ಕರ್ನಾಟಕ

karnataka

ETV Bharat / state

ಕೋವಿಡ್ ಹಗರಣ : ನ್ಯಾ. ಮೈಕಲ್ ಡಿ ಕುನ್ಹಾ ‌ಕಮಿಟಿ ವರದಿ ಆಧಾರದ ಮೇಲೆ ತನಿಖೆ ಮಾಡುತ್ತೇವೆ - ಸಿಎಂ ಸಿದ್ದರಾಮಯ್ಯ

ಸಿಎಂ ಸಿದ್ದರಾಮಯ್ಯ ಅವರು ಕೋವಿಡ್​ ಹಗರಣದ ಕುರಿತು ಮಾತನಾಡಿದ್ದಾರೆ. ಸಬ್ ಕಮಿಟಿ ರಿಪೋರ್ಟ್​ ಬಂದ ನಂತರ ಕ್ಯಾಬಿನೆಟ್​ನಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

cm-siddaramaiah
ಸಿಎಂ ಸಿದ್ದರಾಮಯ್ಯ (ETV Bharat)

By ETV Bharat Karnataka Team

Published : Nov 10, 2024, 8:27 PM IST

ಹುಬ್ಬಳ್ಳಿ : ರಾಜ್ಯದಲ್ಲಿ ಕೋವಿಡ್ ಹಗರಣ ತನಿಖೆ ವಿಚಾರ ಇನ್ನೂ ಕ್ಯಾಬಿನೆಟ್ ಮುಂದೆ ಬಂದಿಲ್ಲ. ಸಬ್ ಕಮಿಟಿ ರಿಪೋರ್ಟ್ ಕೊಡಬೇಕು. ನಾವು ಮೈಕಲ್ ಡಿ ಕುನ್ಹಾ ಅಧ್ಯಕ್ಷತೆಯಲ್ಲಿ ‌ಕಮಿಷನ್ ಮಾಡಿದ್ದೇವೆ. ಅವರ ವರದಿ ಆಧಾರದ ಮೇಲೆ ಕ್ಯಾಬಿನೆಟ್​ನಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಗೊಡ್ಡು ಬೆದರಿಕೆಗೆ ಹೆದರುವುದಿಲ್ಲ ಎಂಬ ಸಂಸದ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಭಾನುವಾರ ನಗರದ ವಿಮಾನ ನಿಲ್ದಾಣದಲ್ಲಿ ಪ್ರತಿಕ್ರಿಯಿಸಿದ ಸಿಎಂ, ಇದ್ಯಾವುದೂ ಗೊಡ್ಡು ಬೆದರಿಕೆ ಅಲ್ಲ. ನ್ಯಾ. ಮೈಕಲ್ ಡಿ ಕುನ್ಹಾ ಅಧ್ಯಕ್ಷತೆಯಲ್ಲಿ ನಾವು ಕಮಿಷನ್ ರಚಿಸಿದ್ದೇವೆ. ಅವರ ರಿಪೋರ್ಟ್​ ಆಧಾರದ ಮೇಲೆ ಕ್ರಿಮಿನಲ್ ಆ್ಯಕ್ಷನ್ ತೆಗೆದುಕೊಳ್ಳಬೇಕು ಎಂದು ದಿನೇಶ್​ ಗುಂಡೂರಾವ್ ಹೇಳಿರುವುದು ಎಂದರು.

ಕೋವಿಡ್ ಹಗರಣ : ನ್ಯಾ. ಮೈಕಲ್ ಡಿ ಕುನ್ಹಾ ‌ಕಮಿಟಿ ವರದಿ ಆಧಾರದ ಮೇಲೆ ತನಿಖೆ ಎಂದ ಸಿಎಂ (ETV Bharat)

ಗೊಡ್ಡು ಬೆದರಿಕೆ ಅಂದ್ರೆ ಏನು? ಕ್ರಿಮಿನಲ್ ಆ್ಯಕ್ಷನ್ ತಗೋತಿವಿ ಅಂದಿದ್ದಾರೆ. ಲೂಟಿ ಹೊಡೆದು ಗೊಡ್ಡು ಬೆದರಿಕೆ ಅಂದ್ರೆ ಹೇಗೆ? ಸಬ್ ಕಮಿಟಿ ರಿಪೋರ್ಟ್ ಬರಲಿ. ನಂತರ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಮಾಜಿ ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಅವರು ನ್ಯಾಯಾಂಗದ ಮೇಲೆ ನನಗೆ ನಂಬಿಕೆ ಇದೆ ಎಂಬ ಮಾತಿನ ಕುರಿತು ಪ್ರತಿಕ್ರಿಯಿಸಿದ ಅವರು, ನ್ಯಾಯಾಂಗ ಯಡಿಯೂರಪ್ಪನವರಿಗೆ ಮಾತ್ರ ಇದೆಯಾ? ತಪ್ಪು ಮಾಡಿದವರಿಗೆ ಶಿಕ್ಷೆ ಕೊಡೋಕೆ ನ್ಯಾಯಾಂಗ ಇದೆ. ತಪ್ಪು ಸಾಬೀತು ಆದ ಮೇಲೆ‌ ಯಡಿಯೂರಪ್ಪ ಏನು ಮಾಡ್ತಾರೆ‌ ಎಂದು ಪ್ರಶ್ನಿಸಿದರು.

ಕಾಂಗ್ರೆಸ್​ ಸರ್ಕಾರದ ಅವಧಿಯಲ್ಲಿ ಯಡಿಯೂರಪ್ಪ ಮೇಲೆ ಕೊಲೆ ಪ್ರಯತ್ನ ನಡೆದಿತ್ತು ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ, ಅವಾಗ ಯಾಕೆ ಕೇಸ್ ಹಾಕಿಲ್ಲ. ನಿಜ ಇದ್ದಿದ್ದರೆ ಕೇಸ್ ಹಾಕಬೇಕಿತ್ತು ಅಲ್ವಾ ಎಂದು ಪ್ರಶ್ನಿಸಿದರು.

ಅಬಕಾರಿ ಇಲಾಖೆಯಲ್ಲಿ 700 ಕೋಟಿ ಮಾಡೋಕೆ ಆಗುತ್ತಾ?: ಮಹಾರಾಷ್ಟ್ರ ಚುನಾವಣೆಗೆ ಕರ್ನಾಟಕದ ಅಬಕಾರಿ ಇಲಾಖೆ‌ಯ ದುಡ್ಡು ಬರ್ತಿದೆ ಎಂಬ ಮೋದಿ ಆರೋಪದ ಕುರಿತು ಮಾತನಾಡಿದ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ ಒಬ್ಬ ಪ್ರಧಾನಿಯಾಗಿ ಇಷ್ಟೊಂದು ಸುಳ್ಳು ಹೇಳೋದು ಆ ಸ್ಥಾನಕ್ಕೆ ಅಗೌರವ ತರುವಂತದ್ದು. ಅಬಕಾರಿ ಇಲಾಖೆಯಲ್ಲಿ 700 ಕೋಟಿ ರೂ. ಮಾಡೋಕೆ ಆಗುತ್ತಾ? ಎಂದು ಕೇಳಿದ್ರು.

ಪ್ರಧಾನ ಮಂತ್ರಿ ಸುಳ್ಳು ಹೇಳೋಕೆ ಇತಿಮಿತಿ ಇರಬೇಕು. ಅಬಕಾರಿ ಇಲಾಖೆಯವರು ನಮಗೆ ಯಾಕೆ ದುಡ್ಡು ಕೊಡ್ತಾರೆ?. ಬಿಜೆಪಿ ಹಾಗೂ ಮದ್ಯದ ಅಂಗಡಿ ಮಾಲೀಕರು ರಾಜಕೀಯ ಕಾರಣಕ್ಕಾಗಿ ಆರೋಪ ಮಾಡಿದ್ದಾರೆ. ಹಾಗಾದ್ರೆ 17 ಶಾಸಕರನ್ನು ಖರೀದಿ ಮಾಡಿದ್ದಾಗ ಎಷ್ಟು ಕೋಟಿ ಖರ್ಚು ಮಾಡಿರಬಹುದು?. ಎಲ್ಲಿಂದ ಬಂತು ಆ ದುಡ್ಡು?. ಸಿಎಂ ಆಗಬೇಕಾದ್ರೆ 2000 ಕೋಟಿ ಕೊಡಬೇಕು ಎಂದು ಯತ್ನಾಳ್ ಹೇಳಿದ್ದಾರಲ್ಲ? ಯಾವ ದುಡ್ಡು ಅದು? ವಿಜಯೇಂದ್ರ ಅಧ್ಯಕ್ಷರಾಗೋಕು ದುಡ್ಡು ಕೊಟ್ಟಿದ್ದಾರೆ ಅಂತಾರೆ. ಅದು ಯಾವ ದುಡ್ಡು? ಎಂದು ಸಿಎಂ ಪ್ರಶ್ನಿಸಿದರು.

ಸ್ನೇಹಮಯಿ ಕೃಷ್ಣ ಸುಳ್ಳು ಆರೋಪ ಮಾಡುತ್ತಿದ್ದಾರೆ: ಮುಡಾ ಸೈಟ್​ ವಿಚಾರವಾಗಿ ಸ್ನೇಹಮಯಿ ಕೃಷ್ಣ ಮತ್ತೊಂದು ದಾಖಲೆ ಬಿಡುಗಡೆ ಮಾಡಿದ್ದಾರೆ, ಮುದ್ರಾಂಕ ಶುಲ್ಕವನ್ನು ತಹಶೀಲ್ದಾರ್ ಬರೆಸಿದ್ದಾರೆ. ಇದಕ್ಕಿಂತ ಏನು ಸಾಕ್ಷಿ ಬೇಕು? ಎಂದು ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ದಾಖಲೆ ಬಿಡುಗಡೆ ವಿವಾದದಲ್ಲಿ ಹಣ ಚೆಕ್ ಮೂಲಕ ಕೊಟ್ಟಿದ್ದಾರಾ? ಸ್ನೇಹಮಯಿ ಕೃಷ್ಣ ಸುಳ್ಳು ಆರೋಪ ಮಾಡುತ್ತಿದ್ದಾರೆ. ದಾನ ಪತ್ರ ಮಾಡೋಕೆ ನನ್ನ ಭಾಮೈದ ಕೊಟ್ಟಿದ್ದು. ತಹಶಿಲ್ದಾರ್ ಏಕೆ ಕೊಡ್ತಾರೆ, ಎಸಿ ಯಾಕೆ ಕೊಡ್ತಾರೆ. ಸುಮ್ಮನೆ ಏನೋ ಹೇಳ್ತಾರೆ ಎಂದರು.

ಇದನ್ನೂ ಓದಿ :ಮೋದಿಯವರು ಎಲ್ಲಾ ಊರಲ್ಲಿ ಒಂದೊಂದು ಹೇಳ್ತಾರೆ : ಸಚಿವ ಸತೀಶ್​ ಜಾರಕಿಹೊಳಿ

ABOUT THE AUTHOR

...view details