ದಾವಣಗೆರೆ: ಚನ್ನಗಿರಿ ತಾಲೂಕಿನ ತಿಪ್ಪಗೊಂಡನಹಳ್ಳಿಯ ಲಕ್ಕಮ್ಮ ಅವರು 101 ವರ್ಷ ಪೂರೈಸಿದ ಹಿನ್ನೆಲೆ ಕುಟುಂಬಸ್ಥರು ಅದ್ಧೂರಿಯಾಗಿ ಜನ್ಮದಿನ ಆಚರಿಸಿದರು.
ಶತಾಯುಷಿ ಲಕ್ಕಮ್ಮ ಮೂಲತಃ ಚಿತ್ರದುರ್ಗ ಜಿಲ್ಲೆಯಾವರಾಗಿದ್ದು, ಚನ್ನಗಿರಿ ತಾಲೂಕಿನ ತಿಪ್ಪಗೊಂಡನಹಳ್ಳಿ ಗಂಡನ ಮನೆಯಾಗಿದೆ. 20 ವರ್ಷಗಳ ಹಿಂದೆಯೇ ಶತಾಯುಷಿ ಅಜ್ಜಿ ಲಕ್ಕಮ್ಮ ಅವರ ಪತಿ ಸಾವನ್ನಪ್ಪಿದ್ದಾರೆ. ಸದ್ಯ ಅವರನ್ನು ಮಕ್ಕಳು ನೋಡಿಕೊಳ್ಳುತ್ತಿದ್ದಾರೆ. ಲಕ್ಕಮ್ಮ ಅವರಿಗೆ 10 ಜನ ಮಕ್ಕಳು, 30 ಜನ ಮೊಮ್ಮಕ್ಕಳು, 42 ಜನ ಮರಿಮೊಮ್ಮಕ್ಕಳು ಇದ್ದಾರೆ.