ಬೆಂಗಳೂರು: ''ಉದ್ಯಮಿ ಗೌತಮ್ಅದಾನಿಯನ್ನು ಕೂಡಲೇ ಬಂಧಿಸಬೇಕು'' ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದಾರೆ. ಸದಾಶಿವನಗರದಲ್ಲಿ ಮಾತನಾಡಿದ ಅವರು, ''ಅದಾನಿ ಮಾಡುವುದು ನೋಡಿದರೆ ಕೂಡಲೇ ಮಿಲೇನಿಯರ್ಸ್ ಆಗಬೇಕು ಎಂಬ ಆಸೆಯಿದೆ. ಅವರಿಗೆ ಉತ್ತೇಜನ ಮಾಡುತ್ತಿರುವುದು ಪ್ರಧಾನಿ ಮೋದಿ, ಅಮಿತ್ ಶಾ. ಈ ವಿಚಾರವನ್ನು ಸಂಸತ್ನಲ್ಲಿ ಮಾತನಾಡುತ್ತೇವೆ. ಅವರನ್ನು ಕೂಡಲೇ ಬಂಧನ ಮಾಡಬೇಕು ಅಂತ ಒತ್ತಾಯ ಮಾಡುತ್ತೇವೆ'' ಎಂದರು.
''ಎಷ್ಟೋ ಸಲ ಅದಾನಿ ಅವರು ಕಾನೂನು ಬಾಹಿರ ಕೆಲಸ ಮಾಡುತ್ತಿದ್ದಾರೆ, ಮೋದಿ ಅದಾನಿಯನ್ನು ರಕ್ಷಣೆ ಮಾಡುತ್ತಿದ್ದಾರೆ. ಭ್ರಷ್ಟಾಚಾರದಲ್ಲಿ ಅವರು ಭಾಗಿಯಾಗಿದ್ದಾರೆ ಅಂತ ಹೇಳಿದ್ದೆವು. ಆದರೂ ಮೋದಿ ಒಂದು ಶಬ್ದ ಚಕಾರ ಎತ್ತಲಿಲ್ಲ. ಅಮಿತ್ ಶಾ ಕಡೆ ಇ.ಡಿ ಇದೆ, ಸಿಬಿಐ ಇದೆ. ನಾವು ಹೇಳಿದರೆ ಅದು ರಾಜಕೀಯ ಅಂತ ನೀವು ಹೇಳಬಹುದು. ಆದರೆ ವಿದೇಶದಲ್ಲಿ ಈಗ ಆರೋಪ ಮಾಡುತ್ತಿದ್ದಾರೆ'' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಅದಾನಿಯನ್ನು ಏಕೆ ಬಂಧಿಸುತ್ತಿಲ್ಲ, ರಕ್ಷಿಸುತ್ತಿರುವವರು ಯಾರು? ಸಿಎಂ ಸಿದ್ದರಾಮಯ್ಯ