ಕರ್ನಾಟಕ

karnataka

ETV Bharat / state

ಮಾಜಿ ಪ್ರಧಾನಿ ದೇವೇಗೌಡರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ಸಿಎಂ ಸಿದ್ದರಾಮಯ್ಯ - DEVEGOWDA BIRTHDAY - DEVEGOWDA BIRTHDAY

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಜನ್ಮದಿನಕ್ಕೆ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಎಕ್ಸ್ ಪೋಸ್ಟ್​​ನಲ್ಲಿ ಶುಭಾಶಯ ಕೋರಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡರ
ಮಾಜಿ ಪ್ರಧಾನಿ ದೇವೇಗೌಡ (ETV Bharat)

By ETV Bharat Karnataka Team

Published : May 18, 2024, 3:19 PM IST

ಬೆಂಗಳೂರು:ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಜನ್ಮದಿನಕ್ಕೆ ಸಿಎಂ ಸಿದ್ದರಾಮಯ್ಯ ಅವರು ಶುಭಾಶಯ ಕೋರಿದ್ದಾರೆ. ಎಕ್ಸ್ ಪೋಸ್ಟ್ ಮೂಲಕ ಶುಭಾಶಯ ಕೋರಿರುವ ಅವರು, ಜನತಾದಳ ( ಜಾತ್ಯತೀತ) ಪಕ್ಷದ ವರಿಷ್ಠರಾದ ಹೆಚ್.ಡಿ ದೇವೇಗೌಡರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ತಮಗೆ ಇನ್ನಷ್ಟು ಕಾಲ ಆಯಸ್ಸು - ಉತ್ತಮ ಆರೋಗ್ಯವನ್ನು ದೇವರು ನೀಡಲಿ, ತಮ್ಮ ಅನುಭವ, ಮಾರ್ಗದರ್ಶನದ ಮುಂದೆಯೂ ನಾಡಿಗೆ ದೊರಕಲಿ ಎಂದು ಹಾರೈಸಿದ್ದಾರೆ.

ಸರಳವಾಗಿ ಹುಟ್ಟುಹಬ್ಬ ಆಚರಣೆ: ಇಂದು‌ ಮಾಜಿ ಪ್ರಧಾನಿ ದೇವೇಗೌಡರು, 92ನೇ ವಯಸ್ಸಿಗೆ ಪದಾರ್ಪಣೆ ಮಾಡಿದ್ದಾರೆ. ಇಂದು ದೇವೇಗೌಡರ ಮನೆಯಲ್ಲೇ ಸರಳವಾಗಿ ಜನ್ಮದಿನ ಆಚರಿಸಲಾಯಿತು. ಮನೆಗೆ ಗಣ್ಯರು ಆಗಮಿಸಿ ಶುಭಾಶಯ ಕೋರಿದರು. ಮನೆಯ ಬಳಿ ಜನ್ಮದಿನಕ್ಕೆ ಶುಭಕೋರಿ ಅಭಿಮಾನಿಗಳು ಫ್ಲೆಕ್ಸ್ ಹಾಕಿದ್ದಾರೆ.

ಇದನ್ನೂಓದಿ:ಟೀಂ ಇಂಡಿಯಾದ ಮುಖ್ಯ ತರಬೇತುದಾರನ ಸ್ಥಾನಕ್ಕೆ ಗಂಭೀರ್ ಸಂಪರ್ಕಿಸಿದ ಬಿಸಿಸಿಐ - New Head Coach

ABOUT THE AUTHOR

...view details