ಕರ್ನಾಟಕ

karnataka

ETV Bharat / state

ಮಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ನಾಯಕರ ಜಟಾಪಟಿ: ಮುಖಂಡರು ಹೇಳುವುದೇನು?

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ನಾಯಕರ ನಡುವೆ ಜಟಾಪಟಿ ನಡೆದಿದೆ‌.

congress
ಕಾಂಗ್ರೆಸ್ ಕಚೇರಿಯಲ್ಲಿ ನಾಯಕರ ನಡುವೆ ಜಟಾಪಟಿ (ETV Bharat)

By ETV Bharat Karnataka Team

Published : Dec 2, 2024, 6:07 PM IST

ಮಂಗಳೂರು:ಇತ್ತೀಚೆಗೆ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ವಿಜೇತರಾದವರನ್ನು ಸನ್ಮಾನಿಸುವ ವಿಚಾರವಾಗಿ ಇಂದುದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಾಯಕರ ನಡುವೆ ಜಟಾಪಟಿ ನಡೆದಿದೆ‌. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿದ ಕೆಲ ನಾಯಕರು, "ಅಂತಹ ಘಟನೆ ನಡೆದಿಲ್ಲ" ಎಂದಿದ್ದಾರೆ.

ನೂತನವಾಗಿ ಆಯ್ಕೆಯಾದ ಗ್ರಾ.ಪಂ ಸದಸ್ಯರು ಹಾಗೂ ಕಾರ್ಯಕರ್ತರಿಗೆ ಆಯೋಜಿಸಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ದ.ಕ. ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ತುಂಬೆ ಚಂದ್ರ ಪ್ರಕಾಶ್ ಶೆಟ್ಟಿ ನಡುವೆ ಜಟಾಪಟಿ ನಡೆದಿದೆ ಎನ್ನಲಾಗಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ, ಎಂಎಲ್​ಸಿ ಐವನ್ ಡಿಸೋಜ, ಮಿಥುನ್ ರೈ, ಇನಾಯತ್ ಅಲಿ ಉಪಸ್ಥಿತರಿದ್ದ ಸಭೆಯಲ್ಲೇ ಈ ಘಟನೆ ನಡೆದಿದೆ ಎನ್ನಲಾಗಿದೆ. ಕಾಂಗ್ರೆಸ್ ಕಚೇರಿಗೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ತುಂಬೆ ಪ್ರಕಾಶ್ ಶೆಟ್ಟಿ, ''ಹಲ್ಲೆ ನಡೆದಿಲ್ಲ. ಗ್ರಾ.ಪಂ ಸದಸ್ಯರನ್ನು ಸನ್ಮಾನಿಸುವ ವಿಚಾರದಲ್ಲಿ ಗೊಂದಲ ಏರ್ಪಟ್ಟಿತ್ತು. ಜಿಲ್ಲಾ ಅಧ್ಯಕ್ಷರನ್ನು ಬದಲಾಯಿಸಬೇಕು. ಅವರು ಇದ್ದರೆ ಪಕ್ಷಕ್ಕೆ ಉಳಿಗಾಲವಿಲ್ಲ'' ಎಂದಿದ್ದಾರೆ.

ಇದನ್ನೂ ಓದಿ:ಸೋತಿದ್ದೇನೆ ಅಷ್ಟೇ, ಸತ್ತಿಲ್ಲ! ಮೂಲೇಲಿ ಕೂರುವ ಜಾಯಮಾನ ನನ್ನದಲ್ಲ; ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ

ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, "ಇಂದಿನ ಸಭೆಯಲ್ಲಿ ಗ್ರಾ.ಪಂ ಸದಸ್ಯರನ್ನು ಅಭಿನಂದಿಸುವ ಕಾರ್ಯಕ್ರಮ ಸೇರ್ಪಡೆಯಾಗಿತ್ತು. ಈ ವಿಚಾರದಲ್ಲಿ ಸ್ವಲ್ಪ ಪಕ್ಷದೊಳಗಡೆ ಚರ್ಚೆ ನಡೆದಿದೆ. ಬೇರೆ ಯಾವುದೇ ಗೊಂದಲ ಆಗಿಲ್ಲ. ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಎರಡು ವರ್ಷದ ಮೊದಲೇ ನಾನು ಹೈಕಮಾಂಡ್​​​ಗೆ ರಾಜೀನಾಮೆ ಸಲ್ಲಿಸಿದ್ದೆ. ಆದರೆ ಹೊಸ ಅಧ್ಯಕ್ಷರ‌ ನೇಮಕ ವಿಳಂಬವಾಗಿದೆ'' ಎಂದು ಹೇಳಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಮತ್ತು ಕಾಂಗ್ರೆಸ್ ಮುಖಂಡ ಮಿಥುನ್ ರೈ ಅವರು "ಗ್ರಾ.ಪಂ ಸದಸ್ಯರನ್ನು ಅಭಿನಂದಿಸುವ ವಿಚಾರದಲ್ಲಿ ಚರ್ಚೆ ನಡೆಯಿತೇ ಹೊರತು, ಬೇರೆ ಯಾವುದೇ ಗೊಂದಲವಾಗಿಲ್ಲ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಯತ್ನಾಳ್​ಗೂ ಕೂಡ ಡಿ.ಕೆ.ಶಿವಕುಮಾರ್ ಜೊತೆ ಬಾಂಧವ್ಯವಿದೆ, ಆಗಾಗ ಕುಶಲೋಪರಿ ಮಾತನಾಡುತ್ತಾರೆ: ಡಿ.ಕೆ.ಸುರೇಶ್

ABOUT THE AUTHOR

...view details