ಕರ್ನಾಟಕ

karnataka

ETV Bharat / state

ವಿಜಯಪುರದಲ್ಲಿ ಯಾವ ರೈತರನ್ನೂ ಒಕ್ಕಲೆಬ್ಬಿಸುವುದಿಲ್ಲ: ಸಿಎಂ ಅಭಯ - WAQF LAND ISSUE

ವಿಜಯಪುರದ ರೈತರಿಗೆ ‌ವಕ್ಫ್ ಬೋರ್ಡ್ ನೀಡಿರುವ ನೋಟಿಸ್‌ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಸಿಎಂ, ನೋಟಿಸ್ ಕೊಟ್ಟರೆ ಅದನ್ನು ವಾಪಸ್​ ತೆಗೆದುಕೊಳ್ತಾರೆ. ಯಾವ ರೈತರನ್ನೂ ಒಕ್ಕಲೆಬ್ಬಿಸುವುದಿಲ್ಲ ಎಂದು ಹೇಳಿದ್ದಾರೆ.

CM REACTION ON WAQF LAND ISSUE
ಸಿಎಂ ಸಿದ್ದರಾಮಯ್ಯ (ETV Bharat)

By ETV Bharat Karnataka Team

Published : Oct 29, 2024, 3:41 PM IST

ಬೆಂಗಳೂರು:ವಿಜಯಪುರದಲ್ಲಿ ಯಾವ ರೈತರನ್ನೂ ಒಕ್ಕಲೆಬ್ಬಿಸುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅಭಯ ನೀಡಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಯಾವ ರೈತರನ್ನೂ ಒಕ್ಕಲೆಬ್ಬಿಸಲ್ಲ. ನಿನ್ನೆ ಕಂದಾಯ ಸಚಿವರು, ವಿಜಯಪುರ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್, ವಕ್ಫ್ ಸಚಿವ ಜಮೀರ್ ಅಹಮದ್ ಜಂಟಿ ಮಾಧ್ಯಮಗೋಷ್ಟಿ ನಡೆಸಿದ್ದಾರೆ. ವಿಜಯಪುರದಲ್ಲಿ ಯಾವ ರೈತರನ್ನೂ ಒಕ್ಕಲೆಬ್ಬಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸಿಎಂ ಸಿದ್ದರಾಮಯ್ಯ (ETV Bharat)

ರೈತರಿಗೆ ನೋಟಿಸ್ ಕೊಟ್ಟರೆ ಅದನ್ನು ವಾಪಸು ತೆಗೆದುಕೊಳ್ತಾರೆ. ಕಂದಾಯ ಸಚಿವರಿಗೆ ಹೇಳಿ ಎಲ್ಲೆಲ್ಲಿ ಈ ರೀತಿ ಆಗಿದೆ ಪರಿಶೀಲನೆಗೆ ತಿಳಿಸುತ್ತೇನೆ ಎಂದರು.

ಹೊಸ ನೇಮಕಾತಿ ಅಧಿಸೂಚನೆಗೆ ತಡೆ:ಒಳ ಮೀಸಲಾತಿ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ, ಒಳ ಮೀಸಲಾತಿ ಬಗ್ಗೆ ತೀರ್ಮಾನ ಮಾಡಿದ್ದೇವೆ. ಒಳ ಮೀಸಲಾತಿಗೆ ಎಲ್ರೂ ತಾತ್ವಿಕ ಒಪ್ಪಿಗೆ ನೀಡಿದ್ದಾರೆ. ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಏಕಸದಸ್ಯ ಆಯೋಗ ರಚಿಸುತ್ತೇವೆ. ಆಯೋಗ ನಂಬಲರ್ಹ ದತ್ತಾಂಶ ಪಡೆಯಲು ಮೂರು ತಿಂಗಳ ಒಳಗೆ ವರದಿ ನೀಡಬೇಕು. ಕೂಡಲೇ ಆಯೋಗ ರಚನೆ ಮಾಡುತ್ತೇವೆ ಎಂದು ತಿಳಿಸಿದರು.

ಯಾವ ನೇಮಕಾತಿ ಅಧಿಸೂಚನೆ ಆಗಿದೆ. ಅವುಗಳನ್ನು ಬಿಟ್ಟು ಉಳಿದಿದ್ದು ಯಾವುದೇ ಹೊಸ ನೇಮಕಾತಿ ಅಧಿಸೂಚನೆ ಮಾಡಲ್ಲ. ಮೂರು ತಿಂಗಳು ಅಷ್ಟೇ ತಡೆ. ಅಧಿಸೂಚನೆ ಆಗಿ ಪ್ರಕ್ರಿಯೆ ಆರಂಭವಾಗಿರುವುದನ್ನು ನಿಲ್ಲಿಸಲ್ಲ. ಹೊಸ ನೇಮಕಾತಿ ಅಧಿಸೂಚನೆ ಹೊರಡಿಸಲ್ಲ ಎಂದು ಇದೇ ವೇಳೆ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಇದನ್ನೂ ಓದಿ:ಸಾಮಾಜಿಕ ನ್ಯಾಯದ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೇ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ: ಸಿಎಂ

ABOUT THE AUTHOR

...view details