ಬೆಂಗಳೂರು: 'ಕರ್ನಾಟಕಕ್ಕೆ ಮೋದಿ ಸರ್ಕಾರ ಕೊಟ್ಟ ಕೊಡುಗೆ ಚೊಂಬು' ಎಂಬ ಕಾಂಗ್ರೆಸ್ ಪಕ್ಷದ ಜಾಹೀರಾತಿಗೆ ಬಿಜೆಪಿ ನಾಯಕರು ತೀವ್ರ ಆಕ್ರೋಶ ಹೊರಹಾಕಿದ್ದರು. ಈ ನಡುವೆ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನದ ದಿನವಾದ ಇಂದು ಯೂತ್ ಕಾಂಗ್ರೆಸ್ ಕಾರ್ಯಕರ್ತರು ಚೊಂಬು ಹಾಗೂ ಗ್ಯಾಸ್ ಸಿಲಿಂಡರ್ ಪ್ರದರ್ಶನ ಮಾಡಿದರು.
ಬೆಂಗಳೂರು: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಂದ ಮತಗಟ್ಟೆ ಬಳಿ ಖಾಲಿ ಚೊಂಬು ಪ್ರದರ್ಶನ - Youth Congress Protest - YOUTH CONGRESS PROTEST
ರಾಜಾಜಿನಗರ ಮತಗಟ್ಟೆಯ ಸಮೀಪ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಚೊಂಬು ಪ್ರದರ್ಶಿಸಿದರು.
ರಾಜಾಜಿನಗರ ಮತಗಟ್ಟೆ ಬಳಿ ಖಾಲಿ ಚೊಂಬು ಪ್ರದರ್ಶನ
Published : Apr 26, 2024, 5:23 PM IST
ಬೆಂಗಳೂರಿನ ರಾಜಾಜಿನಗರದ ಮಂಜುನಾಥ್ ನಗರದಲ್ಲಿರುವ ಗೌತಮ್ ಕಾಲೇಜಿನ ಮತಗಟ್ಟೆ ಬಳಿ ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಹಾಗೂ ಕಾರ್ಯಾಧ್ಯಕ್ಷ ಮಂಜುನಾಥ್ ತಂಡ ಚೊಂಬು ಪ್ರದರ್ಶಿಸಿತು. ಇದೇ ವೇಳೆ ಯುವಕನೊಬ್ಬ ಗ್ರ್ಯಾಜುಯೇಟ್ ದಿರಿಸಿನಲ್ಲಿ ಬಂದು ಕೈಯಲ್ಲಿ ಚೊಂಬು ಹಿಡಿದು ಪರೋಕ್ಷವಾಗಿ ಟೀಕಿಸಿದರು.