ಕರ್ನಾಟಕ

karnataka

ETV Bharat / state

ಹಾಸನದಲ್ಲಿ ಇಂದು ಕಾಂಗ್ರೆಸ್​ ಬೃಹತ್​ ಜನಕಲ್ಯಾಣ ಸಮಾವೇಶ: 1 ಲಕ್ಷ ಜನ ಸೇರುವ ನಿರೀಕ್ಷೆ, 2 ಸಾವಿರ ಪೊಲೀಸರ ನಿಯೋಜನೆ - CONGRESS PUBLIC WELFARE CONFERENCE

ಹಾಸನದ ಎಸ್​.ಎಂ. ಕೃಷ್ಣ ಕ್ರೀಡಾಂಗಣದಲ್ಲಿ ಇಂದು ಕಾಂಗ್ರೆಸ್​ ಪಕ್ಷದ ಬೃಹತ್​ ಜನಕಲ್ಯಾಣ ಸಮಾವೇಶ ನಡೆಯಲಿದೆ. ಕಾರ್ಯಕ್ರಮದ ಸಿದ್ಧತೆ ಹೇಗಿದೆ ಎಂಬುದರ ಸಂಕ್ಷಿಪ್ತ ವಿವರ ಇಲ್ಲಿದೆ.

CONGRESS PUBLIC WELFARE CONFERENCE
ಸಾಂದರ್ಭಿಕ ಚಿತ್ರ (IANS)

By ETV Bharat Karnataka Team

Published : Dec 5, 2024, 7:17 AM IST

ಹಾಸನ:ಇಂದು ನಡೆಯಲಿರುವ ಕಾಂಗ್ರೆಸ್​ನ ಸಮಾವೇಶಕ್ಕೆ ಸಿದ್ಧತೆಗಳು ಬಹುತೇಕ ಮುಗಿದಿದೆ. ಸುಮಾರು 1ಲಕ್ಷ ಜನರು ಬರುವ ನಿರೀಕ್ಷೆ ಇದೆ ಎನ್ನಲಾಗಿದೆ. ನಗರದ ಸುತ್ತಲು ಬ್ಯಾನರ್​ ಬಂಟಿಂಗ್​​ಗಳು​​ ರಾರಾಜಿಸುತ್ತಿವೆ.

ಹಾಸನ ನಗರದ ಹೊರಹೊಲಯದಲ್ಲಿ ನಿರ್ಮಣವಾಗಿರುವ ಎಸ್​.ಎಂ. ಕೃಷ್ಣ ಕ್ರೀಡಾಂಗಣದಲ್ಲಿ ಇಂದು ಕಾಂಗ್ರೆಸ್​ ಪಕ್ಷದ ಬೃಹತ್​ ಜನಕಲ್ಯಾಣ ಸಮಾವೇಶ ನಡೆಯಲಿದೆ. ಕಾಂಗ್ರೆಸ್​ ಸರ್ಕಾರದ ಸುಮಾರು 20ಕ್ಕೂ ಹೆಚ್ಚು ಸಚಿವರು ಒಂದೇ ವೇದಿಕೆಯ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

2 ಸಾವಿರ ಪೊಲೀಸ್ ನಿಯೋಜನೆ:ಸಮಾವೇಶದ ಭದ್ರತೆಗಾಗಿ 5 ಎಸ್ಪಿ, 6 ಹೆಚ್ಚುವರಿ ಎಸ್ಪಿ, 12 ಡಿವೈಎಸ್ಪಿ, 40 ಇನ್ಸ್ಪೆಕ್ಟರ್​ ಮತ್ತು 80 ಪಿ.ಎ.ಸ್.ಐಗಳನ್ನು ಒಳಗೊಂಡ ಸುಮಾರು 2,000 ಪೊಲೀಸರನ್ನು ನೆರೆ ಜಿಲ್ಲೆಗಳಾದ ಮಂಡ್ಯ, ಮೈಸೂರು ಕೊಡಗಿನಿಂದ ಕರೆಸಿಕೊಳ್ಳಲಾಗಿದೆ.

1,200 ಬಸ್​ ವ್ಯವಸ್ಥೆ:ಕಾರ್ಯಕ್ರಮಕ್ಕೆ ಹಾಸನ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಜನರನ್ನು ಕರೆ ತರಲು ಹಾಸನ ವಿಭಾಗ ಒಂದರಿಂದಲೇ 500ಕ್ಕೂ ಹೆಚ್ಚು ಬಸ್​ಗಳನ್ನು ಬಾಡಿಗೆಗೆ ಪಡೆಯಲಾಗಿದೆಯಂತೆ. ಹೀಗಾಗಿ ಸಾಮಾನ್ಯ ಪ್ರಯಾಣಿಕರಿಗೆ ತೊಂದರೆಯಾಗದಂತೆ ಬೆಂಗಳೂರಿನಿಂದ ಬಿಎಂಟಿಸಿ ಬಸ್​​​ಗಳ ವ್ಯವಸ್ಥೆ ಮಾಡಲಾಗಿದ್ದು, ಬೆಂಗಳೂರಿನಿಂದ ಹಾಸನ, ಮಂಗಳೂರು, ಚಿಕ್ಕಮಗಳೂರು, ಮಡಿಕೇರಿ, ಧರ್ಮಸ್ಥಳ ಸೇರಿದಂತೆ 400 ಬಸ್​ಗಳನ್ನು ಹೆಚ್ಚುವರಿಯಾಗಿ ಓಡಿಸಲಾಗುತ್ತದೆಯಂತೆ.

ಹೊಳೆನರಸೀಪುರ ವಿಧಾನಸಭೆ ಕ್ಷೇತ್ರದಿಂದ ಕಾರ್ಯಕರ್ತರನ್ನು ಸಮಾವೇಶಕ್ಕೆ ಕರೆ ತರಲು ಸಂಸದ ಶ್ರೇಯಸ್​​​ ಎಂ.ಪಟೇಲ್​​ ಪೂರ್ವಭಾವಿ ಸಭೆ ನಡೆಸಿದ್ದರೇ, ಅರಸೀಕೆರೆ ಕ್ಷೇತ್ರದಿಂದ ಶಾಸಕ ಕೆ.ಎಂ.ಶಿವಲಿಂಗೇಗೌಡ, ಚನ್ನರಾಯಪಟ್ಟಣ ತಾಲೂಕಿನಿಂದ ಎಂ.ಎ.ಗೋಪಾಲಸ್ವಾಮಿ ನೇತೃತ್ವದಲ್ಲಿ ಸುಮಾರು 30ರಿಂದ 40ಸಾವಿರ ಜನರನ್ನು ಕರೆ ತರುವ ನಿಟ್ಟಿನಲ್ಲಿ 100ಕ್ಕೂ ಹೆಚ್ಚು ಬಸ್ ವ್ಯವಸ್ಥೆ ಮಾಡಿದ್ದಾರೆ.

ಇದನ್ನೂ ಓದಿ:ದೇಶದ GDPಯಲ್ಲಿ ಕರ್ನಾಟಕವೇ ಫಸ್ಟ್, ಇದಕ್ಕೆ ಸಹಕಾರ ಕ್ಷೇತ್ರದ ಕೊಡುಗೆ ಅಪಾರ: ಸಿಎಂ

ABOUT THE AUTHOR

...view details