ಚಾಮರಾಜನಗರ:ಬಂಧನ ಭೀತಿಯಿಂದ ಗ್ರಾಮಸ್ಥರು ಊರು ಬಿಟ್ಟು ಹೋಗಿದ್ದು ಮೇವು, ನೀರಿಲ್ಲದೆ ಜಾನುವಾರುಗಳು ಮೃತಪಟ್ಟಿರುವ ಘಟನೆ ಹನೂರು ತಾಲೂಕಿನ ಇಂಡಿಗನತ್ತ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಗ್ರಾಮದ ಪುಟ್ಟತಂಬಡಿ ಮುರುಗೇಶ್ ಎಂಬವರಿಗೆ ಸೇರಿದ ಒಂದು ಹಸು, ಎರಡು ಎಮ್ಮೆಗಳು ಕಟ್ಟಿ ಹಾಕಿದ ಸ್ಥಳದಲ್ಲೇ ಕೊನೆಯುಸಿರೆಳೆದಿವೆ.
ಮತಗಟ್ಟೆ ಪುಡಿಗಟ್ಟಿ ಬಂಧನ ಭೀತಿಯಿಂದ ಊರು ಬಿಟ್ಟ ಜನ; ಕಟ್ಟಿ ಹಾಕಿದಲ್ಲೇ ಮೇವು, ನೀರಿಲ್ಲದೇ ಪ್ರಾಣ ಬಿಟ್ಟ ಜಾನುವಾರು - Cattle Died - CATTLE DIED
ಬಂಧನದ ಭೀತಿಯಿಂದ ಗ್ರಾಮಸ್ಥರು ಊರು ತೊರೆದಿದ್ದು ಬಡಪಾಯಿ ಜಾನುವಾರುಗಳು ಮೇವು, ನೀರಿಲ್ಲದೆ ಅಸುನೀಗಿದ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
Published : May 3, 2024, 5:22 PM IST
ಇತ್ತೀಚಿಗೆ, ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಇಂಡಿಗನತ್ತ ಗ್ರಾಮದ ಜನರು ಮತದಾನ ಬಹಿಷ್ಕರಿಸಲು ತೀರ್ಮಾನಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ಮನವೊಲಿಕೆಗೆ ಗ್ರಾಮಕ್ಕೆ ತೆರಳಿದ್ದರು. ಇದರಿಂದ ಕೋಪಗೊಂಡ ಕೆಲವರು ಮತಗಟ್ಟೆ ಧ್ವಂಸ ಮಾಡಿದ್ದರು. ಈ ಘಟನೆಗೆ ಸಂಬಂಧಿಸಿದಂತೆ 25 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಬಂಧನ ಭೀತಿಯಿಂದ ಬಹುತೇಕ ಗ್ರಾಮಸ್ಥರು ಮನೆ ತೊರೆದಿದ್ದಾರೆ. ಪರಿಣಾಮ, ಕುಡಿಯಲು ನೀರು, ಮೇವಿಲ್ಲದೇ ಜಾನುವಾರುಗಳು ಪ್ರಾಣಬಿಟ್ಟಿವೆ.
ಇದನ್ನೂ ಓದಿ:ಬಂಧನ ಭೀತಿ ಹಿನ್ನೆಲೆ ಊರು ಖಾಲಿ-ಖಾಲಿ: ಮರು ಚುನಾವಣೆಯಲ್ಲಿ 71 ಮಂದಿ ಮತದಾನ - RE POLLING