ಬೆಂಗಳೂರು:ಮಂಡ್ಯದಲ್ಲಿ ಬಿಜೆಪಿಯವರೇ ಪ್ರಚೋದನೆ ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರಲ್ಲಿ ಇಂದು ಮಾತನಾಡಿದ ಅವರು, ಬಿಜೆಪಿಯವರು ಅನಗತ್ಯವಾಗಿ ವಿವಾದ ಸೃಷ್ಟಿಸುತ್ತಿದ್ದಾರೆ. ಅವರು ಅನುಮತಿ ತೆಗೆದುಕೊಂಡಿರುವುದು ರಾಷ್ಟ್ರೀಯ ಧ್ವಜ ಮತ್ತು ಕನ್ನಡ ಧ್ವಜ ಹಾರಿಸಲು. ಯಾವುದಕ್ಕೆ ಅನುಮತಿ ತೆಗೆದುಕೊಂಡಿದ್ದಾರೋ ಅದನ್ನು ಮಾಡುತ್ತಿದ್ದರೆ ಜಿಲ್ಲಾಡಳಿತ ಯಾಕೆ ಮಧ್ಯಪ್ರವೇಶ ಮಾಡುತ್ತಿತ್ತು? ಎಂದು ಸಮರ್ಥಿಸಿಕೊಂಡರು.
ಸಿದ್ದರಾಮಯ್ಯ ಹಿಂದೂ ವಿರೋಧಿ ಎಂಬ ಬಿಜೆಪಿ ಆರೋಪಕ್ಕೆ, ಅವರಿಗೆ ನನ್ನ ಮೇಲೆ ಬೇರೇನೂ ಹೇಳಲು ಇಲ್ಲವಲ್ಲ? ಅದಕ್ಕೆ ಹೀಗೆ ಹೇಳುತ್ತಿದ್ದಾರೆ. ನಾನು ಹಿಂದು. ಎಲ್ಲಾ ಧರ್ಮದ ಜನರನ್ನೂ ಪ್ರೀತಿಸುತ್ತೇನೆ. ಸೆಕ್ಯೂಲರಿಸಂ ಎಂದರೇನು?. ಸಂವಿಧಾನದಲ್ಲಿ ಏನು ಹೇಳಿದ್ದಾರೆ?. ಸಹಬಾಳ್ವೆ ಸಹಿಷ್ಣುತೆಯಲ್ಲಿ ನಂಬಿಕೆ ಇಟ್ಟುಕೊಂಡಿರುವವನು ನಾನು ಎಂದರು.
ಡಿಸಿಎಂ ಡಿಕೆಶಿ ಹೇಳಿದ್ದೇನು?:ಮಂಡ್ಯದಲ್ಲಿ ಬಿಜೆಪಿಗೆ ನೆಲೆ ಇಲ್ಲ. ನೆಲೆ ಗಟ್ಟಿ ಮಾಡುವುದಕ್ಕೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಟೀಕಿಸಿದ್ದಾರೆ.