ಕರ್ನಾಟಕ

karnataka

ETV Bharat / state

ಕಾಶ್ಮೀರದಲ್ಲಿ 370ನೇ ವಿಧಿ ಮರುಜಾರಿ ಮಾಡಲು ರಾಹುಲ್ ಗಾಂಧಿಗೆ ಒಪ್ಪಿಗೆಯೇ: ವಿ.ಸುನೀಲ್‍ಕುಮಾರ್ ಪ್ರಶ್ನೆ - V Sunilkumar - V SUNILKUMAR

ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿಯನ್ನು ಮರುಜಾರಿ ಮಾಡಲು ಒಪ್ಪಿಗೆ ಇದೆಯೇ ಎಂದು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷ ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನೀಲ್‍ಕುಮಾರ್ ಪ್ರಶ್ನಿಸಿದ್ದಾರೆ.

ವಿ.ಸುನೀಲ್‍ಕುಮಾರ್
ವಿ.ಸುನೀಲ್‍ಕುಮಾರ್ (ETV Bharat)

By ETV Bharat Karnataka Team

Published : Aug 24, 2024, 5:37 PM IST

Updated : Aug 24, 2024, 5:44 PM IST

ವಿ.ಸುನೀಲ್‍ಕುಮಾರ್ (ETV Bharat)

ಬೆಂಗಳೂರು:ಜಮ್ಮುಕಾಶ್ಮೀರದಲ್ಲಿ 370ನೇ ವಿಧಿಯನ್ನು ಮರುಜಾರಿ ಮಾಡಲು ಒಪ್ಪಿಗೆ ಇದೆಯೇ ಎಂಬುದರ ಬಗ್ಗೆ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವು ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನೀಲ್‍ಕುಮಾರ್ ಒತ್ತಾಯಿಸಿದರು. ನಗರದ ಅರಮನೆ ಮೈದಾನದಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ದೇಶದಲ್ಲಿ ಎರಡು ಕಾನೂನು ಜಾರಿಗೊಳಿಸಲು ನಿಮ್ಮ ಒಪ್ಪಿಗೆ ಇದೆಯೇ ಎಂದು ಅವರು ಪ್ರಶ್ನಿಸಿದರು.

ನ್ಯಾಷನಲ್​ ಕಾನ್ಫರೆನ್ಸ್ ತನ್ನ ಪ್ರಣಾಳಿಕೆಯಲ್ಲಿ ಈಗಾಗಲೇ 370ನೇ ವಿಧಿ ಮರುಜಾರಿ ಮಾಡುವುದಾಗಿ ಹೇಳಿದೆ. ನ್ಯಾಷನಲ್​ ಕಾನ್ಫರೆನ್ಸ್ ಜೊತೆ ಚುನಾವಣೆ ಮೈತ್ರಿ ಮಾಡಿದ್ದರಿಂದ 370ನೇ ವಿಧಿ ಬಗ್ಗೆ ನಿಮ್ಮ ನಿಲುವೇನು ಎಂದು ಕಾಂಗ್ರೆಸ್ ಪಕ್ಷದವರು ಜನರಿಗೆ ತಿಳಿಸಬೇಕು. ದೇಶದಲ್ಲಿ ಎರಡು ಕಾನೂನು ತರುವ ಸಿದ್ಧತೆ ಮಾಡಿಕೊಳ್ಳುತ್ತಿದ್ದೀರಾ?. ದೇಶದಲ್ಲಿ ಎರಡು ಧ್ವಜ ಮಾಡಲು ಕಾಂಗ್ರೆಸ್ ಸಮ್ಮತಿಸುವುದೇ?. ಇದು ಕೇವಲ ಚುನಾವಣೆ ಹೊಂದಾಣಿಕೆ ಅಲ್ಲ. 370ನೇ ವಿಧಿಯನ್ನು ಬಿಜೆಪಿ ರದ್ದು ಮಾಡಿದ ಬಳಿಕ ಇವತ್ತು ಅದನ್ನು ಮರುಜಾರಿ ಮಾಡುವುದಾಗಿ ನ್ಯಾಷನಲ್​ ಕಾನ್ಫರೆನ್ಸ್ ಹೇಳಿದೆ. ಆ ಪಕ್ಷದ ಜೊತೆ ಕಾಂಗ್ರೆಸ್ ಪಕ್ಷ ಹೊಂದಾಣಿಕೆ ಮಾಡಿಕೊಂಡಿದ್ದು, ದೇಶದ ಜನರ ಹಲವು ಪ್ರಶ್ನೆಗಳಿಗೆ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವು ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.

370ನೇ ವಿಧಿಯನ್ನು ಬಿಜೆಪಿ ರದ್ದು ಮಾಡಿದ ಪರಿಣಾಮವಾಗಿ ಸ್ವಾತಂತ್ರ್ಯ ಬಂದ ಬಳಿಕ ಮೊದಲ ಬಾರಿಗೆ ಮೀಸಲಾತಿ ಆರಂಭವಾಗಿದೆ. ಹಾಗಿದ್ದರೆ ಜಮ್ಮು- ಕಾಶ್ಮೀರದಲ್ಲಿ ಕಾಂಗ್ರೆಸ್ಸಿನ ವಿರೋಧ ಇದೆಯೇ ಎಂದು ಕೇಳಿದರು. ಇದೆಲ್ಲ ಪ್ರಶ್ನೆಗೆ ಕಾಂಗ್ರೆಸ್ ಉತ್ತರ ಕೊಡಬೇಕು. ಚುನಾವಣೆ ಬಂದಾಗ ಯಾರು ಬೇಕಾದರೂ ನನ್ನ ಮಿತ್ರಪಕ್ಷ ಆಗಬಹುದೆಂದು ಅಂದುಕೊಂಡು ದೇಶದ ಹಿತಾಸಕ್ತಿಯನ್ನು ಕಾಂಗ್ರೆಸ್ ಮರೆತಿದೆ. ಇಲ್ಲಿನತನಕ ಅಲ್ಲಿದ್ದ ಸೈನಿಕರಿಗೆ ಕಲ್ಲು ತೂರಾಟವನ್ನು ಕಾಂಗ್ರೆಸ್ ಸಮರ್ಥಿಸುವುದೇ ಎಂದು ಪ್ರಶ್ನಿಸಿದರು.

ಅಲ್ಲಿರುವ ಯುವಕರ ಕೈಗೆ ಕಲ್ಲನ್ನು ಬಿಟ್ಟು ಲ್ಯಾಪ್‍ಟಾಪ್ ಕೊಟ್ಟಿದ್ದು ಬಿಜೆಪಿ ಸರ್ಕಾರದ ಅವಧಿಯಲ್ಲಿ. ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ದೊಡ್ಡ ಪ್ರಮಾಣದಲ್ಲಿ ಹದಗೆಟ್ಟಿದೆ. ಪೊಲೀಸರ ಬಗ್ಗೆ ಭಯ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಕೊಲೆ, ಸುಲಿಗೆ, ಅತ್ಯಾಚಾರಗಳು ದಿನನಿತ್ಯ ಜಾಸ್ತಿ ಆಗುತ್ತಿವೆ. ನಿನ್ನೆ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಅಮಲು ಪದಾರ್ಥ ಕೊಟ್ಟು ಯುವತಿಯ ಮೇಲೆ ಅತ್ಯಾಚಾರ ಮಾಡಿದ ಪ್ರಕರಣ ನಡೆದಿದೆ ಎಂದು ಕಿಡಿಕಾರಿದರು.

ಇದೊಂದು ಪೈಶಾಚಿಕ ಕೃತ್ಯ. ಅವರಿಗೆ ಡ್ರಗ್ಸ್ ಸಿಕ್ಕಿದ್ದು ಹೇಗೆ? ಇದರ ಹಿಂದೆ ಯಾರ ಕೈವಾಡ ಇದೆ?. ಹುಬ್ಬಳ್ಳಿ ಘಟನೆ ಆದಾಗ ಲವ್ ಜಿಹಾದ್ ಎಂದು ಹೇಳಿದಾಗ ಮುಖ್ಯಮಂತ್ರಿ, ಗೃಹ ಸಚಿವರು ಅದನ್ನು ಅಲ್ಲಗಳೆದಿದ್ದರು. ಡ್ರಗ್ಸ್ ನೀಡಿ ಅಪಹರಿಸಿ ದುಷ್ಕೃತ್ಯ ಎಸಗಿದವರ ಹಿಂದೆ ಯಾವ ಶಕ್ತಿ ಅಡಗಿದೆ?. ಇದನ್ನು ಸರ್ಕಾರ, ಜಿಲ್ಲಾಡಳಿತ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ:1.5 ಕೋಟಿ ಸದಸ್ಯತ್ವ ನೋಂದಣಿ ಗುರಿ: ಇಂದು ಅರಮನೆ ಮೈದಾನದಲ್ಲಿ ಬಿಜೆಪಿ ಕಾರ್ಯಾಗಾರ - BJP Workshop at Bengaluru

Last Updated : Aug 24, 2024, 5:44 PM IST

ABOUT THE AUTHOR

...view details