ಮಂಗಳೂರು: ನಗರದ ನಂತೂರಿನಲ್ಲಿ ಶುಕ್ರವಾರ ತಡರಾತ್ರಿ ನಡೆದ ಭೀಕರ ಅಪಘಾತದಲ್ಲಿ ನಿಯಂತ್ರಣ ತಪ್ಪಿದ ಕಾರೊಂದು ಹೆದ್ದಾರಿ ಡಿವೈಡರ್ ಮೇಲೆ ಹತ್ತಿ ಅಪ್ಪಚ್ಚಿಯಾದ ಪರಿಣಾಮ ಯುವಕನೊಬ್ಬ ಸಾವಿಗೀಡಾದ ಘಟನೆ ನಡೆದಿದೆ. ಬಿಜೆಪಿ ನಾಯಕಿ ಲಲಿತಾ ಸುಂದರ್ ಅವರ ಮೊಮ್ಮಗ, ತೊಕ್ಕೊಟ್ಟು ನಿವಾಸಿ ಶಮಿತ್ ಶೆಟ್ಟಿ (29) ಮೃತಪಟ್ಟ ಯುವಕ.
ನಿಯಂತ್ರಣ ತಪ್ಪಿ ಡಿವೈಡರ್ ಮೇಲೇರಿ ತಡೆ ಬೇಲಿಗೆ ಸಿಲುಕಿಕೊಂಡ ಕಾರು: ಬಿಜೆಪಿ ನಾಯಕಿ ಮೊಮ್ಮಗ ಸಾವು - Car Accident in Mangaluru - CAR ACCIDENT IN MANGALURU
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಿಜೆಪಿ ನಾಯಕಿ ಲಲಿತಾ ಸುಂದರ್ ಅವರ ಮೊಮ್ಮಗ ಶಮಿತ್ ಶೆಟ್ಟಿ ಸಾವನ್ನಪ್ಪಿದ್ದಾರೆ.
Published : Mar 23, 2024, 2:44 PM IST
ಶುಕ್ರವಾರ ರಾತ್ರಿ ಶಮಿತ್ ಮಂಗಳೂರಿನ ಸ್ನೇಹಿತನ ಮನೆಯಲ್ಲಿ ನಡೆದಿದ್ದ ದೈವದ ಕೋಲದಲ್ಲಿ ಭಾಗವಹಿಸಿ ತೊಕ್ಕೊಟ್ಟಿನ ಮನೆಗೆ ಹಿಂದಿರುಗುತ್ತಿದ್ದರು. ಈ ವೇಳೆ ನಂತೂರಿನಲ್ಲಿ ನಿಯಂತ್ರಣ ತಪ್ಪಿದ ಕಾರು ಡಿವೈಡರ್ ಮೇಲೆ ಮೇಲೇರಿ, ತಡೆಬೇಲಿಯ ಮೇಲೆ ಸಿಕ್ಕಿಕೊಂಡಿದೆ. ಪರಿಣಾಮ ಕಬ್ಬಿಣದ ತಡೆಬೇಲಿ ಮುರಿದು ಹೋಗಿದೆ. ಅಪಘಾತದ ಭೀಕರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಶಮಿತ್ ಮೃತಪಟ್ಟಿದ್ದಾರೆ. ಬೆಳಗ್ಗೆ ಜೆಸಿಬಿ ಮೂಲಕ ಕಾರನ್ನು ತೆರವುಗೊಳಿಸಲಾಗಿದೆ. ಈ ಬಗ್ಗೆ ಕದ್ರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ವಾರಾಣಸಿಗೆ ಹೊರಟ ಕಾರು ತೆಲಂಗಾಣದಲ್ಲಿ ಅಪಘಾತ: ಮೈಸೂರು ಮೂಲದ ಇಬ್ಬರು ಸಾವು