ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯ ಎಲ್ಲಾ ಜನಾಂಗ, ವರ್ಗಕ್ಕೂ ಬಜೆಟ್ ಮುಟ್ಟಿಸುವ ಕೆಲಸ ಮಾಡಿದ್ದಾರೆ : ಬಿ.ಆರ್ ಪಾಟೀಲ್ - ಬಜೆಟ್​

2024ರ ರಾಜ್ಯ ಬಜೆಟ್​ ಅನ್ನು ಮಂಡಿಸಿರುವ ಸಿಎಂ ಸಿದ್ದರಾಮಯ್ಯ ಅವರನ್ನು ಬಿ.ಆರ್ ಪಾಟೀಲ್ ಹಾಡಿ ಹೊಗಳಿದ್ದಾರೆ.

ಬಿ.ಆರ್ ಪಾಟೀಲ್
ಬಿ.ಆರ್ ಪಾಟೀಲ್

By ETV Bharat Karnataka Team

Published : Feb 17, 2024, 6:31 PM IST

ಮುಖ್ಯಮಂತ್ರಿಗಳ ಸಲಹೆಗಾರ ಬಿ.ಆರ್ ಪಾಟೀಲ್ ಹೇಳಿಕೆ

ಶಿವಮೊಗ್ಗ :ಸಿಎಂ ಸಿದ್ದರಾಮಯ್ಯ ಅವರು ಆರ್ಥಿಕ ಸಂಕಷ್ಟದಲ್ಲಿ ಕಸರತ್ತನ್ನು ಮಾಡಿದ್ದಾರೆ‌. ಎಲ್ಲಾ ಜಾನಾಂಗ, ಎಲ್ಲಾ ವರ್ಗಕ್ಕೂ ಬಜೆಟ್ ಮುಟ್ಟಿಸುವ ಪ್ರಯತ್ನ ಮಾಡಿದ್ದಾರೆ ಎಂದು ಮುಖ್ಯಮಂತ್ರಿಗಳ ಸಲಹೆಗಾರರಾದ ಬಿ.ಆರ್ ಪಾಟೀಲ್ ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ನಮ್ಮ ಬೇಡಿಕೆ ಹೆಚ್ಚಿರಬಹುದು. ಅವರ ಪ್ರಯತ್ನ ಪ್ರಾಮಾಣಿಕವಾಗಿದೆ. ಉತ್ತಮ ಬಜೆಟ್ ಮಂಡನೆ ಮಾಡಿ ರಾಜ್ಯಕ್ಕೆ ಒಳ್ಳೆಯದನ್ನು ನೀಡಿದ್ದಾರೆ. ಇಷ್ಟೊಂದು ದೊಡ್ಡ ಮೊತ್ತದ ಸಾಲ‌ ಇದ್ದರು ಸಹ 56 ಸಾವಿರ ಕೋಟಿ ರೂ. ಗ್ಯಾರಂಟಿಗೆ ಕೊಟ್ಟರು ಸಹ ಇಂತಹ ಸಾಧನೆಯನ್ನು ನಾನು ಮೆಚ್ಚುತ್ತೇನೆ. ಸಿಎಂ ಅವರು ಬಸವಣ್ಣನ ಫೋಟೋದಲ್ಲಿ ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಬರೆಯಿಸಿ, ಬಸವಣ್ಣನ ಸಮಾನತೆಯನ್ನು ನಂಬಿದವರು. ಬಜೆಟ್ ಅನ್ನು ಸ್ವಾಗತ ಮಾಡಿದ್ದೇವೆ. ಅದು ಮುಕ್ತ ಚರ್ಚೆ ಆಗುತ್ತದೆ ಎಂದರು.

ಬಿಜೆಪಿ ಯವರಿಗೆ ಇತಿಹಾಸ ಗೊತ್ತಿಲ್ಲ. ದೇಶ ಸ್ವಾತಂತ್ರ್ಯವಾದ ಮೇಲೆ ಪಾಕಿಸ್ತಾನ ಅಂತ ಹೆಸರು ಇಟ್ಟ ಮೇಲೆ ಹಿಂದೂಸ್ಥಾನ ಅಂತ ಹೆಸರು ಇಡಬಹುದಾಗಿತ್ತು. ದೇಶ ಕಟ್ಟಿದವರು ಹಿಂದೂಸ್ಥಾನ ಅಂತ ಇಟ್ಟರೆ, ಅದು ಹಿಂದೂಗಳಿಗೆ ಮಾತ್ರ ಆಗಿ ಬಿಡಬಹುದು ಎಂದು ಭಾರತ ಎಂದು ನಾಮಕರಣ ಮಾಡಿದರು. ಇಂದು ಭಾರತದಲ್ಲಿ ಇದ್ದವರೆಲ್ಲಾ ನಮ್ಮವರೆ, ಇವನ್ಯಾರವ ಇವನ್ಯಾರವಾ ಎಂಬ ಬಸವಣ್ಣನನ ಮಾತನ್ನು ಒಪ್ಪಿಕೊಂಡ ಮೇಲೆ ತುಷ್ಟೀಕರಣ ಎಲ್ಲಿಂದ ಬರುತ್ತದೆ. ಅಲ್ಪ ಸಂಖ್ಯಾಂತರಿಗೆ ಹಿಂದೆನೂ ಅನುದಾನ ಕೊಡಲಾಗುತ್ತಿತ್ತು. ಈಗಲೂ ಸಹ ಕೊಡಲಾಗುತ್ತಿದೆ. ಬಿಜೆಪಿ ಯವರು ಒಂದೇ ದೃಷ್ಟಿಯಿಂದ ನೋಡುತ್ತಾರೆ. ಅವರ‌ ಮಾತಿನಲ್ಲಿ ಸತ್ಯಾಂಶ ಇಲ್ಲ ಎಂದು ಬಿ.ಆರ್ ಪಾಟೀಲ್ ಕಿಡಿಕಾರಿದರು.

ನಮಗೆ 15ನೇ ಹಣಕಾಸಿನ ಆಯೋಗದಲ್ಲಿ ಬರಬೇಕಾದ ಹಣ ಬರಲಿಲ್ಲ.‌ ಕೇಂದ್ರದಿಂದ‌ ಬರಬೇಕಾದ ಹಣ ಕೂಡ ಬರಲಿಲ್ಲ. ನಾವು ಒಕ್ಕೂಟ ವ್ಯವಸ್ಥೆಯಲ್ಲಿ ಇರುವುದರಿಂದ ಆರ್ಥಿಕವಾಗಿ ಸಮಾನ ಪಾಲು ಇರಬೇಕಿದೆ. ಈಗ ನಮ್ಮ ರಾಜ್ಯದರು ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಇದೀಗಾ ಕೇರಳ, ತಮಿಳುನಾಡು ನಂತರದಲ್ಲಿ ಪಶ್ಚಿಮ ಬಂಗಾಳದವರು ಸಹ ಪ್ರತಿಭಟನೆ ನಡೆಸುವವರಿದ್ದಾರೆ. ಕೇಂದ್ರ ಸರ್ಕಾರ ರಾಜ್ಯಗಳನ್ನು ದುರ್ಬಲಗೊಳಿಸುವ ಪ್ರಯತ್ನದ ಭಾಗವಾಗಿ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಬಿ.ಆರ್​ ಪಾಟೀಲ್​ ಆರೋಪಿಸಿದರು.

ಚುನಾವಣಾ ಬಾಂಡ್​ಗಳ ಮೇಲೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಐತಿಹಾಸಿಕ ಹಾಗೂ ಜನಪರವಾಗಿದೆ. ಇಂತಹ ತೀರ್ಪು ದೇಶಕ್ಕೆ ಒಳ್ಳೆಯದನ್ನು ಮಾಡಲು ಬಂದಿವೆ. ಬಜೆಟ್ ನಲ್ಲಿ ಎಲ್ಲಾ ಇಲಾಖೆಗೆ ಹೆಚ್ಚಿಗೆ ಹಣ ನೀಡದೆ ಹೋದರು ಸಹ ಮುಂದಿನ ದಿನಗಳಲ್ಲಿ ನೀಡಬಹುದಾಗಿದೆ ಬಿ.ಆರ್ ಪಾಟೀಲ್ ತಿಳಿಸಿದರು.

ಇದನ್ನೂ ಓದಿ :ಆರೋಗ್ಯ ಇಲಾಖೆಯ ಆಶಾಕಿರಣ ಯೋಜನೆಗೆ ನಾಳೆ ಹಾವೇರಿಯಲ್ಲಿ ಸಿಎಂ ಚಾಲನೆ: ಸಚಿವ ದಿನೇಶ್ ಗುಂಡೂರಾವ್

ABOUT THE AUTHOR

...view details