ಕರ್ನಾಟಕ

karnataka

ETV Bharat / state

ಬೆಳಗಾವಿ: ರಥದ ಮೇಲಿನ ಬೆಳ್ಳಿ ಮೂರ್ತಿ ಬಿದ್ದು ಸ್ಥಳದಲ್ಲೇ ಬಾಲಕ ಸಾವು - Boy Died - BOY DIED

ರಥದ ಮೇಲಿನ ಬೆಳ್ಳಿ ನವಿಲು ಆಕಾರದ ಮೂರ್ತಿ ಬಿದ್ದು ಬಾಲಕನೊಬ್ಬ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾನೆ.

BOY DIES DURING RATHOTSAVAM
ಬೀಳುತ್ತಿರುವ ರಥದ ಮೇಲಿನ ಬೆಳ್ಳಿ ಮೂರ್ತಿ (ETV Bharat)

By ETV Bharat Karnataka Team

Published : Aug 27, 2024, 11:45 AM IST

Updated : Aug 27, 2024, 12:42 PM IST

ರಥದ ಮೇಲಿನ ಬೆಳ್ಳಿ ಮೂರ್ತಿ ಬಿದ್ದು ಸ್ಥಳದಲ್ಲೇ ಬಾಲಕ ಸಾವು (ETV Bharat)

ಬೆಳಗಾವಿ: ರಥೋತ್ಸವದ ವೇಳೆ ರಥದ ಮೇಲಿನ ಬೆಳ್ಳಿಯ ನವಿಲು ಆಕಾರದ ಮೂರ್ತಿ ಬಿದ್ದು 13 ವರ್ಷದ ಬಾಲಕನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಸವದತ್ತಿ ತಾಲೂಕಿನ ಚಚಡಿ ಗ್ರಾಮದಲ್ಲಿ ನಡೆದಿದೆ. ಶಿವಾನಂದ ರಾಜಕುಮಾರ ಸಾವಳಗಿ(13) ಮೃತ ದುರ್ದೈವಿ ಬಾಲಕ.

ಪ್ರತಿವರ್ಷದಂತೆ ಶ್ರಾವಣ ಕೊನೆಯ ಸೋಮವಾರ ಚಚಡಿ ಗ್ರಾಮದ ಸಂಗಮೇಶ್ವರ ರಥೋತ್ಸವ ಆಯೋಜಿಸಲಾಗಿತ್ತು. 30 ಅಡಿ ಎತ್ತರದ ರಥದ ಮೇಲೆ 5 ಕೆಜಿ ತೂಕದ ಬೆಳ್ಳಿಯ ನವಿಲು ಅಳವಡಿಸಲಾಗಿತ್ತು. ಪ್ರತಿ ವರ್ಷ ಎಳೆದುಕೊಂಡು ಹೋಗುತ್ತಿದ್ದ ರಸ್ತೆಯಲ್ಲೇ ಈ ಬಾರಿಯೂ ರಥವನ್ನು ಗ್ರಾಮಸ್ಥರು ಎಳೆಯುತ್ತಿದ್ದರು. ದೇವಸ್ಥಾನದಿಂದ ತುಸು ದೂರ ರಥವನ್ನು ಎಳೆಯುತ್ತಿದ್ದರು. ಆದರೆ, ಸ್ವಲ್ಪ ಮುಂದಕ್ಕೆ ಹೋಗುತ್ತಿದ್ದಂತೆ ಹಾಳಾದ ರಸ್ತೆಯಿಂದ ರಥ ಅತ್ತಿತ್ತ ಹೊರಳಾಡಿ ಕಳಸದ ಮೇಲಿನ ಬೆಳ್ಳಿ ನವಿಲು ಕಿತ್ತು ಬಾಲಕನ ತಲೆಯ ಮೇಲೆ ಬಿದ್ದಿದೆ.

ತಲೆಗೆ ತೀವ್ರ ಪೆಟ್ಟಾದ ಪರಿಣಾಮ ಬಾಲಕ ಶಿವಾನಂದ ಸಾವಳಗಿ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾನೆ. ಈ ಅವಘಡದಿಂದ ರಥೋತ್ಸವ ಅರ್ಧಕ್ಕೆ ನಿಂತಿದ್ದು, ಗ್ರಾಮದಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ. ಸವದತ್ತಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ:ತುಮಕೂರು: ವಿಷ ಮಿಶ್ರಿತ ಆಹಾರ ಸೇವಿಸಿ ಮೂವರು ಸಾವು? - Food Poison

Last Updated : Aug 27, 2024, 12:42 PM IST

ABOUT THE AUTHOR

...view details