ಕರ್ನಾಟಕ

karnataka

ETV Bharat / state

ಅಮೃತ ನಗರೋತ್ಥಾನ ಅನುದಾನ ಬಿಡುಗಡೆ ವಿಚಾರ: ಸರ್ಕಾರದ ಉತ್ತರದ ಪ್ರತಿ ಹರಿದು ಹಾಕಿದ ಬಿಜೆಪಿ ಶಾಸಕ - BJP MLA Muniraju - BJP MLA MUNIRAJU

ಅಮೃತ ನಗರೋತ್ಥಾನ ಯೋಜನೆಯ ಬಾಕಿ ಕಾಮಗಾರಿಗೆ ತುರ್ತು ಅನುಮೋದನೆಯ ಮನವಿಗೆ ಸರ್ಕಾರ ನೀಡಿದ ಉತ್ತರದಿಂದ ತೃಪ್ತರಾಗದ ಬಿಜೆಪಿ ಶಾಸಕ ಮುನಿರಾಜು, ವಿಧಾನಸಭೆಯಲ್ಲಿ ಉತ್ತರದ ಪ್ರತಿಯನ್ನು ಹರಿದು ಹಾಕಿದರು.

ಸರ್ಕಾರದ ಉತ್ತರಕ್ಕೆ ಪ್ರತಿಯನ್ನೇ ಹರಿದು ಹಾಕಿದ ಬಿಜೆಪಿ ಶಾಸಕ
ಸರ್ಕಾರದ ಉತ್ತರದ ಪ್ರತಿಯನ್ನು ಹರಿದು ಹಾಕಿದ ಬಿಜೆಪಿ ಶಾಸಕ ಮುನಿರಾಜು (ETV Bharat)

By ETV Bharat Karnataka Team

Published : Jul 24, 2024, 8:26 AM IST

ಅಮೃತ ನಗರೋತ್ಥಾನ ಅನುದಾನ ಬಿಡುಗಡೆ ವಿಚಾರ (ETV Bharat)

ಬೆಂಗಳೂರು:ಅಮೃತ ನಗರೋತ್ಥಾನ ಅನುದಾನ ಬಿಡುಗಡೆ ಸಂಬಂಧ ಸರ್ಕಾರದ ಉತ್ತರದ ಪ್ರತಿಯನ್ನು ದಾಸರಹಳ್ಳಿ ಬಿಜೆಪಿ ಶಾಸಕ ಮುನಿರಾಜು ಹರಿದು ಹಾಕಿ ಆಕ್ರೋಶ ಹೊರಹಾಕಿದ್ದಾರೆ.

ಮಂಗಳವಾರ ವಿಧಾನಸಭೆಯಲ್ಲಿ ಗಮನ ಸೆಳೆಯುವ ಸೂಚನೆ ವೇಳೆ ಅಮೃತ ನಗರೋತ್ಥಾನ ಯೋಜನೆ ಬಾಕಿ ಕಾಮಗಾರಿ ಸಂಬಂಧ ಶಾಸಕ ಮುನಿರಾಜು ವಿಷಯ ಪ್ರಸ್ತಾಪಿಸಿ, ತುರ್ತು ಅನುಮೋದನೆಗೆ ‌ಮನವಿ ಮಾಡಿದರು. ಇದಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್​​​ ಪರವಾಗಿ ಸಚಿವ ಜಿ.ಪರಮೇಶ್ವರ್​​ ಉತ್ತರ ನೀಡಿದರು.‌ ಸಚಿವರ ಉತ್ತರಕ್ಕೆ ಸಮಾಧಾನಗೊಳ್ಳದ ಮುನಿರಾಜು, "ನಾನು ಈ ಸರ್ಕಾರದಿಂದ ಹಣ ಕೇಳಿಲ್ಲ. ನಮ್ಮ ಸರ್ಕಾರದಲ್ಲಿ‌ ಮಂಜೂರಾದ ಹಣವದು. 17 ತಿಂಗಳಿಂದ ಈ ಹಣಕ್ಕಾಗಿ ಕಾಯುತ್ತಿದ್ದೇವೆ. ಈ ಸರ್ಕಾರ ಇದೆಯಾ ಸತ್ತಿದೆಯಾ?" ಎಂದು ಹೇಳಿ ಉತ್ತರದ ಪ್ರತಿಯನ್ನು ಹರಿದು ಹಾಕಿದರು.

ರಾಜ್ಯದ ಎರಡನೇ ಹೆಚ್ಚುವರಿ ಭಾಷೆಯಾಗಿ ಘೋಷಿಸಲು ತುಳು ಭಾಷೆಯಲ್ಲಿ ಕರಾವಳಿ ಶಾಸಕರ ಮನವಿ (ETV Bharat)

ತುಳು ಭಾಷೆಯಲ್ಲಿ ಕರಾವಳಿ ಶಾಸಕರ ಮನವಿ:"ತುಳುವನ್ನು ರಾಜ್ಯದ ಎರಡನೇ ಹೆಚ್ಚುವರಿ ಭಾಷೆಯಾಗಿ ಘೋಷಿಸಿ" ಎಂದು ಕಾಂಗ್ರೆಸ್ ಶಾಸಕ ಅಶೋಕ್ ರೈ ತುಳುವಿನಲ್ಲೇ ಮನವಿ ಮಾಡಿದರು. ಇದಕ್ಕೆ ಸ್ಪೀಕರ್​ ತುಳುವಿನಲ್ಲೇ ಸ್ಪಷ್ಟನೆ ನೀಡಿದರು. ಈ ವೇಳೆ "ನೀವಿಬ್ಬರೇ ಮಾತನಾಡಿದ್ರೆ ಹೇಗೆ?. ನಮಗೆ ನಿಮ್ಮ ಭಾಷೆ ಹೇಗೆ ಗೊತ್ತಾಗಬೇಕು?" ಎಂದು ಹಲವು ಶಾಸಕರು ತಮಾಷೆ ಮಾಡಿದರು.

"ನೀವು ಏನು ಹೇಳಿದ್ದೀರಿ ಎಂಬುದು ನಮಗೆ ಗೊತ್ತಾಗಲಿಲ್ಲ. ನಾವೇನು ಮಂಗಳೂರು ಅಧಿವೇಶನದಲ್ಲಿದ್ದೇವಾ?" ಎಂದು ಪ್ರತಿಪಕ್ಷ ನಾಯಕ‌ ಆರ್.ಅಶೋಕ್ ಕಾಲೆಳೆದರು. ತುಳುವನ್ನು ರಾಜ್ಯದ ಎರಡನೇ ಹೆಚ್ಚುವರಿ ಭಾಷೆಯನ್ನಾಗಿ ಘೋಷಿಸುವಂತೆ ಶಾಸಕ ವೇದವ್ಯಾಸ ಕಾಮತ್ ಕೂಡ ಒತ್ತಾಯಿಸಿದರು.

ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಪರವಾಗಿ ಉತ್ತರಿಸಿದ ಸಚಿವ ಪ್ರಿಯಾಂಕ್ ಖರ್ಗೆ, "ಬೇರೆ ರಾಜ್ಯಗಳಲ್ಲಿ ಎರಡು ಭಾಷೆಗಳಿವೆ. ಬಿಹಾರದಲ್ಲೂ ಎರಡು ಭಾಷೆಗಳಿವೆ. ಅಶೋಕ್ ರೈ ಸ್ವಂತ ಖರ್ಚಿನಲ್ಲಿ ಈ ಕುರಿತು ಅಧ್ಯಯನ ಮಾಡಿದ್ದಾರೆ. ತುಳು ಭಾಷೆಯ ಪ್ರಾಚೀನತೆ, ಇತಿಹಾಸ ಗಮನದಲ್ಲಿದೆ. ನನ್ನ ಬಾಲ್ಯ ಸ್ನಹಿತ ಶ್ರವಣ್ ಎಂಬವರಿದ್ದರು. ಅವರಿಗೆ ಅವರ ತಾಯಿ ತುಳುವಿನಲ್ಲಿ ಬೈಯ್ಯುತ್ತಿದ್ದರು. ಹಾಗಾಗಿ ನೀವೇನು ಹೇಳಿದ್ದೀರಿ ಎಂದು ನನಗೂ ಸ್ವಲ್ಪ ಅರ್ಥವಾಗಿದೆ. ನಾನು ಇದರ ಪರವಾಗಿದ್ದೇನೆ. ನಾಳೆಯೇ ಈ ವಿಷಯವನ್ನು ಸಚಿವರ ಗಮನಕ್ಕೆ ತರುತ್ತೇನೆ. ಸಭೆ ಮಾಡಿ ನಿರ್ಧಾರ ಮಾಡುತ್ತೇವೆ" ಎಂದು ಉತ್ತರಿಸಿದರು.

ಇದನ್ನೂ ಓದಿ:ಬಜೆಟ್‌ನಲ್ಲಿ ಕರ್ನಾಟಕದ ನಿರ್ಲಕ್ಷ್ಯ: ನೀತಿ ಆಯೋಗದ ಸಭೆ ಬಹಿಷ್ಕರಿಸಲು ನಿರ್ಧರಿಸಿದ ಸಿಎಂ ಸಿದ್ದರಾಮಯ್ಯ - NITI Aayog Meeting

ABOUT THE AUTHOR

...view details