ಕರ್ನಾಟಕ

karnataka

ETV Bharat / state

ಶಿವಮೊಗ್ಗ: ಸಿಟಿ ಬಸ್ ಪಲ್ಟಿಯಾಗಿ 20 ಪ್ರಯಾಣಿಕರಿಗೆ ಗಾಯ - CITY BUS ACCIDENT

ಮಲೆನಾಡಿನಲ್ಲಿ ಇಂದು ಬೆಳಗ್ಗೆ ಅಪಘಾತ ಸಂಭವಿಸಿದೆ. 20 ಜನ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಸಿಟಿ ಬಸ್​ ತಿರುವಿನಲ್ಲಿ ಪಲ್ಟಿಯಾಗಿದೆ.

ಪಲ್ಟಿಯಾದ ಸಿಟಿ ಬಸ್
ಪಲ್ಟಿಯಾದ ಸಿಟಿ ಬಸ್ (ETV Bharat)

By ETV Bharat Karnataka Team

Published : Oct 16, 2024, 12:06 PM IST

ಶಿವಮೊಗ್ಗ:ಸಿಟಿ ಬಸ್​ ಪಲ್ಟಿಯಾಗಿ 20 ಪ್ರಯಾಣಿಕರಿಗೆ ಗಾಯವಾಗಿರುವ ಘಟನೆ ಜಿಲ್ಲೆಯ ವಿನೋಬನಗರ ಪಿ ಅಂಡ್ ಟಿ ಕಾಲೋನಿ ರಸ್ತೆಯ ಬಳಿ ನಡೆದಿದೆ.

ವಿನೋಬನಗರ ಪೊಲೀಸ್​ ಚೌಕಿ ಕಡೆಯಿಂದ ಬೊಮ್ಮನಕಟ್ಟೆ ಕಡೆ ವೀರಭದ್ರೇಶ್ಬರ ಹೆಸರಿನ ಸಿಟಿ ಬಸ್ ಪ್ರಯಾಣ ಬೆಳೆಸಿತ್ತು. ಆದರೆ ವಿನೋಬನಗರ ಪಿ ಅಂಡ್ ಟಿ ಕಾಲೋನಿ ರಸ್ತೆಯ ಬಳಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಚರಂಡಿಗೆ ಪಲ್ಟಿಯಾಗಿದೆ. ರಸ್ತೆ‌‌ ಕಿರಿದಾಗಿದ್ದ ಪರಿಣಾಮ ಘಟನೆ ಸಂಭವಿಸಿದೆ.

ಸಿಟಿ ಬಸ್ ಪಲ್ಟಿಯಾಗಿ 20 ಪ್ರಯಾಣಿಕರಿಗೆ ಗಾಯ (ETV Bharat)

ಘಟನೆ ವೇಳೆ ಬಸ್​ನಲ್ಲಿ ನಾಲ್ವರು ವಿದ್ಯಾರ್ಥಿಗಳನ್ನು ಒಳಗೊಂಡು ಸುಮಾರು 20 ಪ್ರಯಾಣಿಕರಿದ್ದು ಸಣ್ಣಪುಟ್ಟ ಗಾಯವಾಗಿದೆ. ಗಾಯಾಳುಗಳನ್ನು ಮೆಗ್ಗಾನ್​ ಹಾಗೂ ಸರ್ಜಿ ಆಸ್ಪತ್ರೆಗೆ ರವಾನೆ ಮಾಡಿ ಚಿಕಿತ್ಸೆ ನೀಡಲಾಗಿದೆ. ಈ ಕುರಿತು ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ನೇರಳೆ ಮಾರ್ಗದ ಮೇಲೆ ಬಿದ್ದ ಮರ, ಈಗ ಸಂಚಾರಕ್ಕೆ ಮುಕ್ತ: ಮರ ತೆರವು ಯಶಸ್ವಿ ಎಂದ ಬಿಎಂಆರ್​ಸಿಎಲ್​

ABOUT THE AUTHOR

...view details