ಕರ್ನಾಟಕ

karnataka

ETV Bharat / state

ನಿವೇಶನದ ಮೇಲಿನ ಸಾಲ ಮರುಪಾವತಿಸದಿದ್ದರೆ ಸೈಟ್​ ಹರಾಜಿಗೆ ಬ್ಯಾಂಕ್​ಗೆ ನಿರ್ಬಂಧವಿಲ್ಲ: ಹೈಕೋರ್ಟ್ - HIGH COURT

ಸರ್ಕಾರದಿಂದ ಮಂಜೂರಾದ ನಿವೇಶನ ಅಡವಿಟ್ಟು ಸಾಲ ಪಡೆದು ಮರುಪಾವತಿ ಮಾಡಲಾಗದಿದ್ದರೆ, ಆ ಆಸ್ತಿ ಹರಾಜು ಹಾಕಲು ಸಾಲ ನೀಡಿದ ಬ್ಯಾಂಕ್‌ಗೆ ನಿರ್ಬಂಧ ವಿಧಿಸಲಾಗದು ಎಂದು ಹೈಕೋರ್ಟ್ ತಿಳಿಸಿದೆ.

high court
ಹೈಕೋರ್ಟ್ (ETV Bharat)

By ETV Bharat Karnataka Team

Published : Nov 23, 2024, 5:56 PM IST

ಬೆಂಗಳೂರು: ಆಶ್ರಯ ಯೋಜನೆಯಲ್ಲಿ ಮಂಜೂರಾದ ನಿವೇಶನದಲ್ಲಿ ಮನೆ ನಿರ್ಮಾಣಕ್ಕೆ ಅಡವಿಟ್ಟು ಸಾಲ ಪಡೆಯಲು ಸರ್ಕಾರ ಅನುಮತಿ ನೀಡಿದಾಗ ಆ ಸಾಲ ಮರುಪಾವತಿ ಮಾಡಲು ವಿಫಲವಾದಲ್ಲಿ, ಆಸ್ತಿಯನ್ನು ಹರಾಜು ಹಾಕುವುದಕ್ಕೆ ಸಾಲ ನೀಡಿದ ಬ್ಯಾಂಕ್‌ಗೆ ನಿರ್ಬಂಧ ವಿಧಿಸಲಾಗದು ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.

ಆಶ್ರಯ ಯೋಜನೆಯಲ್ಲಿ ಮಂಜೂರಾದ ನಿವೇಶನವನ್ನು ಅಡವಿಟ್ಟು ಸಾಲ ಪಡೆದು ಹರಾಜಿಗೆ ಅವಕಾಶ ನೀಡದೆ, ಹಿಂಬರಹ ನೀಡಿದ್ದ ಬ್ರಹ್ಮಾವರ ತಹಶೀಲ್ದಾರ್​​ ಕ್ರಮ ಪ್ರಶ್ನಿಸಿ ಸಾಲ ಮಂಜೂರು ಮಾಡಿದ್ದ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಲಿಮಿಟೆಡ್ ಹೈಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಐ.ಅರುಣ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

''ಆಶ್ರಯ ಯೋಜನೆಯಲ್ಲಿ ಮಂಜೂರಾದ ನಿವೇಶನವನ್ನು 25 ವರ್ಷಗಳ ಕಾಲ ಪರಾಭಾರೆ ಮಾಡಬಾರದು ಎಂಬ ಷರತ್ತು ವಿಧಿಸಲಾಗಿದೆ. ಆದರೆ, ಆ ನಿವೇಶನದಲ್ಲಿ ಮನೆ ನಿರ್ಮಾಣಕ್ಕಾಗಿ ಬ್ಯಾಂಕ್ ಸೇರಿದಂತೆ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುವುದಕ್ಕೆ ಅವಕಾಶ ನೀಡಲಾಗಿದೆ. ಆದರೆ, ಸಾಲ ಮರುಪಾವತಿ ಮಾಡದಿದ್ದಲ್ಲಿ ಹರಾಜು ಹಾಕಬಾರದು ಎಂದು ನಿರ್ಬಂಧಿಸುವುದಕ್ಕೆ ಸಾಧ್ಯವಿಲ್ಲ'' ಎಂದು ಪೀಠ ಹೇಳಿದೆ.

''ಪ್ರಕರಣದಲ್ಲಿ ಫಲಾನುಭವಿಯಾಗಿರುವವರು ತಮಗೆ ಮಂಜೂರಾದ ನಿವೇಶನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬುದಾಗಿ ಸರ್ಕಾರ ಅಭಿಪ್ರಾಯಪಟ್ಟಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳುವುದು. ಹಾಗೂ ಅವರ ಕುಟುಂಬವನ್ನು ಕಪ್ಪು ಪಟ್ಟಿಗೆ ಸೇರಿಸಿ ಸರ್ಕಾರದ ಯಾವುದೇ ಯೋಜನೆಗಳನ್ನು ಪಡೆದುಕೊಳ್ಳದಂತೆ ಕಾನೂನುಗಳನ್ನು ಮಾಡುವುದಕ್ಕೆ ಬ್ಯಾಂಕ್​ ಸ್ವತಂತ್ರವಾಗಿರಲಿದೆ'' ಎಂದು ಪೀಠ ತಿಳಿಸಿದೆ.

ಇದನ್ನೂ ಓದಿ:ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಸಂಸದ ಕೋಟ ಶ್ರೀನಿವಾಸ್​ ಪುಜಾರಿ ವಿರುದ್ಧದ ಪ್ರಕರಣ ರದ್ದು

''ನಿವೇಶನ ಅಡಮಾನವಿಟ್ಟುಕೊಂಡ ಸಂಸ್ಥೆ ಅಡಮಾನವನ್ನು ಜಾರಿಗೊಳಿಸುವ ಆಸ್ತಿ ಮಾರಾಟ ಮಾಡುವುದನ್ನು ಮತ್ತು ನಿಗದಿತ ಅವಧಿಯೊಳಗೆ ತನ್ನ ಸಾಲ ವಸೂಲಿ ಮಾಡುವುದನ್ನು ಕಾನೂನಿನಲ್ಲಿ ನಿಷೇಧಿಸುವುದಿಲ್ಲ'' ಎಂದಿರುವ ಪೀಠ, ಅರ್ಜಿದಾರ ಬ್ಯಾಂಕ್‌ಗೆ ತಹಶೀಲ್ದಾರ್ ಅವರು 2023ರ ಜುಲೈ 18ರಂದು ನೀಡಿದ್ದ ಹಿಂಬರಹವನ್ನು ರದ್ದುಪಡಿಸಿದೆ. ಜೊತೆಗೆ, ಅಡಮಾನ ಜಾರಿಗೊಳಿಸುವ ಸಂಬಂಧಪಟ್ಟ ಆಸ್ತಿಯನ್ನು ಮಾರಾಟ ಮಾಡಲು ಅರ್ಜಿದಾರರಿಗೆ ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿ ಆದೇಶಿಸಿದೆ.

ಪ್ರಕರಣದ ವಿವರ:ಕರ್ನಾಟಕ ಭೂ ಅನುದಾನ ನಿಯಮ 1969ರ ಅಡಿ ಪೂರ್ಣಿಮಾ ಎಂಬವರಿಗೆ ಆಶ್ರಯ ಯೋಜನೆಯಡಿ ರಾಜ್ಯ ಸರ್ಕಾರ ಉಚಿತ ನಿವೇಶನ ಮಂಜೂರು ಮಾಡಿತ್ತು. ನಿವೇಶನದಲ್ಲಿ ಮನೆ ನಿರ್ಮಾಣಕ್ಕಾಗಿ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಲಿಮಿಟೆಡ್‌ನಲ್ಲಿ ಈ ನಿವೇಶವನವನ್ನು ಅಡಮಾನವಿಟ್ಟು ಸಾಲ ಪಡೆದುಕೊಂಡಿದ್ದರು. ಆದರೆ, ಸಾಲವನ್ನು ಮರುಪಾವತಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಬ್ಯಾಂಕ್ ಅಡಮಾನ ಇಟ್ಟ ಆಸ್ತಿಯನ್ನು ಮಾರಾಟಕ್ಕೆ ತರುವ ಮೂಲಕ ಅಡಮಾನ ಜಾರಿಗೊಳಿಸಲು ಪ್ರಯತ್ನ ಮಾಡಿತ್ತು. ಇದಕ್ಕೆ ತಹಶೀಲ್ದಾರ್ ನಿರಾಕರಿಸಿ ಹಿಂಬರಹ ನೀಡಿದ್ದರು. ಇದನ್ನು ಪ್ರಶ್ನಿಸಿ ಬ್ಯಾಂಕ್ ಹೈಕೋರ್ಟ್ ಮೆಟ್ಟಿಲೇರಿತ್ತು.

ಇದನ್ನೂ ಓದಿ:ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಅರ್ಜಿ ಸಲ್ಲಿಸಲು ಅನುಮತಿ ಕೋರಿ ಎಜಿಗೆ ಮನವಿ

ABOUT THE AUTHOR

...view details