ಕರ್ನಾಟಕ

karnataka

ETV Bharat / state

ಕೊಪ್ಪಳದಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ್ ಕ್ಯಾವಟರ ಪರ ಬಿಎಸ್​ವೈ ಮತಯಾಚನೆ - BS Yediyurappa - BS YEDIYURAPPA

ಕೊಪ್ಪಳದಲ್ಲಿ ನಡೆದ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯಲ್ಲಿ ಡಾ.ಬಸವರಾಜ್ ಕ್ಯಾವಟರ ಪರ ಬಿ.ಎಸ್.ಯಡಿಯೂರಪ್ಪ ಮತಯಾಚನೆ ಮಾಡಿದರು.

ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ್ ಕ್ಯಾವಟರ ಪರ ಬಿಎಸ್​ವೈ ಮತಯಾಚನೆ
ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ್ ಕ್ಯಾವಟರ ಪರ ಬಿಎಸ್​ವೈ ಮತಯಾಚನೆ

By ETV Bharat Karnataka Team

Published : Apr 17, 2024, 10:56 PM IST

ಕೊಪ್ಪಳ: ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ್ ಕ್ಯಾವಟರ ಪರ ಬಿ.ಎಸ್.ಯಡಿಯೂರಪ್ಪ ಮತಯಾಚಿಸಿದರು. ನಗರದಲ್ಲಿ ಇಂದು ಹಮ್ಮಿಕೊಂಡಿದ್ದ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಒಂದೇ ಪ್ರಶ್ನೆ ಕೇಳುತ್ತೇನೆ, ನಿಮ್ಮ ಪಕ್ಷದಲ್ಲಿ ಪ್ರಧಾನಿ ಅಭ್ಯರ್ಥಿ ಯಾರು ಎಂದು ಪ್ರಶ್ನಿಸಿದರು.

ಅಲ್ಲದೇ, ಚುನಾವಣೆಯಲ್ಲಿ ಕೆಲವರು ಹಣ, ತೋಳ್ಬಲದಿಂದ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಆದರೆ, ಅದು ಸಾಧ್ಯವಿಲ್ಲ. 2 ಲಕ್ಷ ಮತಗಳ ಅಂತರದಿಂದ ನಮ್ಮ ಅಭ್ಯರ್ಥಿ ಗೆಲುತ್ತಾರೆ. ಕೊಪ್ಪಳ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡುತ್ತಾರೆ ಎಂದು ಬಿಎಸ್​ವೈ ಹೇಳಿದರು.

ಸಿ.ಟಿ.ರವಿ ಮಾತನಾಡಿ, ನಿಜವಾದ ದೇಶಭಕ್ತಿ ನಿಮ್ಮಲ್ಲಿ ಇದ್ದರೆ ಕಾಂಗ್ರೆಸ್ ಪಕ್ಷ ತೊರೆದು ಹೊರ ಬನ್ನಿ ಎಂದು ದೇಶಭಕ್ತ ಕಾಂಗ್ರೆಸ್ಸಿಗರಿಗೆ ಕರೆ ಕೊಡುವೆ. ಕಾಂಗ್ರೆಸ್ ಪಕ್ಷದಲ್ಲಿ ಅಧ್ಯಕ್ಷರ ಪರ್ಮಿಷನ್ ತಗೊಂಡು ಭಾರತ್ ಮಾತಾಕಿ ಜೈ ಎಂದು ಕೂಗಬೇಕಾಗಿದೆ. ಇವತ್ತು ಶಾಸಕ ಲಕ್ಷ್ಮಣ ಸವದಿ ಅವರಿಗೆ ಎಂತಹ ದುರ್ಗತಿ ಬಂದಿದೆ ಎಂದರೆ ಅಲ್ಲಿ ಭಾರತ ಮಾತಾಕಿ ಜೈ ಎನ್ನಲು ಅಧ್ಯಕ್ಷರ ಅಪ್ಪಣೆ ತೆಗೆದುಕೊಳ್ಳಬೇಕಿದೆ. ಹಾಗಾಗಿ ದೇಶಭಕ್ತಿ ಇದ್ದರೆ ಕಾಂಗ್ರೆಸ್ ತೊರೆದು ಹೊರ ಬನ್ನಿ ಎಂದು ಕರೆ ನೀಡಿದರು.

ಮತ್ತೊಮ್ಮೆ ಮೋದಿ‌ ಮೋದಿ ಎಂಬ ಕೂಗು ಕೇಳಿದರೆ ತಂಗಡಗಿಗೆ ಕಪಾಳಕ್ಕೆ ಹೊಡೆದಂತಾಗುತ್ತಿದೆ. ದೇವಸ್ಥಾನಕ್ಕೆ ದೇವರನ್ನು ನೋಡಲು ಹೋಗುತ್ತೇವೆಯೋ ಅಥವಾ ಪೂಜಾರಿಯನ್ನು ನೋಡಲು ಹೋಗುತ್ತೇವೆಯೋ. ನನ್ನ ದೇವರು ಕಮಲ ನಮಗೆಲ್ಲ ಅದೇ ಶ್ರೇಷ್ಠವಾದದ್ದು ಎಂದರು.

ಸಿದ್ದರಾಮಯ್ಯ ಅವರದು ಎಕಾನಾಮಿಕ್ಸ್ ಅಲ್ಲ, ಅದು ಸಿದ್ರಾಮಿಕ್ಸ್ ಬಾಯಿ ತೆಗೆದರೆ ಸಾಕು ನಾ ಕೊಟ್ಟೆ, ನಾ ಕೊಟ್ಟೆ ಅನ್ನೋದು. ಗಂಡನ ಜೇಬಿನಿಂದ‌ ಕಿತ್ಕಂಡ್ ಹೆಂಡತಿಗೆ ಕೋಡೋದು. ನೀರು ಇಲ್ಲದೆ ತಲೆ ಬೋಳಿಸೋ ಕಲೆ ಗೊತ್ತಿರೋದು ಕಾಂಗ್ರೆಸ್ಸಿಗರಿಗೆ ಮಾತ್ರ. ನೀರಿಲ್ಲದೆ ತಲೆ ಬೋಳಿಸಿ, ಮೂರು ನಾಮ ಹಾಕಿ, ಒಂದು ಟೊಪ್ಪಿಗೆ ಹಾಕೋದು ಕಾಂಗ್ರೆಸ್ ನೀತಿಯಾಗಿದೆ. ಹಗಲು ದರೋಡೆಗೆ ಇನ್ನೊಂದು ಹೆಸರೇ ಕಾಂಗ್ರೆಸ್. ಶಿಕ್ಷಕರ ವರ್ಗಾವಣೆಗೆ ಕೂಡಾ ಇದೀಗ ರೇಟ್ ಪಿಕ್ಸ್ ಮಾಡಿದ್ದಾರೆ ಎಂದು ಆರೋಪಿಸಿದರು.

ಸಂಗಣ್ಣ ಕರಡಿ ಕಾಂಗ್ರೆಸ್ ಸೇರ್ಪಡೆ ದುರದೃಷ್ಟಕರ:ಮತ್ತೊಂದೆಡೆ, ಗದಗದಲ್ಲಿಸಿಎಂ ಬಸವರಾಜ್ ಬೊಮ್ಮಾಯಿ ಮಾತನಾಡಿ, ಸಂಗಣ್ಣ ಕರಡಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದು ದುರಾದೃಷ್ಟಕರ ಸಂಗತಿ. ಬೆಂಗಳೂರಿಗೆ ಕರೆಸಿ ಅವರೊಂದಿಗೆ ಮಾತನಾಡಿದ್ವಿ. ಪಕ್ಷ ತೊರೆಯಲ್ಲ ಎಂದಿದ್ದರು. ಕಾಂಗ್ರೆಸ್​ನವರು ಪ್ರಚೋದನೆ ಮಾಡಿರಬಹುದು ಅದಕ್ಕೆ ಸೇರಿದ್ದಾರೆ ಎಂದು ಕುಟುಕಿದರು.

ಇದನ್ನೂ ಓದಿ:ವಿಜಯೇಂದ್ರ ನನ್ನ ಬಗ್ಗೆ ಸೂಕ್ಕಿನ ಮಾತನ್ನು ಆಡುತ್ತಿದ್ದಾರೆ: ಕೆ ಎಸ್ ಈಶ್ವರಪ್ಪ - Lok Sabha Election 2024

ABOUT THE AUTHOR

...view details