ಕರ್ನಾಟಕ

karnataka

ETV Bharat / state

ಬಳ್ಳಾರಿ ಜೈಲಿನಿಂದ ದರ್ಶನ್ ಬಿಡುಗಡೆ: ಪತ್ನಿ ಜೊತೆ ಬೆಂಗಳೂರಿನತ್ತ ಪ್ರಯಾಣ

ಹೈಕೋರ್ಟ್ 6 ವಾರಗಳ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ನಟ ದರ್ಶನ್ ಇಂದು ಸಂಜೆ ಬಳ್ಳಾರಿ ಜೈಲಿನಿಂದ ಬಿಡುಗಡೆಯಾದರು.

ಬಳ್ಳಾರಿ ಜೈಲಿನಿಂದ ನಟ ದರ್ಶನ್ ಬಿಡುಗಡೆ
ಬಳ್ಳಾರಿ ಜೈಲಿನಿಂದ ನಟ ದರ್ಶನ್ ಬಿಡುಗಡೆ (ETV Bharat)

By ETV Bharat Karnataka Team

Published : 5 hours ago

Updated : 5 hours ago

ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಅವರಿಗೆ ಇಂದು ಹೈಕೋರ್ಟ್‌ ಮಧ್ಯಂತರ ಜಾಮೀನು ನೀಡಿದ್ದು, ಸಂಜೆ ಬಳ್ಳಾರಿ ಜೈಲಿನಿಂದ ಬಿಡುಗಡೆಯಾಗಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ.

ಸಂಜೆ 6ಕ್ಕೆ ಜೈಲಿನಿಂದ ಹೊರಬಂದ ದರ್ಶನ್, ಪತ್ನಿ ವಿಜಯಲಕ್ಷ್ಮಿ ಜೊತೆ ಕಾರಿನಲ್ಲಿ ಹೊರಟರು. ಬಳ್ಳಾರಿಯಿಂದ ಆಂಧ್ರ ಪ್ರದೇಶದ ಗಡಿ‌ಯವರೆಗೂ ಪೊಲೀಸರು ಭದ್ರತೆ ನೀಡಿದ್ದಾರೆ. ಬಳಿಕ ಆಂಧ್ರದ ಅನಂತಪುರ ಮಾರ್ಗವಾಗಿ ಅವರು ಬೆಂಗಳೂರು ತಲುಪುವರು.

ಇದಕ್ಕೂ ಮೊದಲು, ಜೈಲಾಧಿಕಾರಿಗಳು ರಿಜಿಸ್ಟರ್ ಪುಸ್ತಕ ಹಾಗೂ ಹೈಕೋರ್ಟ್ ಜಾಮೀನು ಆದೇಶದ ಪ್ರತಿಯ ಮೇಲೆ ದರ್ಶನ್ ಅವರಿಂದ ಸಹಿ ಪಡೆದು ಬಿಡುಗಡೆಗೆ ಸೂಚಿಸಿದರು.

ಇದನ್ನೂ ಓದಿ:ಜಾಮೀನಿನ ಷರತ್ತು ಪೂರೈಸಿದ ದರ್ಶನ್ ಪರ ವಕೀಲರು: ಸಂಜೆಯೊಳಗೆ ದರ್ಶನ್ ಬಿಡುಗಡೆ ಸಾಧ್ಯತೆ

Last Updated : 5 hours ago

ABOUT THE AUTHOR

...view details