ಕರ್ನಾಟಕ

karnataka

By ETV Bharat Karnataka Team

Published : Mar 22, 2024, 10:18 PM IST

Updated : Mar 22, 2024, 10:42 PM IST

ETV Bharat / state

ಬಿಜೆಪಿಯವರದ್ದು ಪ್ರಧಾನಿ ಮೋದಿ ಅಲೆ, ನಮ್ಮದು ಕಾಂಗ್ರೆಸ್ ಅಲೆ: ಪ್ರಭಾ ಮಲ್ಲಿಕಾರ್ಜುನ್ - Prabha Mallikarjun

ಬಿಜೆಪಿಯಲ್ಲಿ ಯಾರೇ ಅಭ್ಯರ್ಥಿಯಾದರೂ ಸ್ಪರ್ಧೆ ಇದ್ದೇ ಇರುತ್ತದೆ, ಚುನಾವಣೆ ಎಂದ ಮೇಲೆ ಹೋರಾಟವೂ ಇರುತ್ತದೆ ಎಂದು ದಾವಣಗೆರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ​ ಪ್ರಭಾ ಮಲ್ಲಿಕಾರ್ಜುನ್ ಹೇಳಿದ್ದಾರೆ.

davanagere-congress-candidate-prabha-mallikarjun-reaction-on-lok-sabha-election
ಬಿಜೆಪಿಯವರದ್ದು ಪ್ರಧಾನಿ ಮೋದಿ ಅಲೆ, ನಮ್ಮದು ಕಾಂಗ್ರೆಸ್ ಅಲೆ: ಪ್ರಭಾ ಮಲ್ಲಿಕಾರ್ಜುನ್

ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ:ನಿನ್ನೆ ಎಐಸಿಸಿಯಿಂದ ಅಧಿಕೃತವಾಗಿ ನನ್ನನ್ನು ದಾವಣಗೆರೆ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ. ಚುನಾವಣೆಗೆ ಕೇವಲ 40 ದಿನಗಳು ಮಾತ್ರ ಇದ್ದು, ಎಲ್ಲ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರು ನನ್ನ ಗೆಲುವಿಗೆ ಶ್ರಮಿಸುತ್ತಾರೆ ಎಂದು ದಾವಣಗೆರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ​ ಪ್ರಭಾ ಮಲ್ಲಿಕಾರ್ಜುನ್​ ವಿಶ್ವಾಸ ವ್ಯಕ್ತಪಡಿಸಿದರು.

ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವಾಗಲೂ ನಾನು ಲೋಕಸಭಾ ಅಭ್ಯರ್ಥಿ ಎಂದು ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಮಾಧ್ಯಮದವರು, ಮುಖಂಡರು, ಕಾರ್ಯಕರ್ತರು ಸಾಕಷ್ಟು ಬಾರಿ ಅಭ್ಯರ್ಥಿ ಆಗ್ತೀರೋ ಇಲ್ಲವೋ ಎಂಬುದನ್ನು ಕೇಳುತ್ತಿದ್ದರು. ಈ ಪ್ರಶ್ನೆಗೆ ಉತ್ತರ ನೀಡುವ ಸಮಯ ಈಗ ಬಂದಿದೆ. ಕ್ಷೇತ್ರದ ಶಾಸಕರು, ಮುಖಂಡರ ಅಭಿಪ್ರಾಯ ಪಡೆದು ಟಿಕೆಟ್ ಅಂತಿಮಗೊಳಿಸಲಾಗಿದೆ. ಈ ನಿರ್ಧಾರಕ್ಕೆ ಶಾಮನೂರು ಶಿವಶಂಕರಪ್ಪನವರು, ಮಲ್ಲಿಕಾರ್ಜುನ್​ ಹಾಗೂ ನಾವು ಬದ್ಧರಾಗಿದ್ದೇವೆ. ಬಿಜೆಪಿಯಲ್ಲಿ ಯಾರೇ ಅಭ್ಯರ್ಥಿಯಾದರೂ ಸ್ಪರ್ಧೆ ಇದ್ದೇ ಇರುತ್ತದೆ, ಚುನಾವಣೆ ಎಂದ ಮೇಲೆ ಹೋರಾಟವೂ ಇರುತ್ತದೆ ಎಂದರು.

ದಾವಣಗೆರೆ ಲೋಕಸಭಾ ಕ್ಷೇತ್ರದ ಎಂಟು ಕ್ಷೇತ್ರಗಳ ಪೈಕಿ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಎಲ್ಲರೂ ಚುನಾವಣೆಯಲ್ಲಿ ಗೆಲುವಿಗೆ ಶ್ರಮಿಸುವುದಾಗಿ ಭರವಸೆ ನೀಡಿದ್ದಾರೆ. ಅವರೆಲ್ಲರನ್ನು ಕರೆಸಿ ಒಂದು ದಿನ ಸಭೆ ನಡೆಸುತ್ತೇನೆ. ನಮ್ಮದು ಯಾವುದೇ ಅಸ್ತ್ರ ಇಲ್ಲ, ಅಭಿವೃದ್ಧಿ ಕೆಲಸಗಳೇ ನಮಗೆ ಶ್ರೀರಕ್ಷೆ. ಬಿಜೆಪಿಯವರದ್ದು ಮೋದಿ ಅಲೆ ಇದ್ದರೆ, ನಮ್ಮದು ಮಾತ್ರ ಕಾಂಗ್ರೆಸ್ ಅಲೆ. ಜನರು ಅಭಿವೃದ್ಧಿ ಕೆಲಸಗಳನ್ನು ನೋಡಿಕೊಂಡು ನಮಗೆ ಮತ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜನರ ಸಮಸ್ಯೆಗೆ ಯಾರು ಸ್ಪಂದಿಸುತ್ತಾರೆ, ಪ್ರತಿನಿಧಿಸುತ್ತಾರೆಯೋ ಅಂಥವರನ್ನು ಆಯ್ಕೆ ಮಾಡಬೇಕು ಎಂಬುದು ಕ್ಷೇತ್ರದ ಜನರ ಅಭಿಮತವಾಗಿದೆ. ಒಳ್ಳೆಯ ಅಭ್ಯರ್ಥಿ ಗೆಲ್ಲಿಸಬೇಕು ಎಂದು ಮತದಾರರು ನಿರ್ಧರಿಸಿದ್ದು, ಪ್ರಜ್ಞಾವಂತ ಮತದಾರರು ಬೆಂಬಲಿಸಬೇಕು. ನನಗೆ ಗೆಲ್ಲುವ ವಿಶ್ವಾಸ ಇದೆ. ರಾಜ್ಯ ಸರ್ಕಾರದ ಗ್ಯಾರಂಟಿಗಳು, ಮಹಿಳೆಯರಿಗೆ ನೀಡಿರುವ ಸೌಲಭ್ಯಗಳನ್ನು ತಿಳಿಸಿಕೊಡುವ ಕೆಲಸ ಮಾಡುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಅಲೆ ನೋಡಿಕೊಂಡು ಮತ ಹಾಕುವುದಕ್ಕಿಂತ ಜನರಿಗೆ ಸ್ಪಂದಿಸುವ, ಕೆಲಸ ಮಾಡುವವರಿಗೆ ಮತ ನೀಡಿ ಎಂದು ಮನವಿ ಮಾಡಿದರು.

ಗಾಯತ್ರಿ ಸಿದ್ದೇಶ್ವರ ಹೇಳಿಕೆಗೆ ಪ್ರಭಾ ತಿರುಗೇಟು: ಲೋಕಸಭೆ ಚುನಾವಣೆಯಲ್ಲಿ ತಾಯಿ - ಮಗಳ ನಡುವೆ ಗೆಲುವಿಗೆ ಹೋರಾಟ ಎಂಬ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಹೇಳಿಕೆಗೆ ಪ್ರತಿಕ್ರಿಯಿಸಿ, ಭಾರತೀಯ ಸಂಸ್ಕೃತಿಯಲ್ಲಿ ತಾಯಿ ಮಗಳ ಸಂಬಂಧಕ್ಕೆ ಬೆಲೆ ಇದೆ, ಗೌರವ ಇದೆ. ಆದರೆ ಚುನಾವಣೆಯೆಂದ ಮೇಲೆ ಗೆಲುವಿಗೆ ಹೋರಾಟ ಮಾಡುವುದಷ್ಟೇ ಮುಖ್ಯ ಎಂದು ತಿರುಗೇಟು ನೀಡಿದರು.

ಇದನ್ನೂ ಓದಿ:ಬೆಳಗಾವಿ, ಚಿಕ್ಕೋಡಿಯಲ್ಲಿ ಸಚಿವರ ಮಕ್ಕಳಿಗೆ ಮಣೆ: ಬಿಜೆಪಿ ಹಿರಿಯರ ವಿರುದ್ಧ ಅಖಾಡಕ್ಕೆ ಧುಮುಕಿದ ಕಿರಿಯರು - Lok Sabha Election

Last Updated : Mar 22, 2024, 10:42 PM IST

ABOUT THE AUTHOR

...view details