ಬೆಂಗಳೂರು: ಚೀಟಿ ಹೆಸರಿನಲ್ಲಿ ಹಣ ಪಡೆದು ವಂಚಿಸಿರುವ ಆರೋಪದಡಿ ದಂಪತಿಯನ್ನು ಬ್ಯಾಡರಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಸಿದ್ದಲಿಂಗಯ್ಯ ಹಾಗೂ ಪ್ರೇಮಾ ಕುಮಾರಿ ಬಂಧಿತ ದಂಪತಿ.
ಬೆಂಗಳೂರು: ಚೀಟಿ ಹೆಸರಿನಲ್ಲಿ ಚೀಟಿಂಗ್ ಆರೋಪ, ದಂಪತಿ ಬಂಧನ - Fraud Case - FRAUD CASE
ಚೀಟಿ ಹೆಸರಿನಲ್ಲಿ ಹಣ ಪಡೆದು ವಂಚಿಸಿರುವ ಆರೋಪ ಪ್ರಕರಣದಲ್ಲಿ ದಂಪತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು: ಚೀಟಿ ಹೆಸರಿನಲ್ಲಿ ಚೀಟಿಂಗ್ ಆರೋಪ, ದಂಪತಿ ಪೊಲೀಸ್ ವಶಕ್ಕೆ
Published : Apr 18, 2024, 3:42 PM IST
|Updated : Apr 18, 2024, 5:54 PM IST
ಪ್ರಕೃತಿನಗರದಲ್ಲಿ ಕೆಲವು ವರ್ಷಗಳಿಂದ ಶ್ರೀ ಸಾಯಿಲಕ್ಷ್ಮೀ ಕೃಪೆ ಚಿಟ್ (ರಿ) ಹೆಸರಿನಲ್ಲಿ ಬಂಧಿತ ದಂಪತಿ ಚೀಟಿ ನಡೆಸುತ್ತಿದ್ದರು. ಇತ್ತೀಚಿಗೆ ಚೀಟಿ ಹಣ ನೀಡದೇ ನಾಪತ್ತೆಯಾಗಿದ್ದು ಬ್ಯಾಡರಹಳ್ಳಿ ಠಾಣೆಗೆ ಈ ಬಗ್ಗೆ ದೂರುಗಳು ಬಂದಿದ್ದವು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಆರೋಪಿ ದಂಪತಿಯನ್ನು ಬಂಧಿಸಿದ್ದಾರೆ. ವಂಚನೆಗೊಳಗಾಗಿರುವ ನೂರಾರು ಜನ ಠಾಣೆಯ ಎದುರು ಜಮಾಯಿಸಿದ್ದರು. ಇದೀಗ ಪೊಲೀಸರು ಆರೋಪಿ ದಂಪತಿಯ ವಿಚಾರಣೆ ನಡೆಸುತ್ತಿದ್ದಾರೆ.
Last Updated : Apr 18, 2024, 5:54 PM IST