ಬೆಂಗಳೂರು:ಸದ್ಯ ಬಸ್ ಟಿಕೆಟ್ ದರ ಏರಿಕೆ ಪ್ರಸ್ತಾವನೆ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಜು ಕಾಗೆ ದರ ಏರಿಕೆ ಬಗ್ಗೆ ಹೇಳಿರೋದು ಅವರ ವೈಯಕ್ತಿಕ ಅಭಿಪ್ರಾಯ. ಸದ್ಯ ಬಸ್ ಟಿಕೆಟ್ ದರ ಏರಿಕೆ ಪ್ರಸ್ತಾವನೆ ಇಲ್ಲ ಎಂದು ತಿಳಿಸಿದರು.
ಮುಡಾ ಬಗ್ಗೆ ಬಿಜೆಪಿಯವರು ಮಾತಾಡ್ತಾರೆ. ಹಗರಣ ಅಂತಾರೆ, ನಡೆದಿರೋದು ಯಾರ ಕಾಲದಲ್ಲಿ? ಆಗ ಯಡಿಯೂರಪ್ಪ ಸಿಎಂ ಆಗಿದ್ರು, ಬಿಜೆಪಿಯವರೇ ಸಚಿವರಾಗಿದ್ರು. ಮುಡಾ ಅಧ್ಯಕ್ಷರು ಬಿಜೆಪಿಯವರೇ. ಹಗರಣಕ್ಕೆ ಬಿಜೆಪಿಯವರೇ ಕಾರಣ ಎಂದು ಆರೋಪಿಸಿದರು.