ಬೆಂಗಳೂರು: ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸೋಲಿನ ನಂತರ ಡಿ.ಕೆ.ಸುರೇಶ್ ಅವರನ್ನು ಇಂದು ಬಿಜೆಪಿ ರೆಬೆಲ್ ಶಾಸಕರು ಭೇಟಿ ಮಾಡಿದರು. ಸದಾಶಿವನಗರದಲ್ಲಿರುವ ಡಿಕೆಸು ನಿವಾಸಕ್ಕೆ ಆಗಮಿಸಿದ ಬಿಜೆಪಿ ಶಾಸಕರಾದ ಎಸ್.ಟಿ.ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಕೆಲ ಹೊತ್ತು ಮಾತುಕತೆ ನಡೆಸಿದ್ದಾರೆ.
ಸಚಿವ ಜಮೀರ್ ಅಹ್ಮದ್, ಚಿತ್ರದುರ್ಗ ಪರಾಜಿತ ಅಭ್ಯರ್ಥಿ ಚಂದ್ರಪ್ಪ, ಸಚಿವ ಚೆಲುವರಾಯಸ್ವಾಮಿ, ನರೇಂದ್ರ ಸ್ವಾಮಿ, ರವಿ ಗಣಿಗ, ರಮೇಶ್ ಬಂಡಿ ಸಿದ್ದೇಗೌಡ ಕೂಡಾ ಭೇಟಿಯಾಗಿ ಚರ್ಚಿಸಿದ್ದಾರೆ.
ಡಿ.ಕೆ.ಸುರೇಶ್ ಭೇಟಿಯಾದ ಜಮೀರ್ ಅಹ್ಮದ್, ಚಂದ್ರಪ್ಪ (ETV Bharat) ಜನರಿಗೆ ತಪ್ಪಿನ ಅರಿವಾಗಲಿದೆ: ಬಳಿಕ ಮಾತನಾಡಿದ ಎಸ್.ಟಿ.ಸೋಮಶೇಖರ್, "ಮತದಾರರ ಗೌರವ ಸ್ವೀಕರಿಸಬೇಕು. 28 ಲೋಕಸಭಾ ಸದಸ್ಯರ ಪೈಕಿ ಹೆಚ್ಚು ಕೆಲಸ ಮಾಡಿದವರು, ಕೇಂದ್ರದ ಅನೇಕ ಯೋಜನೆಗಳನ್ನು ತಂದವರು, ಸರ್ಕಾರದ ಕಾರ್ಯಕ್ರಮಗಳನ್ನು ಮನೆಮನೆಗೆ ತಲುಪಿಸಿದವರು ಡಿ.ಕೆ.ಸುರೇಶ್. ಆದರೆ ಜನ ಈ ರೀತಿ ತೀರ್ಪು ಕೊಟ್ಟಿದ್ದಾರೆ. ಮುಂದೆ ಜನರಿಗೆ ತಪ್ಪಿನ ಅರಿವಾಗಲಿದೆ" ಎಂದರು.
"ಈ ಬಾರಿ ಎಲ್ಲರೂ ಡಿ.ಕೆ.ಸುರೇಶ್ ಅವರನ್ನು ಟಾರ್ಗೆಟ್ ಮಾಡಿದ್ರು. 24x7 ರಾಜಕಾರಣ ಮಾಡಿದವರು ಇವರು. ಅವರಂತೆ ಯಾರೂ ಕೆಲಸ ಮಾಡಿಲ್ಲ. ಜನ ಯಾಕೆ ಕಠಿಣ ನಿಲುವು ತೆಗೆದುಕೊಂಡ್ರೋ ಗೊತ್ತಿಲ್ಲ. ಯೋಚಿಸಿ ಮತದಾನ ಮಾಡಬೇಕಿತ್ತು. ಉಡುಪಿ-ಚಿಕ್ಕಮಗಳೂರಿನವರೇ ಶೋಭಾ ಕರಂದ್ಲಾಜೆಗೆ ಗೋಬ್ಯಾಕ್ ಅಂದಿದ್ರು. ಸರ್ಕಾರ ಗ್ಯಾರಂಟಿಗಳನ್ನು ಕೊಟ್ಟಿತ್ತು. ಆದರೆ, ಕಳೆದ ಬಾರಿ ಒಂದಿತ್ತು, ಈ ಬಾರಿ ಒಂಬತ್ತಾಗಿದೆ. ಜನರು ಕಾಂಗ್ರೆಸ್ ಪರ ಮತ ಕೊಟ್ಟಿದ್ದಾರೆ" ಎಂದು ಹೇಳಿದರು.
ಇದನ್ನೂ ಓದಿ:ಬಿ.ಎಸ್.ಯಡಿಯೂರಪ್ಪ ನಿವಾಸಕ್ಕೆ ನೂತನ ಸಂಸದರ ಅಭ್ಯರ್ಥಿಗಳ ಭೇಟಿ - B S Yediyurappa