದುವೆಗೂ ಮುನ್ನ ಕತ್ತೆಗಳನ್ನು ಮದುಮಕ್ಕಳಂತೆ ಶೃಂಗಾರ ಮಾಡಿದ್ದ ಗ್ರಾಮಸ್ಥರು, ಅವುಗಳಿಗೆ ಬಾಸಿಂಗ ಕಟ್ಟಿ, ಕೊರಳಿಗೆ ಹೂಮಾಲೆ ಹಾಕುವ ಮೂಲಕ ಗ್ರಾಮದಲ್ಲಿ ಮೆರವಣಿಗೆ ಸಹ ಮಾಡಿದರು. ಬಳಿಕ ಶ್ರೀಯೋಗಿ ನಾರಾಯಾಣ ದೇವಸ್ಥಾನದಲ್ಲಿ ಶಾಸ್ರೋಕ್ತವಾಗಿ ಮದುವೆ ಮಾಡಿಸಿದರು. ಬಳಿಕ ದೇವಸ್ಥಾನಗಳಿಗೆ ಭೇಟಿ ನೀಡಿ ಮಳೆಗಾಗಿ ಪ್ರಾರ್ಥಿಸಿದರು.

ಇದನ್ನೂ ಓದಿ:ಕಾದು ಕೆಂಡವಾಗಿದ್ದ ರಾಯಚೂರು ಈಗ ಕೂಲ್​ ಕೂಲ್​: ಎಪಿಎಂಸಿಯಲ್ಲಿಟ್ಟಿದ್ದ ಭತ್ತ ನೀರಿನಲ್ಲಿ ಹೋಮ - Thunderstorm in Raichur

ABOUT THE AUTHOR

...view details