ಹಾವೇರಿ: ಕಾಲು ಜಾರಿ ನದಿಗೆ ಬಿದ್ದ ವೃದ್ಧೆಯನ್ನು ಕಾಪಾಡಲು ಬಸ್ ಚಾಲಕ ಪ್ರಾಣದ ಹಂಗು ತೊರೆದು ನದಿಗೆ ಜಿಗಿದು ರಕ್ಷಣೆಗೆ ಮುಂದಾದ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ. ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲ್ಲೂಕಿನ ಮಾಸೂರು ಗ್ರಾಮದ ಬಳಿ ಕುಮದ್ವತಿ ನದಿಗೆ ವೃದ್ಧೆ ಕಾಲು ಜಾರಿ ಬಿದ್ದಿದ್ದಾಳೆ. ಇದನ್ನು ನೋಡಿದ ಚಾಲಕ, ಬಸ್ ನಿಲ್ಲಿಸಿ ನದಿಗೆ ಹಾರಿ ವೃದ್ಧೆಯ ಪ್ರಾಣ ರಕ್ಷಣೆಗೆ ಮುಂದಾಗಿದ್ದಾರೆ. ಚಾಲಕನನ್ನು ಮುಜೀದ್ ಗುಬ್ಬಿ ಎಂದು ಗುರುತಿಸಲಾಗಿದೆ.
ಹಾವೇರಿ: ವೃದ್ಧೆ ರಕ್ಷಣೆಗೆ ಪ್ರಾಣದ ಹಂಗು ತೊರೆದು ನದಿಗೆ ಜಿಗಿದ ಬಸ್ ಚಾಲಕ - Bus driver tried to save old woman - BUS DRIVER TRIED TO SAVE OLD WOMAN
ತಮ್ಮ ಪ್ರಾಣದ ಹಂಗು ತೊರೆದು ನದಿಗೆ ಹಾರಿ ವೃದ್ಧೆಯನ್ನು ರಕ್ಷಿಸಲು ಪ್ರಯತ್ನಿಸಿದರೂ, ಯಾವುದೇ ಪ್ರಯೋಜನವಾಗಿಲ್ಲ. ನೀರು ಕುಡಿದು, ಉಸಿರುಗಟ್ಟಿ ವೃದ್ಧೆ ಸಾವನ್ನಪ್ಪಿದ್ದಾರೆ.
![ಹಾವೇರಿ: ವೃದ್ಧೆ ರಕ್ಷಣೆಗೆ ಪ್ರಾಣದ ಹಂಗು ತೊರೆದು ನದಿಗೆ ಜಿಗಿದ ಬಸ್ ಚಾಲಕ - Bus driver tried to save old woman Bus driver jumped into the river to save the old woman in Haveri](https://etvbharatimages.akamaized.net/etvbharat/prod-images/27-07-2024/1200-675-22063394-thumbnail-16x9-meg.jpg)
ವೃದ್ಧೆ ರಕ್ಷಣೆಗೆ ಪ್ರಾಣದ ಹಂಗು ತೊರೆದು ನದಿಗೆ ಜಿಗಿದ ಬಸ್ ಚಾಲಕ (ETV Bharat)
Published : Jul 27, 2024, 7:30 PM IST
ಆದರೆ, ನೀರಿಗೆ ಬಿದ್ದಿದ್ದ ವೃದ್ಧೆ ನೀರು ಕುಡಿದು, ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಕೊನೆಗೆ ಚಾಲಕ ಮುಜೀದ್ ಮೃತದೇಹವನ್ನು ನದಿಯಿಂದ ಹೊರಗೆ ತಂದಿದ್ದಾರೆ. ಬಸ್ ಚಾಲಕ ಮುಜೀದ್ ಅವರಿಗೆ ಸ್ಥಳೀಯ ಯುವಕನೊಬ್ಬ ಸಾಥ್ ನೀಡಿದ್ದಾನೆ. ಮುಜೀದ್ ಅವರು ಮಾಸೂರಿನಿಂದ ಹೊನ್ನಾಳಿಗೆ ಹೋಗುವ ಹಿರೇಕೆರೂರು ಬಸ್ ಚಾಲಕ. ಚಾಲಕನ ಸಾಹಸಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೃತಪಟ್ಟ ವೃದ್ಧೆಯ ವಿವರ ತಿಳಿದು ಬರಬೇಕಿದೆ. ಹಿರೇಕೆರೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.