ಹಾಸನ:ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಹಾಸನ ಹೊರವಲಯದ ಬಿಟ್ಟಗೊಂಡನಹಳ್ಳಿಯಲ್ಲಿ ನಡೆದಿದೆ. ಅವಘಡ ಅರಿತ ಇಬ್ಬರು ಪ್ರಯಾಣಿಕರು ಕ್ಷಣಾರ್ಧದಲ್ಲೇ ಕಾರಿನಿಂದಿಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹಾಸನ: ಚಲಿಸುತ್ತಿದ್ದ ಕಾರಿನಲ್ಲಿ ದಿಢೀರ್ ಬೆಂಕಿ, ಅಚ್ಚರಿ ರೀತಿ ಇಬ್ಬರು ಪ್ರಯಾಣಿಕರು ಪಾರು - Car Caught Fire - CAR CAUGHT FIRE
ಚಲಿಸುತ್ತಿದ್ದಾಗ ಕಾರಿನೊಳಗೆ ಬೆಂಕಿ ಹೊತ್ತಿಕೊಂಡ ಘಟನೆ ಹಾಸನ ಹೊರವಲಯದ ಬಿಟ್ಟಗೊಂಡನಹಳ್ಳಿಯಲ್ಲಿ ನಡೆದಿದೆ.
Published : Apr 11, 2024, 7:08 PM IST
ಉದಯಪುರದಿಂದ ಹಾಸನಕ್ಕೆ ಖಾಸಗಿ ಕಂಪನಿಯ ಕಾರಿನಲ್ಲಿ ಬರುತ್ತಿದ್ದಾಗ ಗೊರೂರು ರಸ್ತೆಯ ಬಿಟ್ಟಗೌಡನಹಳ್ಳಿ ಮುಖ್ಯರಸ್ತೆಯಲ್ಲಿ ಕಾರಿನೊಳಗೆ ಬೆಂಕಿ ಕಾಣಿಸಿಕೊಂಡಿದೆ. ಚಾಲಕ ಪ್ರವೀಣ್ ಮತ್ತು ನಾಗರಾಜು ತಕ್ಷಣ ಡೋರ್ ತೆಗೆದು ಹೊರ ಬಂದಿದ್ದಾರೆ. ಸ್ಥಳೀಯರು ನೀರು ಹಾಯಿಸಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸುವ ಮುನ್ನ ಕಾರು ಬಹುತೇಕ ಸುಟ್ಟು ಹೋಗಿತ್ತು. ತಾಂತ್ರಿಕ ದೋಷದಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ.
ಇದನ್ನೂಓದಿ:ಶಿರಸಿ: ಊಟ ಮಾಡಿ ವಿಶ್ರಾಂತಿ ಪಡೆಯುತ್ತಿದ್ದ ರಸ್ತೆ ಕಾರ್ಮಿಕರ ಮೇಲೆ ಹರಿದ ಕಾರು - five injured in car accident