ಗಾಂಧಿನಗರ/ಬೆಂಗಳೂರು: 'ಸಿಟಿ ವಿಥ್ ಬೆಸ್ಟ್ ರೆಕಾರ್ಡ್ ಆಫ್ ಪಬ್ಲಿಕ್ ಇನ್ವಾಲ್ವ್ಮೆಂಟ್ ಇನ್ ಟ್ರಾನ್ಸ್ಪೋರ್ಟ್' ವಿಭಾಗದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಭಾರತ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನೀಡುವ 'ಅವಾರ್ಡ್ ಆಫ್ ಎಕ್ಸೆಲೆನ್ಸ್ ಇನ್ ಅರ್ಬನ್ ಟ್ರಾನ್ಸ್ಪೋರ್ಟ್' ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಭಾನುವಾರ ಗುಜರಾತ್ನ ಗಾಂಧಿನಗರದಲ್ಲಿ ಮಹಾತ್ಮ ಗಾಂಧಿ ಮಂದಿರ ಕನ್ವೆನ್ಷನ್ ಸೆಂಟರ್ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಭಾರತ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಖಟ್ಟರ್ ಅವರಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.
ಪ್ರಶಸ್ತಿ ಸ್ವೀಕರಿಸಿದ ಕೇಂದ್ರ ಸಚಿವ ಮನೋಹರಲಾಲ್ (ETV Bharat) ಭಾರತ ಸರ್ಕಾರದ ಈ ಪ್ರತಿಷ್ಠಿತ ಪ್ರಶಸ್ತಿಯು ನಾಗರಿಕರ ಸುರಕ್ಷತೆ ಮತ್ತು ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯನ್ನು ಪ್ರೋತ್ಸಾಹಿಸುವುದಕ್ಕೆ ಮೀಸಲಿದ್ದು, ಅಕ್ಟೋಬರ್ ತಿಂಗಳಿನಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ದೇಶದ ಇತರೆ ನಗರ ಸಾರಿಗೆ ಸಂಸ್ಥೆಗಳು ಮತ್ತು ಮುನ್ಸಿಪಲ್ ಕಾರ್ಪೊರೇಷನ್ಗಳೊಂದಿಗೆ ಸ್ಪರ್ಧಿಸಿ ಈ ಪುರಸ್ಕಾರವನ್ನು ಪಡೆದಿದೆ.
ಪ್ರಶಸ್ತಿ ಪತ್ರ (ETV Bharat) ನಗರದೊಳಗೆ ಪ್ರಯಾಣಿಸಲು ನಾಗರಿಕರಿಗೆ ಸುರಕ್ಷಿತ, ಪರಿಸರ ಸ್ನೇಹಿ ಮಾರ್ಗವನ್ನು ಒದಗಿಸುವುದು ಸಂಸ್ಥೆಯ ಗುರಿಯಾಗಿದ್ದು ಹೆಚ್ಎಸ್ಆರ್ ಬಡಾವಣೆಯ ನಾಗರಿಕರಿಗೆ ವಿನೂತನ ಮಾದರಿಯ ಬಡಾವಣೆ ಒಳಗಿನ ಸೇವೆಯಿಂದ ಸಾರ್ವಜನಿಕ ಮನ್ನಣೆ ಪಡೆದಿದೆ. ರಾಷ್ಟ್ರದಾದ್ಯಂತ ಈ ಮಾದರಿಯ ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್ ಹೇಳಿದ್ದಾರೆ.
ಇದನ್ನೂ ಓದಿ:ಮಾಜಿ ಸಿಎಂ ಎಸ್.ಬಂಗಾರಪ್ಪ ಜನ್ಮದಿನ: ಮೂವರು ಸಾಧಕರಿಗೆ ಪ್ರಶಸ್ತಿ ಪ್ರದಾನ