ದಾವಣಗೆರೆ: ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಒಬ್ಬ ಮೆಂಟಲ್ ಎಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ವಾಗ್ದಾಳಿ ನಡೆಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಆಗ್ರಹಿಸಿ ಸಿಎಂ, ಡಿಸಿಎಂಗೆ ಪತ್ರ ಬರೆದು ದೂರು ನೀಡಿದ್ದ ಶಾಸಕ ಶಿವಗಂಗಾ ಬಸವರಾಜ್ ಬಗ್ಗೆ ಬಸಾಪುರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಅವನೇ ಸರಿ ಇಲ್ಲ, ಅವನು ಮೊದಲು ಅವರ ಅಣ್ಣನಿಗೆ ಮರ್ಯಾದೆ ಕೊಡುವುದನ್ನು ಕಲಿಯಲಿ" ಎಂದು ಕಿಡಿಕಾರಿದರು.
ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಒಬ್ಬ ಮೆಂಟಲ್: ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ - S S MALLIKARJUN
ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆಗೆ ಆಗ್ರಹಿಸಿ ಸಿಎಂ, ಡಿಸಿಎಂಗೆ ಪತ್ರ ಬರೆದಿದ್ದ ಶಾಸಕ ಶಿವಗಂಗಾ ಬಸವರಾಜ್ ವಿರುದ್ಧ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ವಾಗ್ದಾಳಿ ನಡೆಸಿದ್ದಾರೆ.
Published : Dec 25, 2024, 10:50 PM IST
"ಶಿವಗಂಗಾ ಬಸವರಾಜ್ನನ್ನು ಆತನ ಅಣ್ಣ ಕಾರ್ಪೊರೇಷನ್ ಟಿಕೆಟ್ ಕೊಡಿಸಿ ಗೆಲ್ಲಿಸಿದ್ದರು. ಈಗ ಅವರ ಅಣ್ಣನ ಮೇಲೆಯೇ ಸೆಡ್ಡು ಹೊಡೆಯುತ್ತಿದ್ದಾನೆ. ಶಿವಗಂಗಾ ಬಸವರಾಜ್ ಅವರ ಅಣ್ಣನಿಗೆ ಬೆಲೆ ಕೊಡುತ್ತಿಲ್ಲ. ಅವನು ಬೆಳೆದಿದ್ದೇ ಅವನ ಅಣ್ಣನಿಂದ. ಮೊದಲು ಅದನ್ನು ತಿಳಿದುಕೊಂಡು ಮಾತನಾಡಲಿ. ಅನು ಏನು ಮಾಡಿದ್ದಾನೆ ಎಂಬುದು ಎಲ್ಲರಿಗೂ ಗೊತ್ತು. ಇಂಥವನ ಬಗ್ಗೆ ನನ್ನನ್ನು ಏಕೆ ಕೇಳುತ್ತೀರಾ" ಎಂದು ಹರಿಹಾಯ್ದರು.
ಇದನ್ನೂ ಓದಿ:ಮುನಿರತ್ನರ ತಲೆಕೂದಲು ಸ್ವಲ್ಪ ಸುಟ್ಟು ಹೋಗಿದೆ, ಸಿಟಿ ಸ್ಕ್ಯಾನ್ ಮಾಡಿಸಲು ಸಲಹೆ ನೀಡಿದ್ದೇನೆ: ಸಂಸದ ಡಾ.ಮಂಜುನಾಥ್