ಆಲಮಟ್ಟಿ ಹಿನ್ನೀರಿನಲ್ಲಿ ಹಕ್ಕಿಹಬ್ಬ ಬಾಗಲಕೋಟೆ: ಆಲಮಟ್ಟಿ ಜಲಾಶಯದ ಹಿನ್ನೀರಿಗೆ ಪ್ರತಿ ವರ್ಷ ವಿವಿಧ ಹಕ್ಕಿಗಳು ವಲಸೆ ಬರುತ್ತವೆ. ಈ ಹಿನ್ನೆಲೆ ಇಂತಹ ಹಕ್ಕಿಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುವ ಜೊತೆಗೆ ಪಕ್ಷಿಗಳ ಮಾಹಿತಿ ಕಲೆ ಹಾಕುವುದಕ್ಕೆ ಅರಣ್ಯ ಇಲಾಖೆ ವತಿಯಿಂದ ಮೂರು ದಿನಗಳ ಕಾಲ ಹಕ್ಕಿ ಹಬ್ಬವನ್ನು ಆಯೋಜಿಸಲಾಗಿತ್ತು. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳಿಂದ ಪರಿಸರ ಪ್ರೇಮಿಗಳು, ಪಕ್ಷಿಗಳ ಅಧ್ಯಯನ ಮಾಡುವವರು, ಸಂಶೋಧಕ ವಿದ್ಯಾರ್ಥಿಗಳು ಹಾಗೂ ಪಕ್ಷಿ ಪ್ರೇಮಿಗಳು ಸುಮಾರು ನೂರಕ್ಕೂ ಹೆಚ್ಚು ಜನರು ಆಗಮಿಸಿದ್ದರು.
ಆಲಮಟ್ಟಿ ಜಲಾಶಯದ ಹಿನ್ನೀರಿನ ಪ್ರದೇಶ ಆಗಿರುವ ಹೆರಕಲ್, ಚಿಕ್ಕಸಂಗಮ, ಮಲ್ಲಾಪೂರ, ಬೆಣ್ಣೂರು ಹಾಗೂ ಸೊಂಗಂದಿ ಪ್ರದೇಶದಲ್ಲಿ ಎಂಟು ತಂಡ ಮಾಡಿ ಪ್ರತಿ ಮುಂಜಾನೆ ಹಾಗೂ ಸಂಜೆ ಸಮಯದಲ್ಲಿ ಆಯಾ ಪ್ರದೇಶಕ್ಕೆ ಹೋಗಿ ಪೋಟೋಗ್ರಫಿ ಜೊತೆಗೆ ಯಾವ ದೇಶದಿಂದ ಪಕ್ಷಿಗಳು ವಲಸೆ ಬರುತ್ತಿವೆ, ಹೇಗೆ ಬರುತ್ತಿವೆ, ಈ ಪ್ರದೇಶಕ್ಕೆ ಏಕೆ ಬರುತ್ತಿವೆ ಎಂಬ ಚರ್ಚೆಯ ಜೊತೆಗೆ ವಿಡಿಯೋ ಮಾಡುವ ಮೂಲಕ ಹಕ್ಕಿ ಹಬ್ಬವನ್ನು ಆಚರಿಸಲಾಯಿತು.
ಈ ಪ್ರದೇಶಕ್ಕೆ ಪ್ರತಿ ವರ್ಷ ಡಿಸೆಂಬರ ಹಾಗೂ ಜನವರಿ ತಿಂಗಳಿನಲ್ಲಿ ಸಾಕಷ್ಟು ಪಕ್ಷಿಗಳು ವಲಸೆ ಬರುತ್ತವೆ. ಆಹಾರಕ್ಕಾಗಿ ಹಾಗೂ ಪಕ್ಷಿಗಳಿಗೂ ವಾಸಿಸಲು ಯಾವುದೇ ತೊಂದರೆ ಇಲ್ಲದ ಪ್ರದೇಶ ಆಗಿದ್ದರಿಂದ ವಿವಿಧ ದೇಶಗಳಿಂದ ಹಲವು ಬಗೆಯ ಪಕ್ಷಿಗಳು ಇಲ್ಲಿಗೆ ಆಗಮಿಸುತ್ತವೆ. ಇದನ್ನು ಸ್ಥಳೀಯರಿಗೆ ಮಾಹಿತಿ ನೀಡುವ ಜೊತೆಗೆ ಜನತೆಗೆ ಇಂತಹ ಪ್ರದೇಶ ಬಾಗಲಕೋಟೆ ಜಿಲ್ಲೆಯಲ್ಲಿ ಇದೆ ಎಂಬುದನ್ನು ತೋರಿಸಕೂಡಬೇಕಾಗಿದೆ ಎಂದು ಬೆಂಗಳೂರಿನಿಂದ ಬಂದ ಪಕ್ಷಿ ತಜ್ಞರಾದ ಸುಬ್ರಮಣ್ಯಂ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಪಕ್ಷಿ ತಜ್ಞ ಸುಬ್ರಮಣ್ಯಂ, ಈವರೆಗೆ 300 ಫ್ಲೆಮಿಂಗೊಸ್ ಪಕ್ಷಿಗಳು ಕಾಣಿಸಿದ್ದು, ಪಂಟೆಲ್ ಡಕ್, ಗಾರ್ಗೆನಿಸ್ ಸೇರಿದಂತೆ ಯೂರೋಪ ಕಡೆಯಿಂದ ಬಂದಿರುವಂತಹ ಪಕ್ಷಿಗಳು ಕಾಣಿಸಿಕೊಂಡಿವೆ. ಮಂಗೋಲಿಯಾದಿಂದ ಬರುವ ಪಟ್ಟೆ ಬಾತುಕೋಳಿಗಳು ಕೂಡ ಕಾಣಿಸಿವೆ. ಸದ್ಯ ನೀರು ಕಡಿಮೆಯಾದ ಕಾರಣ ಪಕ್ಷಿಗಳು ಕಾಣಸಿಗುತ್ತಿಲ್ಲ ಎಂದು ಹೇಳಿದರು. ಅರಣ್ಯ ಇಲಾಖೆ ಆಯೋಜಿಸಿರುವ ಹಕ್ಕಿ ಹಬ್ಬಕ್ಕೆ ಬಂದಿರುವುದು ಸಂತೋಷಕರ ಎಂದು ತಿಳಿಸಿದರು. ಈ ಪ್ರದೇಶದ ಪಕ್ಷಿಧಾಮ ಮಾಡಬೇಕು ಎಂದು ಹಿಂದಿನ ಸರ್ಕಾರ ಯೋಜನೆ ಹಾಕಿಕೊಂಡಿತ್ತು. ಆದರೆ ಅದು ಇನ್ನೂ ಕನಸಾಗಿಯೇ ಉಳಿದಿದೆ.
ಇದನ್ನೂ ಓದಿ:ನೇಮದ ವೇಳೆ ಎದೆನೋವಿನಿಂದ ಬಳಲಿ ಸಾವಿಗೀಡಾದ ತುಳುನಾಡಿನ ಪ್ರಸಿದ್ಧ ದೈವ ನರ್ತಕ