ಬೆಂಗಳೂರು:ಅನುಮತಿ ಇಲ್ಲದ ಕಾರಣಇಂಗ್ಲೆಂಡ್ನ ಖ್ಯಾತ ಗಾಯಕ ಮತ್ತು ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತ ಎಡ್ ಶಿರಾನ್ ಅವರ ಸ್ಟ್ರೀಟ್ ಸಂಗೀತ ಪ್ರದರ್ಶನವನ್ನು ಬೆಂಗಳೂರು ಪೊಲೀಸರು ನಿಲ್ಲಿಸಿದ ಘಟನೆ ಭಾನುವಾರ ಬೆಂಗಳೂರಿನಲ್ಲಿ ನಡೆದಿದೆ.
ನಗರದ ಚರ್ಚ್ ಸ್ಟ್ರೀಟ್ಗೆ ಬಂದ ಗಾಯಕ ಎಡ್ ಶಿರಾನ್, ಸಾರ್ವಜನಿಕವಾಗಿಯೇ ರಸ್ತೆ ಬದಿ ಹಾಡು ಹಾಡಲಾರಂಭಿಸುತ್ತಿದ್ದರು. ಮಾಹಿತಿ ಅರಿತ ಪೊಲೀಸರು ತಕ್ಷಣವೇ ಸ್ಥಳಕ್ಕೆ ಬಂದು ಸಂಗೀತ ಉಪಕರಣಗಳ ಕೇಬಲ್ ಸಂಪರ್ಕ ಕಡಿತಗೊಳಿಸಿ ಸ್ಥಗಿತಗೊಳಿಸಿದ್ದಾರೆ. ಎಡ್ ಶಿರಾನ್ ತಮ್ಮ ಖ್ಯಾತ ಹಾಡು ''Shape Of You'' ಹಾಡಲಾರಂಭಿಸಿದ ಕೆಲವೇ ಸೆಕೆಂಡುಗಳಲ್ಲಿ ಕಬ್ಬನ್ ಪಾರ್ಕ್ ಪೊಲೀಸರು ಸ್ಥಳಕ್ಕಾಗಮಿಸಿ ತಡೆದರು.
ಎಡ್ ಶೀರಾನ್ ಅವರ ತಂಡದಿಂದ ಚರ್ಚ್ ಸ್ಟ್ರೀಟ್‌ನಲ್ಲಿ ಪ್ರದರ್ಶನ ನೀಡಲು ಅನುಮತಿ ಕೇಳಲಾಗಿತ್ತು. ಆದರೆ ತೆರೆದ ಸ್ಥಳದಲ್ಲಿ ಹೆಚ್ಚು ಜನಸಂದಣಿವುಂಟಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟಾಗುವ ಸಾಧ್ಯತೆಯ ಕಾರಣದಿಂದ ಅನುಮತಿ ನಿರಾಕರಿಸಲಾಗಿತ್ತು. ಸದ್ಯ ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.