ಬೆಂಗಳೂರು:ರೇವ್ ಪಾರ್ಟಿಯಲ್ಲಿ ಭಾಗಿಯಾದವರ ಮಹಜರ್ ಮಾಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಫಾರ್ಮ್ ಹೌಸ್ ಒಳಗೆ ಪ್ರಿಂಟರ್ ತೆಗೆದುಕೊಂಡು ಬಂದು ಮಹಜರ್ ಪ್ರತಿಗಳ ಪ್ರಿಂಟ್ ತೆಗೆಯಲು ಶುರುಮಾಡಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಪೋಲಿಸರು ವಶದಲ್ಲಿ ಇರುವವರ ಹೇಳಿಕೆ ದಾಖಲು ಮಾಡಿಕೊಳ್ಳುತ್ತಿರುವ ಪೊಲೀಸರು ಇಡೀ ಪ್ರಕರಣ ಎಲೆಕ್ಟ್ರಾನಿಕ್ ಸಿಟಿ ಠಾಣೆಯಿಂದ ಹೆಬ್ಬಗೋಡಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ರೇವ್ ಪಾರ್ಟಿ ಮೇಲೆ ಸಿಸಿಬಿ ದಾಳಿ ಮಾಡಿದ ಸಮಯದಲ್ಲಿ ಮುಖಕ್ಕೆ ಮಾಸ್ಕ್ ಧರಿಸಿ ಹೊರಬಂದ ಸುಮಾರು 50ಕ್ಕೂ ಜನರು ಫಾರ್ಮ್ ಹೌಸ್ನಿಂದ ಹೊರಗೆ ಹೋಗಲು ಯತ್ನಿಸಿದ್ದಾರೆ. ಹಿಂಬದಿ ಫಾರ್ಮ್ ಹೌಸ್ನ ಹಿಂಭಾಗದ ಗೇಟ್ನಿಂದ ಹೊರ ಬರಲು ಪ್ರಯತ್ನಿಸಿದ್ದಾರೆ. ಮಾಧ್ಯಮದವರನ್ನು ಕಂಡು ರೇವ್ ಪಾರ್ಟಿಯಲ್ಲಿ ಭಾಗಿಯಾದವರು ವಾಪಸ್ ಹೋಗಿ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿ ಜಾಮೀನು ಮೇಲೆ ಹೊರಗೆ ಬಂದಿದ್ದಾರೆ.