ಬೆಂಗಳೂರು:ಪಾಸ್‌ಪೋರ್ಟ್ ವೆರಿಫಿಕೇಷನ್ ಸಂದರ್ಭದಲ್ಲಿ ಯುವತಿಗೆ ಕಿರುಕುಳ ನೀಡಿದ ಆರೋಪ ಪೊಲೀಸ್ ಕಾನ್ಸ್‌ಟೇಬಲ್‌ವೊಬ್ಬರ ವಿರುದ್ದ ಕೇಳಿ ಬಂದಿದೆ.
ಬ್ಯಾಟರಾಯನಪುರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮಹಿಳಾ ಟೆಕ್ಕಿಯಿಂದ ಆರೋಪ ಕೇಳಿ ಬಂದ ಬೆನ್ನಲ್ಲೇ, ಅಸಭ್ಯ ವರ್ತನೆ ತೋರಿದ ಕಾನ್ಸ್‌ಟೇಬಲ್ ಕಿರಣ್ ಎಂಬಾತನನ್ನು ಅಮಾನತುಗೊಳಿಸಲಾಗಿದೆ. ಬಾಪೂಜಿ ನಗರದ ನಿವಾಸಿಯಾಗಿರುವ ಯುವತಿಯೊಬ್ಬರು ವಿದೇಶದಲ್ಲಿ ಉನ್ನತ ವ್ಯಾಸಂಗ ಪಡೆಯಲು ಇತ್ತೀಚೆಗೆ ಪಾಸ್ಪೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಪಾಸ್‌ಪೋರ್ಟ್ ವೆರಿಫಿಕೇಷನ್ಗೆ ಎಂದು ಯುವತಿಯ ಮನೆಗೆ ತೆರಳಿದ್ದ ಬ್ಯಾಟರಾಯನಪುರ ಠಾಣೆಯ ಪೊಲೀಸ್ ಕಾನ್ಸ್‌ಟೇಬಲ್ ಕಿರಣ್, ಅಸಭ್ಯ ವರ್ತನೆ ತೋರಿದ್ದ ಎಂದು ಆರೋಪಿಸಲಾಗಿದೆ.
ವೆರಿಫಿಕೇಷನ್ ನೆಪದಲ್ಲಿ ಯುವತಿಯ ಮನೆಗೆ ಬಂದ ಕಾನ್ಸ್‌ಟೇಬಲ್ ಕಿರಣ್, ಮನೆ ಒಳ ಪ್ರವೇಶಿಸಿ ಅರ್ಧ ಬಾಗಿಲು ಮುಚ್ಚಿದ್ದಾನೆ. ನಂತರ ಯುವತಿ ಬಳಿ, "ನಿಮ್ಮ ಸಹೋದರ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾನೆ. ನಿನ್ನ ಪಾಸ್‌ಪೋರ್ಟ್ ಕ್ಯಾನ್ಸಲ್ ಆಗಬಹುದು. ನೀನು ನನಗೆ ಸಹಕರಿಸಬೇಕು, ಬಾಗಿಲು ಹಾಕು" ಎಂದಿದ್ದಾನೆ. ಯುವತಿ ಒಪ್ಪದಿದ್ದಾಗ ತಾನೇ ಹೋಗಿ ಬಾಗಿಲು ಮುಚ್ಚಿದ್ದಾನೆ. ಅಲ್ಲದೇ, ಯಾರಿಗೂ ಹೇಳಬೇಡ, ಒಂದೇ ಒಂದ್ ಸಲ ಹಗ್ ಮಾಡುತ್ತೇನೆ" ಎಂದಿದ್ದಾಗಿ ಆರೋಪಿಸಲಾಗಿದೆ.