ರಾಮನಗರ :ನನಗೆ ಗೆಲ್ಲುವ ವಿಶ್ವಾಸ ಇದ್ದು, ಸರ್ಕಾರವೇ ಬಂದು ನನ್ನ ಪರವಾಗಿ ಪ್ರಚಾರ ನಡೆಸಿದೆ. ನನ್ನ ವಿರುದ್ದ ದೈತ್ಯ ಶಕ್ತಿ, ಒಕ್ಕಲಿಗರ ಬೆಂಬಲ ಇರೋ ವಂಶದ ಕುಡಿ ನನ್ನ ವಿರುದ್ಧ ಸ್ಪರ್ಧೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸಿ. ಪಿ ಯೋಗೇಶ್ವರ್ ತಿಳಿಸಿದರು.
ಚನ್ನಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಾರಿ ಜಿದ್ಧಾಜಿದ್ದಿಯ ಕಣವಾಗಿ ಚನ್ನಪಟ್ಟಣ ಉಪಚುನಾವಣೆ ನಡೆಯಿತು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ 15 ಸಾವಿರ ಮತ ಪಡೆದಿತ್ತು. ಈಗ ನಾವು ಒಂದು ಲಕ್ಷಕ್ಕಿಂತ ಅಧಿಕ ಮತ ಪಡೆದರೆ ಗೆಲುವು ಸಿಗುತ್ತದೆ. ಈವರೆಗೂ ನನ್ನ ಎಲ್ಲಾ ಚುನಾವಣೆಯಲ್ಲೂ 80 ರಿಂದ 90 ಸಾವಿರ ಮತಗಳನ್ನು ಪಡೆಯುತ್ತಿದ್ದೆ. ಈಗ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದೇನೆ, ಗೆಲ್ಲುವ ವಿಶ್ವಾಸವಿದೆ ಎಂದರು.
ಆದರೆ, ಈ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಎರಡೂ ಇಲ್ಲಿ ವರ್ಕ್ ಆಗಬಹುದು. ಹಾಗಂತ ಹತಾಶೆ ಇಲ್ಲ, ಸಮಬಲದ ಹೋರಾಟ ಅಷ್ಟೇ. ನಾನು ಕಾಂಗ್ರೆಸ್ ಸೇರುವ ಅನಿವಾರ್ಯ ಸ್ಥಿತಿಯನ್ನ ಕುಮಾರಸ್ವಾಮಿ ನಿರ್ಮಾಣ ಮಾಡಿದ್ದರು. ನಾನು ಕಟ್ಟಿದ ಬಿಜೆಪಿ ಬಿಟ್ಟು ಕಾಂಗ್ರೆಸ್ಗೆ ಸೇರುವ ಪರಿಸ್ಥಿತಿ ಬಂತು ಎಂದು ಹೇಳಿದರು.