ಕರ್ನಾಟಕ

karnataka

ETV Bharat / state

ಹೊಸ ವರ್ಷಾಚರಣೆ: ರಿಲ್ಯಾಕ್ಸ್ ಮೂಡ್​ನಲ್ಲಿ ಸಿಎಂ-ಡಿಸಿಎಂ - CM AND DCM RELAXED MOOD

ಹೊಸ ವರ್ಷಾಚರಣೆ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ರಾಜಕೀಯ ಚಟುವಟಿಕೆಯಿಂದ ಬ್ರೇಕ್ ಪಡೆದಿದ್ದಾರೆ.

CM AND DCM RELAXED MOOD
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (IANS)

By ETV Bharat Karnataka Team

Published : Dec 31, 2024, 3:02 PM IST

ಬೆಂಗಳೂರು:ಹೊಸ ವರ್ಷಾಚರಣೆ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ರಿಲ್ಯಾಕ್ಸ್ ಮೂಡ್​ಗೆ ಜಾರಿದ್ದಾರೆ. ಸಿಎಂ ಸಿದ್ದರಾಮಯ್ಯ ರಾಜಕೀಯ ಚಟುವಟಿಕೆಗಳಿಂದ ಕೊಂಚ ವಿರಾಮ ಪಡೆದು ವಿಶ್ರಾಂತಿ ಪಡೆಯುತ್ತಿದ್ದರೆ, ಡಿಸಿಎಂ ಡಿ. ಕೆ. ಶಿವಕುಮಾರ್ ಕುಟುಂಬ ಸಹಿತ ವಿದೇಶಕ್ಕೆ ಹಾರಿದ್ದಾರೆ.

ಬಿಡುವಿಲ್ಲದ ಕಾರ್ಯಕ್ರಮ ಹಾಗೂ ಪ್ರವಾಸದಿಂದ‌ ದಣಿದಿರುವ ಸಿಎಂ ಸಿದ್ದರಾಮಯ್ಯ ಈಗಾಗಲೇ ವಿಶ್ರಾಂತಿ ಮೊರೆ ಹೋಗಿದ್ದಾರೆ. ಭಾನುವಾರದಿಂದ ಜ.2ರ ವರೆಗೆ ಸಿಎಂ ಸಿದ್ದರಾಮಯ್ಯ ವಿಶ್ರಾಂತಿಯಲ್ಲಿರಲಿದ್ದು, ಯಾವುದೇ ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದಿಲ್ಲ‌. ಜ. 2ರ ಬಳಿಕ ಬಜೆಟ್ ಪೂರ್ವಬಾವಿ ಸಭೆಗಳನ್ನು ನಡೆಸಲಿದ್ದಾರೆ.‌ ಡಿಸಿಎಂ ಕೂಡ ಇಯರ್ ಎಂಡ್ ವಿದೇಶ ಪ್ರವಾಸ ಕೈಗೊಂಡಿದ್ದಾರೆ.

ಡಿಸಿಎಂ ಡಿಕೆಶಿ ಇಯರ್ ಎಂಡ್ ವಿದೇಶ ಪ್ರವಾಸ:ಇತ್ತ ಡಿಸಿಎಂ ಡಿ. ಕೆ. ಶಿವಕುಮಾರ್ ಕೂಡ ರಿಲ್ಯಾಕ್ಸ್ ಮೂಡ್​ಗೆ ಜಾರಿದ್ದು, ಇಯರ್ ಎಂಡ್​ಗೆ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ. ಕುಟುಂಬ ಸಮೇತರಾಗಿ ಡಿ. ಕೆ. ಶಿವಕುಮಾರ್ ಕೆನಡಾ ಹಾಗೂ ಟರ್ಕಿ ದೇಶಕ್ಕೆ ಟ್ರಿಪ್​ಗೆ ತೆರಳಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಆ ಮೂಲಕ ಹೊಸ ವರ್ಷಾಚರಣೆಯನ್ನು ಡಿಸಿಎಂ ಡಿ. ಕೆ. ಶಿವಕುಮಾರ್ ವಿದೇಶದಲ್ಲಿ ಎಂಜಾಯ್ ಮಾಡಲಿದ್ದಾರೆ.

ನಾಲ್ಕು ದಿನಗಳ ಕಾಲ ವಿದೇಶ ಪ್ರವಾಸದಲ್ಲಿರುವ ಡಿ. ಕೆ. ಶಿವಕುಮಾರ್, ಕುಟುಂಬ ಸಮೇತ ಮುಂಜಾನೆಯೇ ವಿದೇಶಕ್ಕೆ ಹಾರಿದ್ದಾರೆ. ಪತ್ನಿ, ಮಕ್ಕಳ ಜೊತೆಗೆ ಡಿ. ಕೆ. ಶಿವಕುಮಾರ್ ಪ್ರವಾಸ ಕೈಗೊಂಡಿದ್ದಾರೆ. ಜ.5ರಂದು ಮುಂಜಾನೆ ಬೆಂಗಳೂರಿಗೆ ವಾಪಸಾಗಲಿದ್ದಾರೆ. ಆ ಮೂಲಕ ಉಭಯ ನಾಯಕರು ರಾಜಕೀಯ ಒತ್ತಡದಿಂದ ಬ್ರೇಕ್ ಪಡೆದು ರಿಲ್ಯಾಕ್ಸ್ ಮೂಡ್​ಗೆ ತೆರಳಿದ್ದಾರೆ.

ಇದನ್ನೂ ಓದಿ:2025ನೇ ವರ್ಷ ಸ್ವಾಗತಿಸಲು ಮದುವಣಗಿತ್ತಿಯಂತೆ ಸಿಂಗಾರಗೊಂಡ ಸಿಲಿಕಾನ್‌ ಸಿಟಿ: ಮೆಟ್ರೋ ಸೌಲಭ್ಯವೂ ಉಂಟು - NEW YEAR 2025

ABOUT THE AUTHOR

...view details