ಮೈಸೂರು:ದಸರಾ ಮಹೋತ್ಸವದಲ್ಲಿ ಕುಸ್ತಿ ಅಂತಿಮ ಹಣಾಹಣಿಯಲ್ಲಿ ಜಯಶಾಲಿಯಾದ ಪಟುಗಳು ಆಯಾ ವಿಭಾಗದಲ್ಲಿ 'ದಸರಾ ಕೇಸರಿ', 'ದಸರಾ ಕಂಠೀರವ', 'ದಸರಾ ಕುಮಾರ', 'ದಸರಾ ಕಿಶೋರ' ಹಾಗೂ 'ದಸರಾ ಕಿಶೋರಿ' ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ಫೈನಲ್ ಪಂದ್ಯಗಳು ನಡೆದವು.
ದಸರಾ ಕೇಸರಿ ಪ್ರಶಸ್ತಿ: ಮುಧೋಳದ ಸದಾಶಿವ ನಳವಡೆ ವಿರುದ್ಧ ದಾವಣಗೆರೆಯ ಬಸವರಾಜ್ ಪಾಟೀಲ್ 8 ಅಂಕಗಳ ಅಂತರದಿಂದ ಜಯ ಸಾಧಿಸಿ ದಸರಾ ಕೇಸರಿ ಪ್ರಶಸ್ತಿಗೆ ಭಾಜನರಾದರು.
ದಸರಾ ಕಂಠೀರವ ಪ್ರಶಸ್ತಿ:ಬಾಪೂರಾವ್ ಶಿಂಧೆ ವಿರುದ್ಧ ಬಾಗಲಕೋಟೆಯ ಶಿವಯ್ಯ ಪೂಜಾರಿ 6 ಆರು ಅಂಕ ಗಳಿಸುವ ಮೂಲಕ ವಿಜಯ ಸಾಧಿಸಿ ದಸರಾ ಕಂಠೀರವ ಪ್ರಶಸ್ತಿ ಪಡೆದರು.