ಬೆಂಗಳೂರು: ಕೋರಮಂಗಲದ 80 ಫೀಟ್ ರಸ್ತೆಯಲ್ಲಿ ಅಕ್ರಮ ಗೋಲ್ಡನ್ ಏಸಸ್ ಪೋಕರ್ ರೂಮ್ ಹೆಸರಿನ ಗೇಮಿಂಗ್ ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಗೇಮಿಂಗ್ ಅಡ್ಡೆಯ ಮಾಲೀಕ ಮುಕೇಶ್ ಚಾವ್ಲಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಲ್ಲಿ ನಿಷೇಧಿತ ಪೋಕರ್ ಗೇಮಿಂಗ್ ಅಡ್ಡೆ ಮೇಲೆ ಸಿಸಿಬಿ ದಾಳಿ: ಮಾಲೀಕನ ಬಂಧನ - CCB RAID ON POKER GAMING CENTER - CCB RAID ON POKER GAMING CENTER
ಈ ಹಿಂದೆ ಪೋಕರ್ ಗೇಮಿಂಗ್ ಅಡ್ಡೆ ಆರಂಭಿಸಿ ಬಂಧನಕ್ಕೊಳಗಾಗಿದ್ದ ಆರೋಪಿ, ಇದೀಗ ಮತ್ತೆ ಗೇಮಿಂಗ್ ಅಡ್ಡೆ ಪ್ರಾರಂಭಿಸಿ ಮತ್ತೊಮ್ಮೆ ಪೊಲೀಸರ ಅತಿಥಿಯಾಗಿದ್ದಾನೆ.
Published : Jun 10, 2024, 12:17 PM IST
ಈ ಹಿಂದೆಯೂ ಒಮ್ಮೆ ದೇವನಹಳ್ಳಿ ಬಳಿ ಪೋಕರ್ ಅಡ್ಡೆ ನಡೆಸಿದ್ದ ವೇಳೆ ಸಿಸಿಬಿ ಪೊಲೀಸರಿಂದ ಬಂಧಿತನಾಗಿದ್ದ ಆರೋಪಿ, ನಂತರ ಕೋರಮಂಗಲದಲ್ಲಿ ಗೇಮಿಂಗ್ ಅಡ್ಡೆ ಆರಂಭಿಸಿದ್ದ. ರಾತ್ರಿಯಿಡೀ ಪೋಕರ್ ಗೇಮ್ ಆಡಿಸುತ್ತಿದ್ದ ಆರೋಪಿಯ ಕುರಿತು ಖಚಿತ ಮಾಹಿತಿ ಸಂಗ್ರಹಿಸಿದ್ದ ಸಿಸಿಬಿಯ ಸಂಘಟಿತ ಅಪರಾಧ ನಿಯಂತ್ರಣ ದಳದ ಸಿಬ್ಬಂದಿ ಜೂನ್ 8ರಂದು ರಾತ್ರಿ ದಾಳಿ ನಡೆಸಿದ್ದರು. ಈ ವೇಳೆ ಆಟದಲ್ಲಿ ತೊಡಗಿದ್ದವರನ್ನು ವಶಕ್ಕೆ ಪಡೆಯಲಾಗಿದ್ದು, ಬಾಜಿ ಕಟ್ಟಿದ್ದ ಲಕ್ಷಾಂತರ ರೂ. ಹಣ, ಪೋಕರ್ ಗೇಮ್ ಆಟಕ್ಕೆ ಬಳಸುವ ವಸ್ತುಗಳ್ನು ಜಪ್ತಿ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.